Ads By Google

Dhruva Sarja: ಸೀಮಂತಕ್ಕೂ ಮುನ್ನ ಪ್ರೇರಣಾ ಗೆ ಮಾಡಿಸಿದ ಫೋಟೋಶೂಟ್ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ

prerana raj
Ads By Google

ನಮ್ಮ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಮೊದಲ ಬಾರಿಗೆ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಒಂದು ಕಡೆ ಮಾರ್ಟಿನ್ ಸಿನಿಮಾ ಚಿತ್ರೀಕರಣ ನಡಿಯುತ್ತಿದ್ದರೆ ಇನ್ನೊಂದು ಕಡೆ ಜೋಗಿ ಪ್ರೇಮ್ ಸಿನಿಮಾ ಸೆಟ್ಟೇರುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಇನ್ನು ಅದ್ಧೂರಿ ಬಹದ್ದೂರ್ ಭರ್ಜರಿ ಹಾಗೂ ಪೊಗರು ಬಳಿಕ ಈ ಎರಡು ಸಿನಿಮಾಗಳು ಸಖತ್ ಸದ್ದು ಮಾಡುತ್ತಿದ್ದು ಅದರಲ್ಲೂ ಮೊದಲು ಮಾರ್ಟಿನ್ ಬಿಡುಗಡೆಗೆ ಧ್ರುವ ಸರ್ಜಾ ವಿಐಪಿಗಳು ಕಾದು ಕುಳಿತ್ತಿದ್ದಾರೆ. ಈ ದು:ಖದಲ್ಲಿ ಮುಳುಗಿದ್ದ ಕುಟುಂಬಕ್ಕೆ ಶೀಘ್ರದಲ್ಲಿಯೇ ಖುಷಿ ವಿಷಯ ಸಿಗಲಿದೆ.

ಹೌದು ಈ ಎರಡು ಸಿನಿಮಾಗಳ ಸಂಭ್ರಮ ಒಂದು ಕಡೆಯಾದರೆ ಮತ್ತೊಂದು ಕಡೆ ಇದೇ ದಸರಾ ಹಬ್ಬದಲ್ಲಿ ಧ್ರುವ ಸರ್ಜಾ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಹೌದು ಈ ಎರಡೂ ಸಂಭ್ರಮಗಳ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಮಾಧ್ಯಮಗಳ ಜೊತೆಗೆ ಬಹಳಾನೇ ಭಾವನಾತ್ಮಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಹೌದು ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಇತ್ತೀಚೆಗಷ್ಟೇ ಈ ವಿಷಯವನ್ನು ಸ್ವತಃ ಧ್ರುವ ಸರ್ಜಾ ರವರು ರಿವೀಲ್ ಮಾಡಿದ್ದುಬ ಇತ್ತೀಚೆಗೆ ಸಿಂಪಲ್ ಆಗಿ ಸೀಮಂತ ಕಾರ್ಯವನ್ನೂ ಕೂಡ ಮಾಡಿದ್ದಾರೆ. ಇನ್ನು ದಸರಾ ಹಬ್ಬದ ಆಸು-ಪಾಸಿನಲ್ಲಿ ಡೇಟ್ ಕೊಟ್ಟಿದ್ದು ಆಕ್ಷನ್ ಪ್ರಿನ್ಸ್ ಶೀಘ್ರದಲ್ಲಿ ತಂದೆಯಾಗಲಿದ್ದಾರೆ. ಇನ್ನು ಈ ಖುಷಿ ಸರ್ಜಾ ಕುಟುಂಬದಲ್ಲಿ ಮನೆ ಮಾಡಿದ್ದು ಇದೇ ವೇಳೆ ಅಣ್ಣ ಚಿರಂಜೀವಿ ಸರ್ಜಾ ಪುತ್ರನ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.

ಹೌದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ರವರು ತಮ್ಮ ಆಸೆಯನ್ನು ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದು ಇದೇ ವೇಳೆ ಅಣ್ಣ ಚಿರಂಜೀವಿ ಸರ್ಜಾ ಪುತ್ರ ರಾಯನ್ ಸರ್ಜಾ ನನ್ನ ಮಗ ಅಂದಿದ್ದಾರೆ. ಮಗ ಹುಟ್ಟಿದರೆ ನಿರಾಶೆಯಾಗುತ್ತೋ ಏನೋ ಗೊತ್ತಿಲ್ಲ. ಯಾಕಂದರೆ ಮನೆಗೊಬ್ಬ ಮಗ ಇದ್ದಾನೆ. ನಮ್ಮ ಅಣ್ಣನ ಮಗ. ರಾಯನ್‌ ನನ್ನ ಮಗನೇ. ನನಗೆ ಹಾಗೂ ನನ್ನ ಹೆಂಡ್ತಿಗೂ ಅಷ್ಟೇ. ಮಗಳಾಗಬೇಕು ಅಂತ ಆಸೆಯಿದೆ. ಮಕ್ಕಳಾಗುವುದೇ ಖುಷಿ.

ಅಣ್ಣಾ ಬರ್ತಾನೋ? ಅಜ್ಜಿ ಬರ್ತಾಳೋ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಧ್ರುವ ಸರ್ಜಾ ಹಾಗೂ ಅವರ ಕುಟುಂಬ ಎರಡೆರಡು ದು:ಖ ಒಂದು ಕಡೆ ಅಣ್ಣನನ್ನು ಕಳೆದುಕೊಂಡ ದು:ಖವಾದರೆ ಮತ್ತೊಂದು ಕಡೆ ಅಜ್ಜಿ ಇಲ್ಲ ಅನ್ನುವ ಬೇಜಾರು. ಇಂತಹ ಖುಷಿಯ ಕ್ಷಣದಲ್ಲಿ ಇಬ್ಬರೂ ಇರಬೇಕಿತ್ತು ಅನ್ನುವ ಆಸೆವಿದೆ. ಅಜ್ಜಿ ಸರ್ಜಾ ಕುಟುಂಬ ಪಿಲ್ಲರ್ ಆಗಿದ್ದು ಅತ್ತ ಅಣ್ಣನೊಂದಿಗೆ ಧ್ರುವ ಸರ್ಜಾ ಉತ್ತಮ ಬಾಂಡಿಂಗ್ ಹೊಂದಿದ್ದರು.

ಹೀಗಾಗಿ ಇಬ್ಬರನ್ನೂ ಕಳೆದುಕೊಂಡ ದು:ಖ ಇನ್ನೂ ಮಾಸಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧ್ರವ ಸರ್ಜಾ ರವರು ಪತ್ನಿ ಜೊತೆ ಸೀಮಂತದ ಖುಷಿಯಲ್ಲಿ dhruva sarja photoshoot ಮಾಡಿಸಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು ಈ ಜೋಡಿ ನೋಡಿ ಖುಷಿ ಪಟ್ಟಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field