Devaraj In Salar Movie: ಸಾಲಾರ್ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟ, ಪ್ರಭಾಸ್ ಗೆ ಸಾಥ್ ನೀಡಲಿದ್ದಾರೆ ಡೈನಾಮಿಕ್ ಹೀರೋ.

ಸಾಲಾರ್ ಚಿತ್ರದಲ್ಲಿ ನಟಿಸುವ ಬಗ್ಗೆ ಡೈನಾಮಿಕ್ ಹೀರೋ ದೇವರಾಜ್ ಹೇಳಿಕೊಂಡಿದ್ದಾರೆ.

Prabhas And Devaraj: ವಿಜಯ ಕಿರಂಗದೂರ್ (Vijaya Kirgandooru) ಅವರ ಹೊಂಬಾಳೆ ಫಿಲ್ಮ್ಸ್ (Hombale Films) ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ತೆಲಗು ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದೆ. ಸಾಲಾರ್ ಚಿತ್ರದಲ್ಲಿ ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನು ಸಾಲಾರ್ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Devaraj In Salar Movie
Image Source: India Today

ಸಾಲಾರ್ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟ
ಈಗಾಗಲೇ ಸಾಲಾರ್ ಚಿತ್ರದ (Salar Movie) ಕುರಿತು ಸಾಕಷ್ಟು ಅಪ್ಡೇಟ್ ಗಳು ಲಭಿಸಿದ್ದವು. ಇದೀಗ ಸಾಲಾರ್ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಸುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸಾಲಾರ್ ಚಿತ್ರದಲ್ಲಿ ಪ್ರಭಾಸ್ ಗೆ ಸಾಥ್ ನೀಡುತ್ತಿರುವ ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ಯಾರೆನ್ನುದರ ಬಗ್ಗೆ ಮಾಹಿತಿ ತಿಳಿಯೋಣ.

Devaraj In Salar Movie
Image Source: Asiant News

ಪ್ರಭಾಸ್ ಗೆ ಸಾಥ್ ನೀಡಲಿದ್ದಾರೆ ಡೈನಾಮಿಕ್ ಹೀರೋ
ಸಾಲಾರ್ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎನ್ನುವ ಬಗ್ಗೆ ಚಿತ್ರತಂಡ ಅಧಿಕ್ರತವಾಗಿ ಘೋಷಣೆ ಹೊರಡಿಸಿದೆ. ಇನ್ನು ಸಾಲಾರ್ ಚಿತ್ರದ ಚಿತ್ರೀಕರಣ ನಡೆಯುತ್ತಲೇ ಇದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಸಾಲಾರ್ ಚಿತ್ರ ತೆರೆಯ ಮೇಲೆ ಬರಲಿದೆ. ಇದೀಗ ಸಾಲಾರ್ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟರಾಗಿರುವ ಡೈನಾಮಿಕ್ ಹೀರೋ ದೇವರಾಜ್ ಕೂಡ ನಟಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡುವಾಗ ನಟ ದೇವರಾಜ್ ಅವರಿಗೆ ನಿಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ದೇವರಾಜ್ ಅವರು ಸಾಲಾರ್ ಚಿತ್ರದಲ್ಲಿ ನಟಿಸಲಿದ್ದೇನೆ ಎಂದು ಹೇಳಿದ್ದಾರೆ. ಸಾಲಾರ್ ಚಿತ್ರದಲ್ಲಿ ನಟಿಸುವ ಬಗ್ಗೆ ಡೈನಾಮಿಕ್ ಹೀರೋ ಹೇಳಿಕೊಂಡಿದ್ದಾರೆ. ಇನ್ನು ನಟ ದೇವರಾಜ್ ಅವರು ಈಗಾಗಲೇ ಬಹುಭಾಷಾ ನಟನಾಗಿ ಮಿಂಚಿದ್ದಾರೆ. ಸಾಲಾರ್ ಚಿತ್ರದಲ್ಲಿ ಪ್ರಭಾಸ್ ಗೆ ಸಾಥ್ ನೀಡಲು ಸ್ಯಾಂಡಲ್ ವುಡ್ ಡೈನಾಮಿಕ್ ಹೀರೋ ಸಜ್ಜಾಗಿದ್ದಾರೆ.

Devaraj In Salar Movie
Image Source: Times Of India

Join Nadunudi News WhatsApp Group

Join Nadunudi News WhatsApp Group