Kwena Maphaka: 12 ನೇ ತರಗತಿ ಓದುತ್ತಿರುವ ಸ್ಟಾರ್ ಆಟಗಾರ ಮುಂಬೈ ಇಂಡಿಯನ್ಸ್ ತಂಡದಲ್ಲಿ, ಬಹುನಿರೀಕ್ಷಿತ ಆಟಗಾರ.

12 ನೇ ತರಗತಿ ಓದುತ್ತಿರುವ ಸ್ಟಾರ್ ಆಟಗಾರ ಮುಂಬೈ ಇಂಡಿಯನ್ಸ್ ತಂಡದಲ್ಲಿ

Dilshan Madushanka And  Kwena Maphaka: ಪ್ರಸ್ತುತ IPL 2024 ರ 17 ನೇ ಆವೃತ್ತಿ ಆರಂಭವಾಗಿದೆ. ಕ್ರಿಕೆಟ್ ಪ್ರಿಯರು ತಮ್ಮ ಬಹುನಿರೀಕ್ಷಿತ IPL ಗಾಗಿ ಕಾಯುತ್ತಿದ್ದರು. ಇದೀಗ IPL ಆರಂಭಗೊಂಡಿದ್ದು, ವಿವಿಧ ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಇನ್ನು ಈ ಬಾರಿಯ IPL ನಲ್ಲಿ ನಿಯಮಗಳ ಬದಲಾವಣೆಯ ಜೊತೆಗೆ ತಂಡದ ಆಟಗಾರರು ಕೂಡ ಬದಲಾಗಿದ್ದಾರೆ.

ಕೆಲವರು ವೈಯಕ್ತಿಕ ಕಾರಣದಿಂದ ಆಟದಿಂದ ದೂರ ಉಳಿದಿದ್ದರೆ, ಇನ್ನೂ ಕೆಲವರು ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದಾರೆ. ಇನ್ನು ಈ ಸಮಸ್ಯೆ IPL 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೂ ಎದುರಾಗಿದೆ. ಗಾಯದ ಸಮಸ್ಯೆಯಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈ ಖ್ಯಾತ ಆಟಗಾರ ಹೊರಗುಳಿದಿದ್ದು, ಇವರ ಬದಲಾಗಿ 12 ನೇ ತರಗತಿ ಓದುತ್ತಿರುವ ಸ್ಟಾರ್ ಆಟಗಾರ ಟೀಮ್ ಗೆ ಎಂಟ್ರಿ ಕೊಟ್ಟಿದ್ದಾರೆ.

Dilshan Madushanka And Kwena Maphaka
Image Credit: Free Pressjournal

12 ನೇ ತರಗತಿ ಓದುತ್ತಿರುವ ಸ್ಟಾರ್ ಆಟಗಾರ ಮುಂಬೈ ಇಂಡಿಯನ್ಸ್ ತಂಡದಲ್ಲಿ
ಐಪಿಎಲ್ 2024 ರ ಗಾಯದ ಕಾರಣದಿಂದ ಶ್ರೀಲಂಕಾದ ವೇಗಿ Dilshan Madushanka ಹೊರಗುಳಿದಿದ್ದಾರೆ. Dilshan Madushanka ಬದಲಿಗೆ ಮುಂಬೈ ಇಂಡಿಯನ್ಸ್ ದಕ್ಷಿಣ ಆಫ್ರಿಕಾದ ವೇಗಿ Kwena Maphaka ಅವರನ್ನು ಆಯ್ಕೆ ಮಾಡಿದೆ. ಆಶ್ಚರ್ಯವೆಂದರೆ ಆತನ ವಯಸ್ಸು ಕೇವಲ 17 ವರ್ಷ. ಇತ್ತೀಚೆಗೆ ನಡೆದ U-19 ವಿಶ್ವಕಪ್‌ ನಲ್ಲಿ ಮಪಾಕಾ ಬೊಂಬಾಟ್ 6 ಪಂದ್ಯಗಳಲ್ಲಿ 21 ವಿಕೆಟ್‌ ಗಳನ್ನು ಕಬಳಿಸಿದ್ದಾರೆ.

ಕ್ವೆನಾ ಮಪಾಕ ಕೂಡ ಜಸ್ಪ್ರೀತ್ ಬುಮ್ರಾ ಅವರಂತೆ ಅತ್ಯುತ್ತಮ ಯಾರ್ಕರ್ ಬೌಲರ್. ಅಲ್ಲದೆ ಚೆಂಡನ್ನು ಉತ್ತಮ ವೇಗದಲ್ಲಿ ಸ್ವಿಂಗ್ ಮಾಡುತ್ತಾರೆ. ಮಾಪಾಕ ಕೇವಲ 17 ವರ್ಷ ವಯಸ್ಸಿನವರು ಮತ್ತು ಪ್ರಸ್ತುತ 12 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಆದರೆ ಅವರಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಮೊದಲ ಪಂದ್ಯದಲ್ಲೇ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಮಪಾಕ ದಕ್ಷಿಣ ಆಫ್ರಿಕಾ ಎ ಮತ್ತು ದಕ್ಷಿಣ ಆಫ್ರಿಕಾ ಯುವ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್‌ ನಲ್ಲಿ ಆಡಿದ ಕಿರಿಯ ಆಟಗಾರರಲ್ಲಿ ಮಪಾಕಾ ಕೂಡ ಒಬ್ಬರು. ಅವರು 8 ಏಪ್ರಿಲ್ 2006 ರಂದು ಜೋಹಾನ್ಸ್‌ ಬರ್ಗ್‌ ನಲ್ಲಿ ಜನಿಸಿದರು. ಅವರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದರು, ಆದರೆ ಯಾರೂ ಅವರನ್ನು ಖರೀದಿಸಲಿಲ್ಲ. ಆದರೆ IPL ನಲ್ಲಿ Dilshan Madushanka ಬದಲಿಗೆ ಕ್ವೆನಾ ಮಪಾಕ ಮುಂಬೈ ಇಂಡಿಯನ್ಸ್ ತಾಣದಲ್ಲಿ ಆಡುವ ಸಾಧ್ಯತೆ ಇದೆ.

Join Nadunudi News WhatsApp Group

Kwena Maphaka Latest News
Image Credit: Sportskeeda

Join Nadunudi News WhatsApp Group