Diesel Car: ಡೀಸೆಲ್ ಕಾರಿಗೆ ಮಿಸ್ಸಾಗಿ ಪೆಟ್ರೋಲ್ ಹಾಕಿಸಿದರೆ ಏನಾಗುತ್ತದೆ…? ಭಯಪಡುವ ಅಗತ್ಯ ಇಲ್ಲ.
ಡಿಸೇಲ್ ಕಾರ್ ಗೆ ಪೆಟ್ರೋಲ್ ತುಂಬಿದ ಸಮಯದಲ್ಲಿ ಏನು ಮಾಡಬೇಕು..?
Diesel Car Details: ದೇಶದೆಲ್ಲೆಡೆ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಹನಗಳ ಮೇಲೆ ಬೇಡಿಕೆ ಕೂಡ ಹೆಚ್ಚಾಗುತಲಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಪೆಟ್ರೋಲ್(Petrol), ಡಿಸೇಲ್, ಎಲೆಕ್ಟ್ರಿಕ್ ಹಾಗೂ CNG ಚಾಲಿತ ಕಾರ್ ಗಳು ಲಭ್ಯವಿದೆ. ಇದೀಗ ಕಾರ್ ಗಳಿಗೆ ಪೆಟ್ರೋಲ್ ಅಥವಾ ಡಿಸೇಲ್ ತುಂಬಿಸಲು ಪೆಟ್ರೋಲ್ ಬಂಕ್ ಗೆ ಭೇಟಿನೀಡಬೇಕಾಗುತ್ತದೆ.
ಬಂಕ್ ನಲ್ಲಿ ಕೆಲವೊಮ್ಮೆ ತಪ್ಪಾಗಿ ಪೆಟ್ರೋಲ್ ಕಾರ್ ಗೆ ಡೀಸೆಲ್, ಡಿಸೇಲ್ ಕಾರ್ ಗೆ ಪೆಟ್ರೋಲ್ ಹಾಕುವ ಸಾಧ್ಯತೆ ಇದೆ. ಇದೀಗ ನಾವು Diesel Car ಗೆ ತಪ್ಪಾಗಿ ಪೆಟ್ರೋಲ್ ಸುರಿದರೆ ಏನಾಗುತ್ತದೆ..? ಅಂತಹ ಸಂದರ್ಭದಲ್ಲಿ ಏನು ಮಾಡಬೇಕು..? ಎನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಡಿಸೇಲ್ ಕಾರ್ ಗೆ ಪೆಟ್ರೋಲ್ ತುಂಬಿದರೆ ಏನಾಗುತ್ತದೆ..?
ವಾಹನವನ್ನು ಚಲಾಯಿಸುವಾಗ ಆ ವಾಹನಗಳ ಬಗ್ಗೆ ಸಾಕಷ್ಟು ವಿಷಯವನ್ನು ತಿಳಿದುಕೊಂಡಿರಬೇಕಾಗುತ್ತದೆ. ನೀವು ಮಾಡಿಕೊಳ್ಳುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ತೊಂದರೆಯಾಗಬಹುದು. ಡಿಸೇಲ್ ಕಾರಿನಲ್ಲಿ ಪೆಟ್ರೋಲ್ ತುಂಬುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗಬಹುದು.
Diesel Car ಗೆ ಡಿಸೇಲ್ ಸುರಿದಾಗ ಅದು ಲೂಬ್ರಿಕೇಷನ್ ಎಣ್ಣೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಎಂಜಿನ್ ಭಾಗಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇದಕ್ಕೆ ನೀವು ಪೆಟ್ರೋಲ್ ಸುರಿದಾಗ ಎಂಜಿನ್ ನ ಪರಿಸ್ಥಿತಿ ಬದಲಾಗುತ್ತದೆ. ಕಾರ್ ನ ಯಂತ್ರಗಳ ಭಾಗದಲ್ಲಿ ಘರ್ಷಣೆ ಉಂಟಾಗುತ್ತದೆ. ಈ ಸಮಯದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಇದೀಗ ಮಾಹಿತಿ ತಿಳಿದುಕೊಳ್ಳೋಣ.
ಮುನ್ನೆಚ್ಚರಿಕೆ ಕ್ರಮಗಳು
*ಕಾರ್ ಅನ್ನು ಸ್ಟಾರ್ಟ್ ಮಾಡಬಾರದು ಏಕೆಂದರೆ ಎಂಜಿನ್ ಸ್ಟಾರ್ಟ್ ಆದರೆ ಇಂಧನ ಎಂಜಿನ್ ತುಂಬಾ ಹರಡುತ್ತದೆ ಇದರಿಂದ ಅಪಾಯ ಹೆಚ್ಚು.
*ಫಿಲ್ಲಿಂಗ್ ಸ್ಟೇಷನ್ ಸಿಬ್ಬಂದಿಗೆ ಕೂಡಲೇ ತಿಳಿಸಬೇಕು ಏಕೆಂದರೆ ಇಂತ ಸಮಯದಲ್ಲಿ ಅವರಿಗೆ ಏನು ಮಾಡಬೇಕು ಅನ್ನುವ ತಿಳುವಳಿಕೆ ಇರುತ್ತದೆ.
*ಡಿಸೇಲ್ ಕಾರ್ ಗೆ ಪೆಟ್ರೋಲ್ ಸುರಿದಾಗ ಕೂಡಲೇ ಆ ಇಂಧನವನ್ನು ಹೋರ ತೆಗೆಯುವ ಕಾರ್ಯವನ್ನು ಮಾಡಬೇಕು.
*ಪೆಟ್ರೋಲ್ ಅನ್ನು ಹೊರತೆಗೆದು ನಂತರ ಡಿಸೇಲ್ ತುಂಬಿಸಿ ಕಾರ್ ಅನ್ನು ಸ್ಟಾರ್ಟ್ ಮಾಡಬೇಕು.