Ads By Google

Dhruva Sarja: ಧ್ರುವ ಸರ್ಜಾ ಮದುವೆ ಕಾರ್ಡ್ ನಲ್ಲಿ ಕೊನೆ ಕ್ಷಣದಲ್ಲಿ ಈ ರೀತಿ ಬರೆಸಿದ್ದರು, ಇಲ್ಲಿದೆ ಕಾರ್ಡ್.

dhruva sarja marriage card photos (1)
Ads By Google

Dhruva Sarja: ನಟ ಧ್ರುವ 2012 ರಲ್ಲಿ ತೆರೆಕಂಡ ಅದ್ಧೂರಿ ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು.

ನಂತರ 2013 ರಲ್ಲಿ ಬಿಡುಗಡೆಗೊಂಡ ‘ಬಹುದ್ಧೂರ್’ ಚಿತ್ರದಲ್ಲಿ ರಾಧಿಕಾ ಪಂಡಿತ್ (Radhika Pandit) ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು.

2017ರಲ್ಲಿ ತೆರೆಗೆ ಬಂದ ‘ಭರ್ಜರಿ’ (Bharjari Movie) ಚಿತ್ರ ಕೂಡ ಶತದಿನ ಪೂರೈಸಿತು. ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾಹಿಟ್ ಆಗಿವೆ.

ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ಸ್ ಎನಿಸಿಕೊಳ್ಳುವಂತಹ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣ ಇತ್ತೀಚಿಗಷ್ಟೇ ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಮಗು ಆಗಮಿಸಲಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡು ಬಹಳನೇ ಸಂತೋಷವನ್ನು ವ್ಯಕ್ತಪಡಿಸಿದರು.

ಅದ್ದೂರಿಯಾಗಿ ಸೀಮಂತ ಶಾಸ್ತ್ರ

ಅಲ್ಲದೆ ಮೊನ್ನೆ ಅಷ್ಟೇ ಪ್ರೇರಣ ರವರಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಕೂಡ ಮಾಡಲಾಯಿತು. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣ ರವರ ಮದುವೆ ಲಗ್ನಪತ್ರಿಕೆ ಬಾರಿ ಸಂಚಲನ ಸೃಷ್ಟಿಸುತ್ತಿದೆ. ಹಾಗಾದ್ರೆ ಅಂತಹ ವೈರಲ್ ವಿಚಾರ ಇವರ ಮದುವೆ ಲಗ್ನ ಪತ್ರಿಕೆಯಲ್ಲಿ ಏನಿದೆ.

ಲಗ್ನಪತ್ರಿಕೆ ಬಾರಿ ಸಂಚಲನ

ಹೌದು ಗೆಳೆಯರೇ 2018 ಡಿಸೆಂಬರ್ ನಲ್ಲಿ‌ ತನ್ನ ಬಾಲ್ಯದ ಗೆಳತಿ ಪ್ರೇರಣ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಂತಹ ಧ್ರುವ ಸರ್ಜಾ ತಮ್ಮ ಎಂಗೇಜ್ಮೆಂಟ್ ರಿಂಗ್ನಿ ನಿಂದಲೇ ಎಲ್ಲರ ಗಮನಸೆಳೆದಿದ್ದರು.

Image Credit: Times Of India

ಬಾಲ್ಯದಿಂದಲೂ ದ್ರುವ ಸರ್ಜಾ ಅವರನ್ನು ಚೆನ್ನಾಗಿ ಅರಿತುಕೊಂಡಿರುವ ಪ್ರೇರಣಾ ಅವರಿಗೆ ದೇವರ ಮೇಲೆ ಇರುವಂತಹ ಅಪಾರ ಭಕ್ತಿಯನ್ನರಿತು ಶಿವ, ಪಾರ್ವತಿ, ಗಣೇಶ, ನಂದಿ, ದೇವರುಗಳ ಡಿಸೈನ್ ಜೊತೆಗೆ 24 ಲಕ್ಷದ ವಜ್ರದ ಉಂಗುರವನ್ನು ತೊಡಿಸಿದರು.

ಹೀಗೆ ಧ್ರುವ ಸರ್ಜಾ ಅವರ ಅದ್ದೂರಿ ಎಂಗೇಜ್ಮೆಂಟ್ಗೆ ಹಾಗೂ ಮದುವೆಗೆ ಸ್ಯಾಂಡಲ್ ವುಡ್ ನಿಂದ‌ ಅನೇಕ ನಟ ನಟಿಯರು, ಗಣ್ಯರು ಭಾಗವಹಿಸಿದ್ದು ನಿಮ್ಮೆಲ್ಲರಿಗು ತಿಳಿದೇ ಇದೆ. ಅದರಂತೆ ಮದುವೆಯಾದ ಮೂರು ವರ್ಷಗಳ ನಂತರ ಧ್ರುವ ಸರ್ಜಾ ನಿಗೆ ಮಗು ವಾಗಿದೆ.

ಧ್ರುವ ಸರ್ಜಾ ಅವರ ಕುಟುಂಬದಲ್ಲಿ ಸಂಭ್ರಮ

ನಟ ಧ್ರುವ ಸರ್ಜಾ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರಣ, ಅವರ ಮನೆಗೆ ಮಹಾಲಕ್ಷ್ಮೀ ಕಾಲಿಟ್ಟಿದ್ದಾಳೆ. ಹೌದು, ಧ್ರುವ ಸರ್ಜಾ ಅವರು ಮಗುವಿನ ತಂದೆಯಾಗಿದ್ದಾರೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಅವರು ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈಗಾಗಲೇ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಎಂಬ ಪುಟ್ಟ ಕಂದನಿದ್ದಾನೆ. ಈಗ ರಾಯನ್‌ಗೆ ಒಬ್ಬಳು ತಂಗಿ ಸಿಕ್ಕಿದ್ದಾಳೆ. ಚಿರು ಸರ್ಜಾ ಅವರ ಅಗಲಿಕೆಯ ನೋವು ಎಂದೂ ಕೂಡ ಮಾಸದ ವಿಚಾರ. ಈಗ ಧ್ರುವ ಸರ್ಜಾರ ಮಗು ಈ ಕುಟುಂಬಕ್ಕೆ ಖುಷಿ ನೀಡಿದೆ.

dhruva sarja marriage card photos

ಲಗ್ನ ಪತ್ರಿಕೆಯ ಫೋಟೋ

ಹೀಗಿರುವಾಗ ಸಾಮಾಜಿಕ ಜಾಲತಾಣದ ತುಂಬೆಲ್ಲ ಧ್ರುವ ಸರ್ಜಾ ಮತ್ತು ಪ್ರೇರಣರವರ ಮದುವೆ ಫೋಟೋಗಳು, ಸೀಮಂತ ಶಾಸ್ತ್ರದ ಫೋಟೋಗಳು ಹರಿದಾಡುತ್ತಿದ್ದರೆ.. ಇನ್ನೊಂದೆಡೆ ಇವರಿಬ್ಬರ ಮದುವೆ ಲಗ್ನ ಪತ್ರಿಕೆಯ ಫೋಟೋ ಕೂಡ ಜೋರಾಗಿ ಸೌಂಡ್ ಮಾಡುತ್ತಿದೆ. ಆ ಲಗ್ನಪತ್ರಿಕೆ ಇಲ್ಲಿದೆ ನೀವು ನೋಡಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field