Disease X: ಕರೋನ ಅಂತ್ಯಕ್ಕೂ ಮುನ್ನವೇ ಬಂತು ಇನ್ನೊಂದು X ಸೋಂಕು, ಏನಿದು X ಸೋಂಕು…?
ಕರೋನದಷ್ಟೇ ಅಪಾಯಕಾರಿಯಾದ ಇನ್ನೊಂದು ಸಾಂಕ್ರಾಮಿಕ ರೋಗ.
Disease X Virus: ಕಳೆದೆರಡು ವರ್ಷದ ಹಿಂದೆ ಕರೋನ ವೈರಸ್ (Corona Virus) ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತ್ತು. ಕರೋನದಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಮರಣ ಹೊಂದಿದ್ದರು. ಸಾಕಷ್ಟು ಜನರು ಕರೋನ ಸೋಂಕು ತಗುಲಿ ಜೀವನ್ಮರಣ ಹೋರಾಟ ನಡೆಸಿದ್ದರು.
ಈಗಲೂ ಕೂಡ ಕರೋನ ಭೀತಿ ಆಗಾಗ ಹೆಚ್ಚುತ್ತದೆ. ಇನ್ನು ಯಾವುದೇ ಸಣ್ಣ ಜ್ವರ ಬಂದರು ಕರೋನ ನೆನಪಾಗುವಷ್ಟು ಈ ಸೋಂಕು ಜನರನ್ನು ಚಿಂತೆಗೀಡು ಮಾಡಿದೆ.
ಕರೋನ ಅಂತ್ಯಕ್ಕೂ ಮುನ್ನವೇ ಬಂತು ಇನ್ನೊಂದು X ಸೋಂಕು
ಇನ್ನು ಕರೋನಗೆ ಲಸಿಕೆ ಕಂಡು ಹಿಡಿದ ಬಳಿಕ ಕರೋನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಕರೋನ ಸ್ವಲ್ಪ ಮಟ್ಟಿಗೆ ಕಡಿಮೆ ಆದ ಬಳಿಕ ಕರೋನ ರೂಪಾಂತರಗಳು ಕಾಣಿಸಿಕೊಂಡಿದ್ದವು. ಕರೋನಾದ ರೂಪಾಂತರ ಕೂಡ ಜನರ ಆರೋಗ್ಯವನ್ನು ತೀವ್ರ ಹದೆಗೆಡಿಸಿತ್ತು.
ಇದೀಗ ಹೊಸ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಈ ಸೋಂಕು ಕೂಡ ಕರೋನದಷ್ಟೇ ಅಪಾಯಕಾರಿ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಯುನೈಟೆಡ್ ಕಿಂಗ್ ಡಮ್ ನ ವಿಜ್ಞಾನಿಗಳು ಈ ರೋಗಕ್ಕೆ ಲಸಿಕೆ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಈ ಹೊಸ ಸಾಂಕ್ರಾಮಿಕ ರೋಗ ಯಾವುದಿರಬಹುದು ಎಂದು ಎಲ್ಲರು ಚಿಂತಿಸುತ್ತಿದ್ದಾರೆ.
ಡಿಸೀಸ್ X ಸಾಂಕ್ರಾಮಿಕ ರೋಗ (Disease X Virus)
ಇದೀಗ ದೇಶದಲ್ಲಿ X ವೈರಸ್ ಬಗ್ಗೆ ಭೀತಿ ಹೆಚ್ಚಾಗುತ್ತಿದೆ. ಯಾವ ಪ್ರಾಣಿಗಳ ವೈರಸ್ ಗಳನ್ನೂ ಭೇದಿಸಿ ಮುಂದಿನ ಸಾಂಕ್ರಾಮಿಕ ರೋಗವನ್ನು ಪ್ರಚೋದಿಸುತ್ತದೆ ಎಂದು ವಿಜ್ಞಾನಿಗಳು ಮತ್ತು ಸಂಶೋಧಕರು ಖಚಿತಪಡಿಸಿಲ್ಲ. ಇದನ್ನು ವಿಜ್ಞಾನಿಗಳು ಡಿಸೀಸ್ ಎಕ್ಸ್ ಎಂದು ಉಲ್ಲೇಖಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ WHO ಡಿಸೀಸ್ X ಬಗ್ಗೆ ಸೂಚನೆ ನೀಡಿದೆ. ಡಿಸೀಸ್ ಎಕ್ಸ್ ಸ್ಕ್ರೀನಿಂಗ್, ಚಿಕೆತ್ಸೆ ಮತ್ತು ತಡೆಗಟ್ಟುವಿಕೆಗಾಗಿ ವೇಗವರ್ದಿತ R ಮತ್ತು D ಅಗತ್ಯವಿರುತ್ತದೆ.
ಡಿಸೀಸ್ X ಹೇಗೆ ಹರಡುತ್ತದೆ
ಇನ್ನು X ಡಿಸೀಸ್ ಇತರ ಖಾಯಿಲೆಗಳಿಗಿಂತ ಭಿನ್ನವಾಗಿದೆ. ಮನುಷ್ಯನ ಕಾಯಿಲೆಗೆ ಕಾರಣವಾಗಲು ಪ್ರಸ್ತುತ ತಿಳಿದಿಲ್ಲದ ರೋಗಕಾರಕದಿಂದ ಗಂಭೀರವಾದ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗವು ಉಂಟಾಗಬಹುದು ಎಂಬ ಜ್ಞಾನವನ್ನು ಡಿಸೀಸ್ ಎಕ್ಸ್ ಪ್ರತಿನಿಧಿಸುತ್ತದೆ ಎಂದು WHO ಮಾಹಿತಿ ನೀಡಿದೆ.
ಇನ್ನು ಡಿಸೀಸ್ ಎಕ್ಸ್ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಕಾಯಿಲೆ ವೈರಸ್ ನಿಂದ ಉಂಟಾದ ಕಾಲ್ಪನಿಕ ಕಾಯಿಲೆ ಎಂದು ಹೇಳಬಹುದು. ಈ ಸೋಂಕು ಮಂಗಗಳು, ನಾಯಿಗಳು ಸೇರಿದಂತೆ ಯಾವುದೇ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು.