Digital Payments: UPI ಮೂಲಕ ಇನ್ನುಮುಂದೆ ಇದಕ್ಕಿಂತ ಹೆಚ್ಚಿನ ವರ್ಗಾವಣೆ ಮಾಡಲು ಸಾಧ್ಯವಿಲ್ಲ, ಮಿತಿ ಘೋಷಣೆ.
ಡಿಜಿಟಲ್ ಪಾವತಿಗೆ ಈಗ ಮಿತಿಯನ್ನ ಹೇರಲಾಗಿದ್ದು ದಿನಕ್ಕೆ ಇಷ್ಟು ಹಣವನ್ನ ಮಾತ್ರ ವರ್ಗಾವಣೆ ಮಾಡಬಹುದು.
Digital Payments Limitations: ಇತ್ತೀಚಿನ ದಿನಗಳಲ್ಲಿ ಜನರು ಹಣದ ವ್ಯವಹಾರವನ್ನ ಡಿಜಿಟಲ್ ಮೂಲಕ ಮೂಲಕ ಮಾಡುತ್ತಾರೆ. ಹೌದು ದೇಶದಲ್ಲಿ ನಗದು ಹಣದ ವಹಿವಾಟು ಬಹಳ ಕಡಿಮೆ ಆಗಿದೆ ಮತ್ತು ಜನರು UPI ಮತ್ತು ಇತರೆ ಆಪ್ ಮೂಲಕ ಹಣವನ್ನ ವರ್ಗಾವಣೆ ಮಾಡುತ್ತಾರೆ.
ಇನ್ನು ಡಿಜಿಟಲ್ ಯುಗದಲ್ಲಿ ಹಣದ ವ್ಯವಹಾರವನ್ನ ಮಾಡಲು ಮಿತಿಯನ್ನ ಹೇರಲಾಗಿದೆ. ಹೌದು UPI ಮೂಲಕ ಜನರು ದಿನಕ್ಕೆ ಇಂತಿಷ್ಟು ಹಣವನ್ನ ಮಾತ್ರ ವರ್ಗಾವಣೆ ಮಾಡಬಹುದು. ಹಾಗಾದರೆ UPI ಮೂಲಕ ಜನರು ದಿನಕ್ಕೆ ಎಷ್ಟು ಹಣವನ್ನ ವರ್ಗಾವಣೆ ಮಾಡಬಹುದು ಅನ್ನುವುದರ ಬಗ್ಗೆ ತಿಳಿಯೋಣ.
ಡಿಜಿಟಲ್ ಪೇಮೆಂಟ್ ಗೆ ಜನರು ಅವಲಂಬಿತರಾಗಿದ್ದಾರೆ
ಹೌದು ಸದ್ಯದ ದಿನಗಳಲ್ಲಿ ಎಲ್ಲಾ ಅಂಗಡಿ ಮತ್ತು ಮಳಿಗೆಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇದ್ದು ಜನರು ಡಿಜಿಟಲ್ ಮಾಧ್ಯಮದ ಮೂಲಕ ಹಣಕಾಸಿನ ವ್ಯವಹಾರ ಮತ್ತು ಹೆಚ್ಚಿನ ವಸ್ತುಗಳನ್ನ ಡಿಜಿಟಲ್ ಮೂಲಕ ಮಾಡುತ್ತಾರೆ. ಇನ್ನು ಬ್ಯಾಂಕುಗಳು ಜನರು ಮಾಡುವ ಡಿಜಿಟಲ್ ವಹಿವಾಟಿನ ಮೇಲೆ ಮಿತಿಯನ್ನ ಹೇರಿದ್ದಾರೆ. ಜನರು ಈಗ ಇದಕ್ಕಿಂತ ಹೆಚ್ಚುನಿನ ಹಣವನ್ನ UPI , ಗೂಗಲ್ ಪೆ, ಫೋನ್ ಪೆ ಮೂಲಕ ವರ್ಗಾವಣೆ ಮಾಡಲು ಸಾಧ್ಯವಿಲ್ಲ.
UPI ವಹಿವಾಟಿಗೆ ಮಿತಿ ಹೇರಿದ ಬ್ಯಾಂಕುಗಳು
ಹೆಚ್ಚಿನ ಜನರು ತಮ್ಮ ಹಣಕಾಸಿನ ವಹಿವಾಟಿಗೆ ಪೆಟಿಎಂ ಬಳಕೆ ಮಾಡುತ್ತಾರೆ ಮತ್ತು ಪೆಟಿಎಂ ನಲ್ಲಿ ಒಂದು ಘಂಟೆಗೆ 20 ಸಾವಿರ ರೂಪಾಯಿಯನ್ನ ವರ್ಗಾವಣೆ ಮಾಡಬಹುದು ಮತ್ತು ಒಂದು ಘಂಟೆಯಲ್ಲಿ ಗರಿಷ್ಟ 5 ಹಣಕಾಸಿನ ವಹಿವಾಟುಗಳನ್ನ ಮಾಡಬಹುದು. ಇನ್ನು ಮಿತಿಯನ್ನ ದಾಟಿದ ನಂತರ ಹಣದ ವಹಿವಾಟು ಮಾಡಲು ಸಾಧ್ಯವಿಲ್ಲ.
ಗೂಗಲ್ ಪೆ ಮತ್ತು ಫೋನ್ ಪೆ ಮೂಲಕ ಎಷ್ಟು ಹಣ ವರ್ಗಾವಣೆ ಮಾಡಬಹುದು
ಇನ್ನು ಗೂಗಲ್ ಪೆ ಮತ್ತು ಫೋನ್ ಪೆ ಬಳಸುವವರು ಕ್ರಮವಾಗಿ ದಿನಕ್ಕೆ 1 ಲಕ್ಷದ ತನಕ ಹಣಕಾಸಿನ ವಹಿವಾಟು ಮಾಡಬಹುದು. ಇನ್ನು ಈ ಆಪ್ ನಲ್ಲಿ ಬ್ಯಾಂಕಿನ ಮಿತಿ ಇದ್ದು ಕೆಲವು ಬ್ಯಾಂಕುಗಳಲ್ಲಿ ವಹಿವಾಟಿಗೆ ಮಿತಿಯನ್ನ ಹೇರಲಾಗಿದೆ. ಅದೇ ರೀತಿಯಲ್ಲಿ ಅಮೆಜಾನ್ ಪೆ ಬಳಸುವವರು ಕೂಡ ದಿನಕ್ಕೆ ಒಂದು ಲಕ್ಷದ ತನಕ ಹಣಕಾಸಿನ ವಹಿವಾಟು ಮಾಡಬಹುದು.