ಕ್ರಿಕೆಟ್ ಅಂದರೆ ಯಾರಿಗೆ ತಾನೇ ಇಷ್ಟವಲ್ಲ ಹೇಳಿ. ಹೌದು ಚಿಕ್ಕ ಮಕ್ಕಳಿಂದ ಮುದುಕರ ತನಕ ಕ್ರಿಕೆಟ್ ಆಟವನ್ನ ಇಷ್ಟಪಡುತ್ತಾರೆ. ಸದ್ಯ ಐಪಿಎಲ್ ನಡೆಯುತ್ತಿದ್ದು ನಿನ್ನೆ ಡೆಲ್ಲಿ ತಂಡದ ವಿರುದ್ಧ ಧೋನಿ ಪಡೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶ ಮಾಡಿತು. ಇನ್ನು ಇಂದು ಬೆಂಗಳೂರು ಮತ್ತು ಕೋಲ್ಕತ್ತಾ ವಿರುದ್ಧ ಪಂದ್ಯ ನಡೆಯುತ್ತಿದ್ದು ಜನರ ಬಹಳ ಕಾತುರದಲ್ಲಿ ಪದ್ಯವನ್ನ ವೀಕ್ಷಣೆ ಮಾಡಲು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ನಿನ್ನೆ ಪಂದ್ಯ ಕೊನೆಯಲ್ಲಿ ಬಹಳ ರೋಚಕ ಹಂತವನ್ನ ತಲುಪಿದ್ದು ಭಾರತ ತಂಡದ ಮಾಜಿ ನಾಯಕ ದೇಶಕಂಡ ಹೆಮ್ಮೆಯ ಆಟಗಾರ ಚನೈ ತಂಡದ ನಾಯಕ ಕೊನೆಯ ಓವರ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವುದರ ಮೂಲಕ ತನ್ನ ತಂಡವನ್ನ ಗೆಲ್ಲಿಸಿಕೊಟ್ಟರು ಎಂದು ಹೇಳಬಹುದು.
ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿದ್ದು ಯಾರು ಗೆಲ್ಲುತ್ತಾರೆ ಅನ್ನುವುದನ್ನ ಊಹೆ ಮಾಡಲು ಕೂಡ ಸಾಧ್ಯವಾಗಿರಲಿಲ್ಲ ಮತ್ತು ಮೈದಾನದಲ್ಲಿ ಅಭಿಮಾನಿಗಳು ಕಣ್ಣು ಮುಚ್ಚದೆ ಪಂದ್ಯವನ್ನ ವೀಕ್ಷಣೆ ಮಾಡುತ್ತಿದ್ದರು. ಇನ್ನು ಈ ಪಂದ್ಯವನ್ನ ಪುಟ್ಟ ಹುಡುಗಿಯೊಬ್ಬಳು ಮೈದಾನದಲ್ಲಿ ವೀಕ್ಷಣೆ ಮಾಡುತ್ತಿದ್ದು ಚನೈ ತಂಡ ಗೆಲುವು ಸಾಧಿಸಿದ ಕೂಡಲೇ ಕಣೀರು ಹಾಕುವುದರ ಮೂಲಕ ತಮ್ಮ ಖುಷಿಯನ್ನ ವ್ಯಕ್ತಪಡಿಸಿದಳು. ಆ ಪುಟ್ಟ ಹುಡುಗಿ ಕಣ್ಣೀರು ಹಾಕಿ ಖುಷಿ ಆಚರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಯಿತು ಎಂದು ಹೇಳಬಹುದು. ಹೌದು ಚೆನ್ನೈ 4 ವಿಕೆಟ್ಗಳ ಗೆಲುವು ಸಾಧಿಸಿ ಐಪಿಎಲ್ 2021 ಫೈನಲ್ಗೆ ತಲುಪುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಇಬ್ಬರು ಪುಟ್ಟ ಮಕ್ಕಳು ಖುಷಿಯಲ್ಲಿ ಕಣ್ಣಿರು ಸುರಿಸಿದರು.
ಇದನ್ನು ಗಮನಿಸಿದ ನಾಯಕ ಎಂ ಎಸ್ ಧೋನಿ ಪಂದ್ಯ ಮುಗಿದ ಬಳಿಕ ಸಿಎಸ್ಕೆ ಕಟ್ಟಾ ಅಭಿಮಾನಿಗಳಿಗೆ ವಿಶೇಷ ಉಡುಗೊಡೆಯೊಂದನ್ನು ನೀಡಿದ್ದಾರೆ. ಹೌದು ಸ್ನೇಹಿತರೆ ಬಾಲ್ನಲ್ಲಿ ತನ್ನ ಆಟೋಗ್ರಾಫ್ ಬರೆದು ಸ್ಟೇಡಿಯಂನಲ್ಲಿದ್ದ ಮಕ್ಕಳಿಗೆ ಚೆಂಡನ್ನು ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮಕ್ಕಳು ಅಂದರೆ ಧೋನಿಗೆ ಎಲ್ಲಿಲ್ಲದ ಅಚ್ಚುಮೆಚ್ಚು ಮತ್ತು ಅಪ್ಪಟ ಚನೈ ತಂಡದ ಅಭಿಮಾನಿಯಾದ ಪುಟ್ಟ ಅಭಿಮಾನಿಗೆ ಧೋನಿ ಮನಸೋತಿದ್ದು ಮಕ್ಕಳಿಗೆ ಸಹಿ ಮಾಡಿದ ಬಾಲ್ ಕೊಡುವುದರ ಮೂಲಕ ಮಕ್ಕಳಿಗೆ ಖುಷಿಪಡಿದರು ಎಂದು ಹೇಳಬಹುದು.
ಇನ್ನು ಕೊನೆಯ ಒವರ್ ನಲಿ ಧೋನಿ ಆಟವನ್ನ ನೋಡಿದ ವಿರಾಟ್ ಕೊಹ್ಲಿ ಅವರು ಕಿಂಗ್ ಐಸ್ ಬ್ಯಾಕ್ ಎಂದು ಹೇಳಿದ್ದಾರೆ. ಹಲವು ಪಂದ್ಯಗಳಿಂದ ವೈಫಲ್ಯವನ್ನ ಅನುಭವಿಸುತ್ತಿದ್ದ ಧೋನಿಯವರ ಆಟಕ್ಕೆ ನಿನ್ನೆ ದೇಶವೇ ಮೆಚ್ಚುಗೆಯನ್ನ ವ್ಯಕ್ತಪಡಿಸಿದೆ. ಧೋನಿ ನಾಯಕತ್ವದ ಚನೈ ತಂಡ ನಿನ್ನೆ ಗೆಲುವನ್ನ ಸಾಧಿಸುವುದರ ಮೂಲಕ ಐಪಿಎಲ್ ನಲ್ಲಿ 9 ನೇ ಭಾರಿ ಫೈನಲ್ ಪ್ರವೇಶವನ್ನ ಮಾಡಿದೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ಭಾರಿ ಯಾರು ವಿನ್ ಆಗಬಹುದು ಅನ್ನುವುದರ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.