Kia Discount: ಹೊಸ ಕಾರ್ ಖರೀದಿಸುವವರಿಗೆ ಬಂಪರ್ ಆಫರ್, ಕಿಯಾ ಕಾರ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ.
ಕಿಯಾ ಸೆಲ್ಟೋಸ್ ಎಸ್ ಯುವಿ ಖರೀದಿಯ ಮೇಲೆ ಬರೋಬ್ಬರಿ 85,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.
Kia Seltos 2023: ಇತ್ತೀಚಿಗೆ ಕಿಯಾ (Kia) ಕಂಪನಿಯು ಹೊಸ ಹೊಸ ಮಾದರಿಯ ಎಸ್ ಯೂವಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲಿ ಈಗಾಗಲೇ ವಿಭಿನ್ನ ವಿನ್ಯಾಸದ ಕಾರ್ ಗಳು ಬಿಡುಗಡೆಗೊಂಡಿದ್ದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ.
ಇದೀಗ ಕಿಯಾ ಕಂಪನಿಯು ಇನ್ನಿತರ ಎಸ್ ಯೂವಿಗಳಿಗೆ ಪೈಪೋಟಿ ನೀಡಲು ಹೊಸ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಕಾರ್ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ.
ಕಿಯಾ ಸೆಲ್ಟೋಸ್ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್
ಕಿಯಾ ಕಂಪನಿಯು ಇದೀಗ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಕಿಯಾ ಸೆಲ್ಟೋಸ್ ಕಾರ್ ಅನ್ನು ಪರಿಚಯಿಸಿದ್ದು ಈ ಕಾರ್ ಗ್ರಾಹಕರಿಂದ ಬಾರಿ ಪ್ರಮಾಣದ ಬೇಡಿಕೆಯನ್ನು ಪಡೆಯುತ್ತಿದೆ. ಇನ್ನು ಕಿಯಾ ಸೆಲ್ಟೋಸ್ ಆಕರ್ಷಕ ಫೀಚರ್ ಗಳನ್ನೂ ಹೊಂದಿದ್ದು ಗ್ರಾಹಕರಿಗೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ.
ಕಿಯಾ ಸೆಲ್ಟೋಸ್ ಖರೀದಿಯ ಮೇಲೆ ಬರೋಬ್ಬರಿ 85,000 ರಿಯಾಯಿತಿ
ಇದೀಗ ಕಿಯಾ ಪ್ರಸ್ತುತ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಎಸ್ ಯುವಿ ಖರೀದಿಯ ಮೇಲೆ ಬರೋಬ್ಬರಿ 85,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ವಿನಿಮಯ ಬೋನಸ್ ವಿಮ ಪ್ರಯೋಜನ ಮತ್ತು ಪೂರಕ ಬಿಡಿಭಾಗಗಳು ಸೇರಿದಂತೆ ಇನ್ನಿತರ ಪ್ರಯೋಜನವನ್ನು ಕಂಪನಿಯು ನೀಡಲಿದೆ.
ಇನ್ನು ಕಿಯಾ ಸೆಲ್ಟೋಸ್ ಎಸ್ ಯುವಿ ಮೇಲೆ ರೂ. 60,000 ವಿನಿಮಯ ಬೋನಸ್ ಮತ್ತು ಕಿಯಾ ಸೆಲ್ಟೋಸ್ ಎಸ್ ಯುವಿ ಆಯ್ದ ರೂಪಾಂತರಗಳ ಮೇಲೆ 25,000 ರೂ. ಪೂರಕ ಬಿಡಿಭಾಗಳನ್ನು ನೀಡಲಿದೆ. ಇನ್ನು ಈ ಯೋಜನೆಗಳ ಜೊತೆಗೆ ಕೋಯಾ ಇಂಡಿಯಾ ಮೊದಲ ವರ್ಷಕ್ಕೆ ಉಚಿತ ವಿಮೆಯನ್ನು ನೀಡುವುದಾಗಿ ಘೋಷಿಸಿದೆ. ಇನ್ನು ಕಿಯಾ ತನ್ನ ಮುಂದಿನ ಮಾದರಿಯ ಕಿಯಾ ಫೇಸ್ ಲಿಫ್ಟ್ ಕಾರ್ ನ ಮೇಲೆ ಕೂಡ ರಿಯಾಯಿತಿ ಲಭ್ಯವಾಗಲಿದೆ.
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್
ಕಿಯಾ ಭಾರತೀಯ ಮಾರಕಟ್ಟೆಯಲ್ಲಿ ಮೊದಲ ಮಾದರಿಯ ಸೆಲ್ಟೋಸ್ ಎಸ್ ಯುವಿಯನ್ನು ಬಿಡುಗಡೆ ಮಾಡಲಿದೆ. ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ SUV ಫ್ರಿ ಬುಕ್ಕಿಂಗ್ ಜುಲೈ 14 ರಿಂದ ಆರಂಭವಾಗಲಿದೆ. ಸೆಲ್ಟೋಸ್ ಫೇಸ್ ಲಿಫ್ಟ್ ನಲ್ಲಿ ಶಕ್ತಿಯುತ ಎರಡು ಎಂಜಿನ್ ಅನ್ನು ಅಳವಡಿಸಲಾಗಿದ್ದು, 114 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1 .5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 158 bhp ಪವರ್ ಮತ್ತು 253 ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.