Business Loan: ಸ್ವಂತ ಬಿಸಿನೆಸ್ ಮಾಡುವವರಿಗೆ ಕೇಂದ್ರದಿಂದ ಸಿಗಲಿದೆ 10 ಲಕ್ಷ ರೂ, ಇಂದೇ ಯೋಜನೆಗೆ ಅರ್ಜಿ ಸಲ್ಲಿಸಿ.
ಸಾಮಾನ್ಯ ಜನರ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಲು ಸರ್ಕಾರದ ಹೊಸ ಯೋಜನೆ.
Pradhan Mantri Mudra Yojana: ದೇಶದ ಬಡ ಜನರಿಗೆ ಆರ್ಥಿಕವಾಗಿ ಬೆಂಬಲ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಯನ್ನು ರೂಪಿಸಿದೆ. ಈಗಾಗಲೇ ವಿವಿಧ ಹೂಡಿಕೆಯಾ ಯೋಜನೆಗಳನ್ನು ಪರಿಚಯಿಸಿರುವ ಕೇಂದ್ರ ಸರ್ಕಾರ ಸದ್ಯ ಜನರ ಸ್ವಂತ ವ್ಯವಹಾರ ಕನಸನ್ನು ನನಸು ಮಾಡಲು ಹೊಸ ಹೆಜ್ಜೆಯನ್ನು ಇಟ್ಟಿದೆ.
ಹಣಕಾಸಿನ ತೊಂದರೆಯಿಂದಾಗಿ ಸ್ವಂತ ಉದ್ಯೋಗದ ಯೋಜನೆಯನ್ನು ಕೈಬಿಟ್ಟವರಿಗೆ ಈ ಹೊಸ ಯೋಜನೆ ಸಹಾಯವಾಗಲಿದೆ. ಜನರ ಸ್ವಂತ ಉದ್ಯೋಗದ ಕನಸಿಗಾಗಿ ಕೇಂದ್ರ ಸರ್ಕಾರ ಈ ಹೊಸ ಸಾಲ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಅಷ್ಟಕ್ಕೂ ಕೇಂದ್ರ ಈ ಹೊಸ ಯೋಜನೆ ಯಾವುದು? ಯೋಜನೆಯಲ್ಲಿ ಎಷ್ಟು ಸಾಲ ಸೌಲಭ್ಯ ಸಿಗಲಿದೆ? ಎನ್ನುವ ಬಗ್ಗೆ ವಿವರ ಮಾಹಿತಿ ತಿಳಿಯೋಣ.
Pradhan Mantri Mudra Yojana
ಇದೀಗ ಕೇಂದ್ರದ ಮೋದಿ ಸರ್ಕಾರವು ಪಿಎಂ ಮುದ್ರಾ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಇದು ಎಲ್ಲರಿಗೂ ಲಾಭ ತಂದುಕೊಡುವ ಯೋಜನೆಯಾಗಿದೆ. ಇದರಿಂದ ಜನರಿಗೆ ಅಧಿಕ ಲಾಭ ಸಿಗಲಿದೆ. ಇನ್ನು ಜನರನ್ನು ಆರ್ಥಿಕವಾಗಿ ಮುಂದೆ ತರಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಸಾಲವನ್ನು ಆರಂಭಿಸಿದೆ. ಜನರ ಸ್ವಂತ ಉದ್ಯೋಗಕ್ಕೆ ಆರ್ಥಿಕವಾಗಿ ಬೆಂಬಲ ನೀಡಲು ಸರ್ಕಾರ ನಿರ್ಧರಿಸಿದೆ. ನೀವು ಕೂಡ ಸ್ವಂತ ಉದ್ಯೋಗದ ಕನಸನ್ನು ಕಂಡಿದ್ದಾರೆ ಈ ಯೋಜನೆಯಡಿ ಸಾಲದ ಸೌಲಭ್ಯವನ್ನು ಪಡೆದುಕೊಳ್ಳಿ.
ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯ ವಿವರ
ಕೇಂದ್ರದ ಮೋದಿ ಸರ್ಕಾರ ನಡೆಸುತ್ತಿರುವ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯ ಅಡಿಯಲ್ಲಿ ದೊಡ್ಡ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ಈ ಯೋಜನೆಯಲ್ಲಿ ಮೂರೂ ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೂರು ವಿಭಾಗದ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ.
ಮೊದಲನೆಯದಾಗಿ ಶಿಶು ಸಾಲದಡಿ 50 ಸಾವಿರ ರೂಪಾಯಿಗಳ ಖಾತರಿ ಸಾಲ ನೀಡಲಾಗುತ್ತಿದೆ. ಇದಲ್ಲದೆ ಕಿಶೋರ್ ಸಾಲದ ಅಡಿಯಲ್ಲಿ 5 ಲಕ್ಷದ ವರೆಗೆ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ದೊಡ್ಡ ಕೆಲಸ ಮಾಡಬೇಕೆಂದರೆ ತರುಣ್ ಯೋಜನೆಯಡಿ 10 ಲಕ್ಷ ರೂಪಾಯಿಯ ವರೆಗೆ ಸಾಲವನ್ನು ನೀಡಲಾಗುತ್ತಿದೆ.
ಸ್ವಂತ ಬಿಸಿನೆಸ್ ಮಾಡುವವರಿಗೆ ಕೇಂದ್ರದಿಂದ ಸಿಗಲಿದೆ 10 ಲಕ್ಷ ರೂ.
*ನೀವು ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಬಯಸಿದರೆ ಬ್ಯಾಂಕ್ ಅಧಿಕಾರಿಗಳಿಗೆ ವ್ಯವಹಾರದ ಮಾದರಿಯನ್ನು ತೋರಿಸಬೇಕಾಗುತ್ತದೆ.
*ವ್ಯವಹಾರದ ಮೂಲ ಮಾದರಿಯ ಆಧಾರದ ಮೇಲೆ ಬ್ಯಾಂಕ್ ನಿಮಗೆ 10 ಲಕ್ಷ ಸಾಲವನ್ನು ನೀಡುತ್ತದೆ.
*ನಿಮ್ಮ ವ್ಯವಹಾರಕ್ಕೆ ನೀವು ಕೇವಲ 25 % ಹಣವನ್ನು ಖರ್ಚು ಮಾಡಿದರೆ ಬ್ಯಾಂಕ್ ನಿಮಗೆ 75 % ಸಾಲವನ್ನು ನೀಡುತ್ತದೆ.
*ಇನ್ನು 24 ರಿಂದ 70 ವರ್ಷದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು.
*ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಸಹಾಯವಾಗುತ್ತದೆ.
*ಇನ್ನು mudra.org.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾಲದ ಅರ್ಜಿಯನ್ನು ಭಾರ್ತಿ ಮಾಡಿ ಹತ್ತಿರದಾ ಬಂಕ್ ಶಾಖೆಗೆ ಅರ್ಜಿಯನ್ನು ಸಲ್ಲಿಸಿದರೆ ಬಂಕ್ ನಿಮಗೆ ಸಾಲವನ್ನು ನೀಡುತ್ತದೆ.