Diwali Offer: ದೀಪಾವಳಿ ಹಬ್ಬದ ಬಂಪರ್ ಆಫರ್, ಈ ಕಾರ್ ಗಳ ಖರೀದಿಗೆ ಭರ್ಜರಿ 5 ಲಕ್ಷದವರೆಗೆ ಆಫರ್.

ದೀಪಾವಳಿ ಹಬ್ಬಕೆ ಈ ಕಾರ್ ಗಳ ಖರೀದಿಯ ಮೇಲೆ ಭರ್ಜರಿ ಆಫರ್ ಘೋಷಣೆಯಾಗಿದೆ.

Diwali Offer For Cars: ಸದ್ಯ November 12 ರಂದು ದೀಪಾವಳಿ ಹಬ್ಬ (Diwali Festival) ಆಚರಣೆ ಎಲ್ಲೆಡೆ ಜೋರಾಗಿಯೇ ಇರುತ್ತದೆ. ಇನ್ನು ಈ ದೀಪಾವಳಿ ವಿಶೇಷಕ್ಕೆ ವಿವಿಧ ಕಂಪನಿಗಳು, ಇ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು ಬಂಪರ್ ಆಫರ್ ಅನ್ನು ನೀಡುತ್ತಿರುತ್ತದೆ. ಇನ್ನು ದೀಪಾವಳಿಯ ಸಮಯದಲ್ಲಿ ಆಫರ್ ಗಳ ಸುರಿಮಳೆ ಜೋರಾಗಿರುದ್ರಿಂದ ಸಾಕಷ್ಟು ಜನರು ಹೊಸ ಕಾರ್, ಬೈಕ್ ಗಳನ್ನೂ ಖರೀದಿಸುವ ಪ್ಲ್ಯಾನ್ ಹಾಕಿಕೊಳ್ಳುತ್ತಾರೆ.

Toyota Hilux Pick Up
Image Credit: Carwale

ದೀಪಾವಳಿ ಹಬ್ಬದ ಬಂಪರ್ ಆಫರ್
ನೀವು ಈ ಬಾರಿಯ ದಿವಾಲಿ ಸೇಲ್ ನಲ್ಲಿ ಕಾರ್ ಗಳನ್ನೂ ಖರೀದಿಸಿದರೆ ಗರಿಷ್ಟ ಲಾಭವನ್ನು ಪಡೆಯುವುದರ ಜೊತೆಗೆ ದೊಡ್ಡ ಮೊತ್ತವನ್ನು ಉಳಿಸಬಹುದು. ಇನ್ನು ಭಾರತೀಯ ಆಟೋ ವಲಯದಲ್ಲಿ ದಿವಾಲಿ ಆಫರ್ ಗಾಗಿ ಸದ್ಯ ಈ ವಾಹನದ ಖರೀದಿಗೆ ಬಂಪರ್ ಅವಕಾಶ ಲಭಿಸಿದೆ ಎನ್ನಬಹುದು. ನೀವು ಇ ವಾಹನವನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಬರ್ಜರಿ ರಿಯಾಯಿತಿಯೊಂದಿಗೆ ಈ ವಾಹನವನ್ನು ನಿಮ್ಮದಾಗಿಸಿಕೊಳ್ಳಬಹುದು.

ಈ ಕಾರ್ ಗಳ ಖರೀದಿಗೆ ಭರ್ಜರಿ 5 ಲಕ್ಷದವರೆಗೆ ಆಫರ್
*Toyota Hilux Pick Up
ಟೊಯೊಟಾ ಹಿಲಕ್ಸ್ ಪಿಕ್ ಅಪ್ ಟ್ರಕ್ ಖರೀದಿಸುವ ಗ್ರಾಹಕರಿಗೆ ಭರ್ಜರಿ 5 ಲಕ್ಷ ರೂ. ದಿವಾಲಿ ಆಫರ್ ಸಿಗಲಿದೆ. Hilux ನ ಎಕ್ಸ್ ಶೋ ರೂಂ ಬೆಲೆ 30.40 ಲಕ್ಷ ರೂ. ಗಳಿಂದ 37.90 ಲಕ್ಷ ರೂ. ಆಗಿದೆ. ಈ ಆಫರ್ ನಲ್ಲಿ ಭರ್ಜರಿ ಹಣವನ್ನು ನೀವು ಉಳಿಸಬಹುದಾಗಿದೆ.

mahindra xuv400 electric car
Image Credit: Spinny

*Mahindra XUV400 Electric Car
ನೀವು ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ದೀಪಾವಳಿಯಲ್ಲಿ ನಿಮಗೆ 3 ಲಕ್ಷ ರೂಪಾಯಿಗಳ ಆಫರ್ ಸಿಗಲಿದೆ. XUV 400 ಎಲೆಕ್ಟ್ರಿಕ್‌ ಎಕ್ಸ್ ಶೋರೂಂನ ಬೆಲೆ 15.99 ಲಕ್ಷದಿಂದ 19.19 ಲಕ್ಷದವರೆಗೆ ಇದೆ.

citroen c5 aircross
Image Credit: Cardekho

*Citroen C5 Aircross
ಸಿಟ್ರೊಯೆನ್ ಭಾರತದಲ್ಲಿ ಸಂಚಲನವನ್ನು ಸೃಷ್ಟಿಸಿದೆ ಎನ್ನಬಹುದು. ಸದ್ಯ ಸಿಟ್ರೊಯೆನ್ C5 ಏರ್‌ ಕ್ರಾಸ್ ಖರೀದಿಸುವ ಗ್ರಾಹಕರಿಗೆ 2.5 ಲಕ್ಷ ರೂ. ಆಫರ್ ಲಭ್ಯವಾಗಲಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ. 36.91 ಲಕ್ಷದಿಂದ ರೂ. 37.67 ಲಕ್ಷ ಆಗಿದೆ.

Join Nadunudi News WhatsApp Group

MG ZS EV price
Image Credit: Spinny

*MG ZS EV
ಎಲೆಕ್ಟ್ರಿಕ್ ಕಾರುಗಳಲ್ಲಿ MG ZS ಭಾರತದಲ್ಲಿ ಬೇಡಿಕೆಯನ್ನು ಗಳಿಸಿದೆ. ಈ ಕಾರಿಗೆ 2.3 ಲಕ್ಷ ರೂಪಾಯಿ ಆಫರ್ ಘೋಷಿಸಲಾಗಿದೆ. ಕಾರಿನ ಎಕ್ಸ್ ಶೋ ರೂಂ ಬೆಲೆ 22.88 ಲಕ್ಷದಿಂದ 26 ಲಕ್ಷ ರೂ. ಆಗಿದೆ.

hyundai kona electric car
Image Credit: Economictimes

*Hyundai Kona electric car
ಇನ್ನು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರು 2 ಲಕ್ಷ ರೂ. ಆಫರ್ ಪಡೆಯಬಹುದು. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ. 23.84 ಲಕ್ಷದಿಂದ ರೂ. 24.03 ಲಕ್ಷ ಆಗಿದೆ.

Jeep Meridian
Image Credit: Autocarindia

*Jeep Meridian
ದಿವಾಲಿ ಸೇಲ್ ನಲ್ಲಿ ಜೀಪ್ ಮೆರಿಡಿಯನ್ ಕಾರ್ ಗೆ ಭರ್ಜರಿ 1 .85 ಲಕ್ಷ ರೂ. ಆಫರ್ ಘೋಷಣೆ ಮಾಡಲಾಗಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ. 33.40 ಲಕ್ಷ ರೂ. ಆಗಿದೆ.

Join Nadunudi News WhatsApp Group