Dhruva Sarja Daughter Photo: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ ದ್ರುವ ಸರ್ಜಾ ಪತ್ನಿ ಪ್ರೇರಣಾ.

Dhruva Sarja Doughter Photo: ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ (Action Prince Dhruva Sarja) ಇದೀಗ ಕೇಡಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟ ದ್ರುವ ಸರ್ಜಾ ಸೋಶಿಯಲ್ ಮಿಡಿಯಾಡದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.

ಇನ್ನು ದ್ರುವ ಸರ್ಜಾ ಸಿನಿಮಾದ ಜೊತೆಗೆ ತಮ್ಮ ಸಾಂಸಾರಿಕ ಜೀವನದಲ್ಲೂ ಕೂಡ ಬ್ಯುಸಿ ಆಗಿದ್ದಾರೆ. ಇದೀಗ ದ್ರುವ ಸರ್ಜಾ ಅವರ ಪತ್ನಿ ಪ್ರೇರಣಾ (Prerana) ಸೋಶಿಯಲ್ ಮೀಡಿಯಾದಲ್ಲಿ (Social Media) ಅಭಿಮಾನಿಗಳಿಗೆ ತಮ್ಮ ಮಗಳನ್ನು ಪರಿಚಯಿಸಿದ್ದಾರೆ.

Dhruva Sarja Daughter Photo
Image Source: India Today

ಮಗಳ ಮುಖ ಪರಿಚಯಿಸಿದ ದ್ರುವ ಸರ್ಜಾ ಪತ್ನಿ
ದ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಹೆಣ್ಣು ಮಗು ಜನಿಸಿದೆ. ಅಕ್ಟೋಬರ್ 2 ರಂದು ಪ್ರೇರಣಾ ತಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಬರೆದುಕೊಂಡಿದ್ದರು.

ಇದೀಗ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ದ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಮಗುವಿನ ಮುಖವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟ ನಟಿಯರು ತಮ್ಮ ಮಕ್ಕಳ ಮುಖವನ್ನು ತುಂಬಾ ಸಮಯ ಕಳೆದ ಮೇಲೆ ಪರಿಚಯಿಸುತ್ತಾರೆ.

Dhruva Sarja Daughter Photo
Image Source: India Today

ಇದೀಗ ದ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಮಗಳ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ದ್ರುವ ಸರ್ಜಾ ಅವರ ಮಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

ಅಭಿಮಾನಿಗಳ ಆಸೆ ಈಡೇರಿಸಿದ ಪ್ರೇರಣಾ
ದ್ರುವ ಸರ್ಜಾ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮಗುವಿನ ಮುಖವನ್ನು ಕಾಣಲು ಕೌತುಕರಾಗಿದ್ದರು. ಸಾಕಷ್ಟು ಬಾರಿ ಮಗಳ ಮುಖವನ್ನು ತೋರಿಸಿ ಎನ್ನುವ ಬಯಕೆ ದಂಪತಿಗಳ ಮುಂದೆ ಇಟ್ಟಿದ್ದರು.

Dhruva Sarja Daughter Photo
Image Source: India Today

 

ಇದೀಗ ದ್ರುವ ಸರ್ಜಾ ಪತ್ನಿ ಪ್ರೇರಣಾ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ನಾಲ್ಕೂವರೆ ತಿಂಗಳ ಬಳಿಕ ತಮ್ಮ ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೆ ಮಗಳಿಗೆ ನಿಮ್ಮೆಲ್ಲರ ಪ್ರೀತಿ ಇರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

Dhruva Sarja Daughter Photo
Image Source: India Today

Join Nadunudi News WhatsApp Group