ಕುಡಿದ ಮತ್ತಿನಲ್ಲಿ ರಸ್ತೆ ಬದಿಯಲ್ಲಿ ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಮಾಡಿದ್ದೇನು ಗೊತ್ತಾ, ಶಾಕ್ ಆದ ಪೊಲೀಸರು.

ಒಬ್ಬ ಸೆಲೆಬ್ರಿಟಿ ಅಂದಮೇಲೆ ಅವರು ಏನೇ ಮಾಡಿದರು ಅದೂ ದೊಡ್ಡ ಸುದ್ದಿಯಾಗುತ್ತದೆ ಎಂದು ಹೇಳಬಹುದು. ಇನ್ನು ಕನ್ನಡದಲ್ಲಿ ಬರುವ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್ ರಿಯಾಲಿಟಿ ಶೋ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಇನ್ನು ಕನ್ನಡದ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ಹಲವಾರು ಈಗ ದೊಡ್ಡ ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು ದೊಡ್ಡ ಸುದ್ದಿ ಮಾಡಿದ್ದ ನಟಿ ಅಂದರೆ ಅದು ದಿವ್ಯ ಸುರೇಶ್ ಎಂದು ಹೇಳಬಹುದು. ಕಳೆದ ಬಿಗ್ ಬಾಸ್ ನಲ್ಲಿ ಬಹಳ ಚನ್ನಾಗಿ ಆಟವನ್ನ ಆದಿ ಅದೆಷ್ಟೋ ಜನರ ಮೆಚ್ಚುಗೆಯನ್ನ ಗಳಿಸಿಕೊಂಡ ನಟಿಯರಲ್ಲಿ ನಟಿ ದಿವ್ಯ ಸುರೇಶ್ ಕೂಡ ಒಬ್ಬರು.

ಇನ್ನು ಬಿಗ್ ಬಾಸ್ ನಿಂದ ಆಚೆ ಬಂದಮೇಲೂ ಕೂಡ ದಿವ್ಯ ಸುರೇಶ್ ಅವರು ಬಹಳ ಸುದ್ದಿಯಾಗಿದ್ದರು ಎಂದು ಹೇಳಬಹುದು. ಇನ್ನು ಈಗ ದಿವ್ಯ ಸುರೇಶ್ ಮಾಡಿರುವ ಈ ಕೆಲಸ ರಾಜ್ಯದಲ್ಲಿ ದೊಡ್ಡ ಸಕತ್ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಕುಡಿದ ಮತ್ತಿನಲ್ಲಿ ರಸ್ತೆ ಮದ್ಯದಲ್ಲಿ ದಿವ್ಯ ಸುರೇಶ್ ಮಾಡಿದ ಕೆಲಸ ಅವರ ಅಭಿಮಾನಿಗಳ ಬೇಸರಕ್ಕೆ ಕೂಡ ಕಾರಣವಾಗಿದೆ. ಹಾಗಾದರೆ ಕುಡಿದ ಮತ್ತಿನಲ್ಲಿ ದಿವ್ಯ ಸುರೇಶ್ ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ರಾಜ್ಯದಲ್ಲಿ ಈಗ ನೈಟ್ ಕರ್ಪ್ಯೂ ಜಾರಿಯಲ್ಲಿ ಇರುವುದು ನಿಮಗೆಲ್ಲ ತಿಳಿದೇ ಇದೆ.

divya suresh news

ಇನ್ನು ಕರ್ಪ್ಯೂ ಜಾರಿಯಲ್ಲಿ ಇರುವ ಕಾರಣ ಪೊಲೀಸರು ರಾತ್ರಿ ಹಗಲು ಅಂದರೆ ತಮ್ಮ ಕೆಲಸವನ್ನ ಮಾಡುತ್ತಿದ್ದು ಕರ್ಪ್ಯೂ ಉಲ್ಲಂಘನೆ ಮಾಡಿದರೆ ಮೇಲೆ ಕೇಸ್ ಕೂಡ ಹಾಕಲಾಗುತ್ತಿದೆ. ಸ್ನೇಹಿತರೆ ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ ಮತ್ತು ಕರ್ಪ್ಯೂ ನಿಯಮವನ್ನ ಉಲ್ಲಂಘನೆ ಮಾಡಿದ್ದಾರೆ ಅನ್ನುವ ಆರೋಪ ಕೂಡ ಕೇಳಿಬರುತ್ತಿದೆ. ನಿನ್ನೆ ರಾತ್ರಿ ಬ್ರಿಗ್ರೇಡ್ ರೋಡ್ ನಲ್ಲಿ ಸ್ನೇಹಿತರೊಂದಿಗೆ ಬಂದಿದ್ದ ದಿವ್ಯ ಸುರೇಶ್ ಗೆ ಪೊಲೀಸರು ನೈಟ್ ಕರ್ಪ್ಯೂ ಇದೆ ಮನೆ ಹೋಗಿ ಎಂದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ರಂಪಾಟ ಮಾಡಿದ್ದಾರೆ.

ಹೌದು ನಿನ್ನೆ ರಾತ್ರಿ ದಿವ್ಯ ಸುರೇಶ್ ಅವರು ರಂಪಾಟವನ್ನ ಮಾಡಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಸ್ನೇಹಿತರ ಜೊತೆ ಕುಡಿದ ಮತ್ತಿನಲ್ಲಿ ಅವರು ರಂಪಾಟವನ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅವರು ರಂಪಾಟ ಮಾಡಿದ ಕೆಲವು ತುಣುಕುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ಕೂಡ ದಿವ್ಯ ಸುರೇಶ್ ವರ್ತನೆಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

divya suresh news

Join Nadunudi News WhatsApp Group