Ads By Google

Dhruva Sarja Martin: ರಿಷಬ್, ಸುದೀಪ್, ಯಶ್ ಜೊತೆ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ ನಟ ಧ್ರುವ ಸರ್ಜಾ.

Dhruva Sarja Martin Movie Teaser

Image Source: India Today

Ads By Google

Dhruva Sarja Martin Movie Teaser: ಕನ್ನಡದ ಖ್ಯಾತ ನಟ ದ್ರುವ ಸರ್ಜಾ (Dhruva Sarja)ಇದೀಗ ಸುದ್ದಿಯಲ್ಲಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ (Martin) ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವುದಕ್ಕೆ ರೆಡಿ ಆಗಿದ್ದಾರೆ.

ಮಾರ್ಟಿನ್ ಸಿನಿಮಾದ ಪೋಸ್ಟ್ ಮೂಲಕ ನಟ ದ್ರುವ ಸರ್ಜಾ ಈಗಾಗಲೇ ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Image Source: India Today

ಮಾರ್ಟಿನ್ ಸಿನಿಮಾದ ಟೀಸರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟ ಧ್ರುವ ಸರ್ಜಾ ಅವರ ಈ ಮಾತುಗಳು ಸಖತ್ ವೈರಲ್ ಆಗಿದೆ.

ರಿಷಬ್, ಸುದೀಪ್ ಯಶ್ ಜೊತೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ನಟ ದ್ರುವ ಸರ್ಜಾ
ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆ ವೇಳೆ ಅವರ ಸಿನಿಮಾ ಇಂಡಸ್ಟ್ರಿಗೆ ಒಳಗೆ ನಡೆಯುವ ಸ್ಪರ್ಧೆ ಬಗ್ಗೆ ಪ್ರಶ್ನಿಸಲಾಗಿದೆ.

Image Source: India Today

ರಿಷಬ್ ಶೆಟ್ಟಿ, ಸುದೀಪ್ ಹಾಗು ಯಶ್ ಕುರಿತು ನಟ ದ್ರುವ ಸರ್ಜಾಅವರಲ್ಲಿ ಕೇಳಲಾಯಿತು. ಕೆಲವು ಪ್ರಶ್ನೆಗಳಿಗೆ ನಟ ದ್ರುವ ಸರ್ಜಾ ಉತ್ತರಿಸಿದ್ದಾರೆ.

ಅವರು ನನ್ನ ಸ್ನೇಹಿತರು. ನಾನು ಸ್ನೇಹಿತರ ಜೊತೆ ಸ್ಪರ್ಧೆ ಮಾಡುವುದಿಲ್ಲ. ಅವರೆಲ್ಲರೂ ನನ್ನ ಸಹದ್ಯೋಗಿಗಳು. ನಾನು ಅವರೊಂದಿಗೆ ಸ್ಪರ್ಧಿಸಲು ಇಷ್ಟಪಡುವುದಿಲ್ಲ. ನಾನು ನನ್ನೊಂದಿಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

Image Source: India Today

 

ಕನ್ನಡ ಖ್ಯಾತ ನಟ ಧ್ರುವ ಸರ್ಜಾ

ಆಯಕ್ಷನ್ ಹಾಗು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಯಾವ ರೀತಿಯ ಸಿನಿಮಾ ಇಷ್ಟ ಪಡುತ್ತೀರಿ ಎಂದು ಧ್ರುವ ಸರ್ಜಾ ಬಳಿ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ನಟ ನಾನು ಹೆಚ್ಚು ರೋಮ್ಯಾನ್ಸ್ ಇರುವ ಸಿನಿಮಾ ಮಾಡಲ್ಲ. ನಾನು ನನ್ನ ಅಭಿಮಾನಿಗಳು ಅವರ ಮಕ್ಕಳೊಂದಿಗೆ ಕುಳಿತು ನನ್ನ ಸಿನಿಮಾ ನೋಡಲಿ ಎಂದು ಬಯಸುತ್ತೇನೆ ಎಂದಿದ್ದಾರೆ.

Image Source: India Today
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field