Best Maruti Car: ದೀಪಾವಳಿ ಹಬ್ಬದ ಭರ್ಜರಿ ಆಫರ್, 19 KM ಮೈಲೇಜ್ ಕೊಡುವ ಈ ಕಾರಿನ ಬೆಲೆ 1 ಲಕ್ಷ ಡಿಸ್ಕೌಂಟ್.
19 ಕಿಲೋಮೀಟರ್ ಮೈಲೇಜ್ ನೀಡುವ ಕಾರ್ ಕಡಿಮೆ ಬೆಲೆಗೆ.
Diwali car Offer: ಸದ್ಯ ಮಾರುಕಟ್ಟೆಯಲ್ಲಿ ಕಾರ್ ಖರೀದಿಗೆ ಬಂಪರ್ ಅವಕಾಶ ಲಾಭ್ಯವಾಗುತ್ತಿದೆ ಎನ್ನಬಹುದು. ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನು ಪರಿಚಯಿಸುತ್ತಿವೆ.
ಇದೀಗ ನಿಮ್ಮ ಕಾರ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಲು ಇದೀಗ ಉತ್ತಮ ಅವಕಾಶ ಬಂದಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿರುವ ಟಾಪ್ ಮಾದರಿಯ ಕಾರ್ ಗಳ ಖರೀದಿ ಭರ್ಜರಿ ರಿಯಾಯಿತಿ ಲಭ್ಯವಾಗಿದೆ.
ಕಾರ್ ಖರೀದಿಗೆ ದೀಪಾವಳಿ ಹಬ್ಬದ ಭರ್ಜರಿ ಆಫರ್
*Citroen C3
ಜನಪ್ರಿಯ ಹ್ಯಾಚ್‌ಬ್ಯಾಕ್ Citroen C3 ಖರೀದಿಯ ಮೇಲೆ ನೀವು 5 ವರ್ಷಗಳ ವಿಸ್ತೃತ ವಾರಂಟಿಯನ್ನು ಪಡೆಯುತ್ತೀರಿ. ಇದಲ್ಲದೆ, ಕಂಪನಿಯು ಅದರ ಮೇಲೆ 99,000 ರೂ ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತಿದೆ. ಈ ಹ್ಯಾಚ್‌ಬ್ಯಾಕ್ ಮಾರುಕಟ್ಟೆಯಲ್ಲಿ 6.16 ಲಕ್ಷ ರೂಪಾಯಿಗಳ ಆರಂಭಿಕ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದರ ಟಾಪ್ ರೂಪಾಂತರದ ಬೆಲೆ 8.92 ಲಕ್ಷ ರೂ. ಆಗಿದೆ.
ಈ ಕಾರ್ ನಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತೀರಿ, ಕ್ರಮವಾಗಿ 1.0 ಲೀಟರ್ ನ ಎಂಜಿನ್ ಅನ್ನು ಹೊಂದಿದ್ದು 80 bhp ಮತ್ತು 115 Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0 ಲೀಟರ್ ಟರ್ಬೊ ಎಂಜಿನ್ ಅನ್ನು ಹೊಂದಿದ್ದು 109 bhp ಮತ್ತು 190Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
*Maruti Suzuki Ignis
Maruti Suzuki Ignis ಕಾರ್ ನಲ್ಲಿ ಕಂಪನಿಯು 1.2-ಲೀಟರ್ NA ಎಂಜಿನ್ ಅನ್ನು ಸ್ಥಾಪಿಸಿದೆ. ಈ ಎಂಜಿನ್ ಗರಿಷ್ಠ 82bhp ಪವರ್ ಮತ್ತು 113Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ನೀವು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 5-ಸ್ಪೀಡ್ AMT ಆಯ್ಕೆಯನ್ನು ಪಡೆಯುತ್ತೀರಿ. ಈ ಹ್ಯಾಚ್ ಬ್ಯಾಕ್ ನಲ್ಲಿ ರೂ. 35,000 ನಗದು ರಿಯಾಯಿತಿ, ರೂ. 25,000 ವರೆಗಿನ ವಿನಿಮಯ ಕೊಡುಗೆ ಮತ್ತು ರೂ. 10,000 ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿದೆ. ಈ ಹ್ಯಾಚ್‌ಬ್ಯಾಕ್ ಮಾರುಕಟ್ಟೆಯಲ್ಲಿ 5.84 ಲಕ್ಷದಿಂದ 8.30 ಲಕ್ಷ ರೂಪಾಯಿಗಳ ಆರಂಭಿಕ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
*Maruti Suzuki Celerio
Maruti Suzuki Celerio ನಲ್ಲಿ ಎರಡು ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ಟ್ರಿಮ್‌ಗಳ ಮೇಲೆ ರೂ 59,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ನೀವು ರೂ 35,000 ನಗದು ರಿಯಾಯಿತಿ, ರೂ 20,000 ವಿನಿಮಯ ಬೋನಸ್ ಮತ್ತು ರೂ 4,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತೀರಿ. ಈ ಹ್ಯಾಚ್‌ಬ್ಯಾಕ್ ಮಾರುಕಟ್ಟೆಯಲ್ಲಿ 5.37 ಲಕ್ಷದಿಂದ 7 .15 ಲಕ್ಷ ರೂಪಾಯಿಗಳ ಆರಂಭಿಕ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ