ಧೋನಿ ಯಾವಾಗಲು 7 ನಂಬರ್ ಜರ್ಸಿ ಧರಿಸುವುದು ಯಾಕೆ, 7 ರ ಹಿಂದಿನ ಸೀಕ್ರೆಟ್ ಏನು ಗೊತ್ತಾ, ಧೋನಿ ಹೇಳಿದ್ದೇನು ನೋಡಿ.

ನಮ್ಮ ದೇಶದಲ್ಲಿ ಅತೀ ಹೆಚ್ಚಿನ ಜನರ ಅಚ್ಚು ಮೆಚ್ಚಿನ ಆಟವೆಂದರೆ ಅದೂ ಕ್ರಿಕೆಟ್ ಆಟವೆಂದು ಹೇಳಬಹುದು. ದೇಶದಲ್ಲಿ ಐಪಿಎಲ್ ಶುರುವಾದ ನಂತರ ಅದೆಷ್ಟೋ ಜನರು ಕ್ರಿಕೆಟ್ ಹುಚ್ಚರಾದರು ಎಂದು ಹೇಳಬಹುದು. ಇನ್ನು ನಮ್ಮ ದೇಶದ ಕ್ರಿಕೆಟ್ ತಂಡದ ಹೆಮ್ಮೆಯ ನಾಯಕರಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಅದೆಷ್ಟೋ ಪ್ರಶಸ್ತಿಗಳನ್ನ ನಮ್ಮದೇಶಕ್ಕೆ ತಂದುಕೊಟ್ಟ ಮಹೇಂದ್ರ ಸಿಂಗ್ ಧೋನಿ ಅವರಿಗೆ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗ ಇದೆ. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಮಹೇಂದ್ರ ಸಿಂಗ್ ಧೋನಿ ಅವರು ಯಾವುದೇ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡರು ಕೂಡ ಅವರ ಜೆರ್ಸಿ ನಂಬರ್ 7 ಆಗಿರುತ್ತದೆ.

ಅದೆಷ್ಟೋ ಜನರು ಮಹೇಂದ್ರ ಸಿಂಗ್ ಧೋನಿ ಅವರ ಲಕ್ಕಿ ನಂಬರ್ 7 ಎಂದು ಭಾವಿಸಿಕೊಂಡಿದ್ದಾರೆ. ಅದೆಷ್ಟೋ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಅವರ ಬಳಿ ನೀವು ಯಾಕೆ ಯಾವಾಗಲೂ 7 ನಂಬರ್ ಜರ್ಸಿಯನ್ನ ಹಾಕುತ್ತಿರಿ ಅನ್ನುವ ಪ್ರಶ್ನೆಯನ್ನ ಕೇಳಿದ್ದರು. ಇನ್ನು ಈಗ ಸ್ವತಃ ಮಹೇಂದ್ರ ಸಿಂಗ್ ಧೋನಿ ಅವರೇ ತಾನು ಯಾಕೆ ಸದಾ 7 ನಂಬರ್ ಜರ್ಸಿಯನ್ನ ಹಾಕುತ್ತೇನೆ ಮತ್ತು 7 ನಂಬರ್ ಹಿಂದಿನ ರಹಸ್ಯ ಏನು ಅನ್ನುವುದನ್ನ ಹೇಳಿದ್ದಾರೆ. ಹಾಗಾದರೆ ಮಹೇಂದ್ರ ಸಿಂಗ್ ಧೋನಿ ಅವರ 7 ನಂಬರ್ ಜರ್ಸಿ ಹಿಂದಿನ ರಹಸ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ತಲುಪಿಸಿ.

dhoni jersey

ಹೌದು ನಮಗೆ ಜರ್ಸಿ ನಂಬರ್​ 7 ಅಂದಾಗಲೇ ಥಟ್ಟನೇ ನಮಗೆ ನೆನಪಾಗುವುದು ಟೀಮ್​ ಇಂಡಿಯಾ ಮಾಜಿ ನಾಯಕ ಎಂ.ಎಸ್​. ಧೋನಿ ಹೆಸರು. 2007 ರಲ್ಲಿ ಕ್ರಿಕೆಟ್ ತಂಡಕ್ಕೆ ಕಾಲಿಟ್ಟ ದಿನದಿಂದ ಧೋನಿ ಅವರ ಜರ್ಸಿ ನಂಬರ್ 7 ಆಗಿದೆ. ಇನ್ನು ಐಪಿಎಲ್​ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈ ಸೂಪರ್ಸ್​ ಕಿಂಗ್​ ತಂಡ ಅಭಿಮಾನಿಗಳಿಗಾಗಿ ನಡೆಸಿದ ಈವೆಂಟ್​ ನಲ್ಲಿ ಫ್ಯಾನ್ಸ್​ ಜತೆ ಕ್ಯಾಪ್ಟನ್ ಎಂ.ಎಸ್​.​ ಧೋನಿ ಸಂವಾದ ನಡೆಸಿದರು ಮತ್ತು ಆದರಲ್ಲಿ 7 ನಂಬರ್ ಜರ್ಸಿಯ ರಹಸ್ಯವನ್ನ ಧೋನಿಯವರು ಹೇಳಿದರು.

7 ನಂಬರ್ ಜರ್ಸಿಯ ಹಿಂದೆ ಯಾವುದೇ ರೀತಿಯ ಮೂಢನಂಬಿಕೆ ಇಲ್ಲ ಮತ್ತು ಅದೆಷ್ಟೋ ಜನರು 7 ನಂಬರ್ ನನ್ನ ಲಕ್ಕಿ ನಂಬರ್ ಎಂದು ಭಾವಿಸಿದ್ದರು, ಆದರೆ ಅದೆಲ್ಲ ಸುಳ್ಳು ಎಂದು ಹೇಳಿದ್ದಾರೆ ಧೋನಿ. ನಾನು ಜುಲೈ 7 ರಂದು ಜನಿಸಿದೆ. ಜುಲೈ ಕೂಡ ಏಳನೇ ತಿಂಗಳಾಗಿದೆ. ಹೀಗಾಗಿ ನಾನು ಜರ್ಸಿ ನಂಬರ್ 7ನ್ನು ಆಯ್ಕೆ ಮಾಡಿಕೊಂಡೆ ಎಂದು ಕಾರಣವನ್ನು ಧೋನಿಯವರು ಅಭಿಮಾನಿಗಳಿಗೆ ತಿಳಿಸಿದರು. 7 ನಂಬರ್ ನನ್ನ ಹೃದಯಕ್ಕೆ ಬಹಳ ಹತ್ತಿರ ಇರುವ ಸಂಖ್ಯೆಯಾದ ಕಾರಣ ಈ ಸಂಖ್ಯೆಯನ್ನ ನನ್ನ ಜರ್ಸಿ ಮೇಲೆ ಹಾಕಿಕೊಂಡಿದ್ದೇನೆ ಎಂದು ಧೋನಿ ಹೇಳಿದರು. ಯಾವುದು ಉತ್ತಮ ಸಂಖ್ಯೆ ಮತ್ತು ಇನ್ನಿತರ ವಿಭಿನ್ನ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಂಬರ್​ ಪಡೆಯುವ ಬದಲು ನನ್ನ ಜನ್ಮ ದಿನಾಂಕವನ್ನು ಸಂಖ್ಯೆಯಾಗಿ ಬಳಸಬೇಕೆಂದು ನಾನು ಭಾವಿಸಿದೆ ಎಂದು ಧೋನಿ ಹೇಳಿದರು.

Join Nadunudi News WhatsApp Group

dhoni jersey

Join Nadunudi News WhatsApp Group