Dhanashree Scheme 2025 Complete Details: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡಲು ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಇದೀಗ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸ್ವಯಂ ಉದ್ಯೋಗಕ್ಕೆ ಪ್ರೋಸ್ಸಾಹ ನೀಡುವ ಉದ್ದೇಶದಿಂದ ಧನಶ್ರೀ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರು 30000 ರೂ. ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಗೆ ಯಾರು ಯಾರು ಅರ್ಜಿ ಸಲ್ಲಿಸಬಹುದು..? ಯಾವ ದಾಖಲೆಗಳು ಅಗತ್ಯವಾಗಿ ಬೇಕು..? ಮತ್ತು ಅರ್ಜಿ ಸಲ್ಲಿಸುದು ಹೇಗೆ..? ಅನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳೋಣ.
ಧನಶ್ರೀ ಯೋಜನೆ
ಕರ್ನಾಟಕ ರಾಜ್ಯ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಧನಶ್ರೀ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ 18 ರಿಂದ 55 ವರ್ಷ ಒಳಗಿನ ಮಹಿಳೆಯರಿಗೆ, ಅದರಲ್ಲಿ ವಿಶೇಷವಾಗಿ HIV ಸೋಂಕಿತ ಮಹಿಳೆಯರಿಗೆ, ವಿಧವೆಯರಿಗೆ, ನಿರ್ಗತಿಕ ಮಹಿಳೆಯರಿಗೆ, ಮತ್ತು ಅಂಗವಿಕಲರಿಗೆ ಆದಾಯ ಗಳಿಸುವ ಚಟುವಟಿಕೆಯಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ದುರ್ಬಲ ವರ್ಗದ ಮಹಿಳೆಯರ ಜೀವನವನ್ನು ಸರಿಪಡಿಸುವುದು ಈ ಯೋಜನೆಯ ಮೂಲ ಉದ್ದೇಶ ಆಗಿದೆ.
ಧನಶ್ರೀ ಯೋಜನೆಯ ಅರ್ಹತೆ
* HIV ಸೋಂಕಿತ ಮಹಿಳೆಯರು
* ಕುಟುಂಬದ ವಾರ್ಷಿಕ ಆದಾಯ ಮಿತಿಯಲ್ಲಿರಬೇಕು
* 18 ರಿಂದ 55 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ
* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* HIV ಸೋಂಕು ದೃಢೀಕರಣ ಪತ್ರ
* ಬ್ಯಾಂಕ್ ಪಾಸ್ ಬುಕ್
* ಭಾವಚಿತ್ರ
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು ಸೇವಾ ಸಿಂಧೂ ಪೋರ್ಟಲ್ (https://sevasindhu.karnataka.gov.in/Sevasindhu/Kannada?ReturnUrl=%2F) ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅಥವಾ ಗ್ರಾಂ ಒನ್, ಬೆಂಗಳೂರು ಒನ್, ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ KSWDC ಕಚೇರಿ ಅಥವಾ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಥವಾ https://kswdc.karnataka.gov.in/ ಗೆ ಭೇಟಿ ನೀಡಿ. ಇದೀಗ 2025-26 ನೇ ಸಾಲಿನ ಧನಶ್ರೀ ಯೋಜನೆಗೆ ಅರ್ಜಿ ಆವ್ಹಾನ ಮಾಡಲಾಗಿದೆ. ಅರ್ಹ ಮಹಿಳೆಯರು ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಯ ಪ್ರಯೋಜನಗಳು
* ಹಣವನ್ನು ನೇರವಾಗಿ ಫಲಾನುಭವಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ
* ಸ್ವಯಂ ಉದ್ಯೋಗದ ಮೂಲಕ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಬಹುದು.
* HIV ಸೋಂಕಿತ ಮಹಿಳೆಯರು ಸಮಾಜದಲ್ಲಿ ಗೌರವಯುತ ಜೀವನ ನೆಡೆಸಲು ಸಹಾಯಕವಾಗಿದೆ.
* ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.
* ಆಯ್ಕೆಯಾದ ಅರ್ಜಿದಾರರಿಗೆ ಕಡ್ಡಾಯ ತರಬೇತಿ ನೀಡಲಾಗುತ್ತದೆ
ಯೋಜನೆಯ ಉದ್ದೇಶ
ಮಹಿಳೆಯರು ಸಣ್ಣ ವ್ಯವಹಾರಗಳನ್ನು ಪ್ರಾರಂಭಿಸಲು ಸಹಾಯ ಮಾಡುವುದು, ಜೀವನೋಪಾಯ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪ್ರೇರೇಪಿಸುವುದು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಇದರ ಮುಖ್ಯ ಉದ್ದೇಶ ಆಗಿದೆ. ಧನಶ್ರೀ ಯೋಜನೆಯ ಮೂಲಕ 30000 ಸಹಾಯಧನ ಪಡೆದುಕೊಂಡು, ಈ ಸಹಾಯಧನದ ಮೂಲಕ ಸಣ್ಣ ವ್ಯವಹಾರವನ್ನು ಆರಂಭಿಸಿ, ಸ್ವಾವಲಂಬಿ ಜೀವನವನ್ನು ನೆಡೆಸಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

