Jio Diwali Offer: 388 ದಿನಗಳ ಕಾಲ ಪ್ರತಿನಿತ್ಯ 2.5 GB ಉಚಿತ ಡೇಟಾ ಜೊತೆ ಅನಿಯಮಿಯ ಕರೆ, Jio ಗ್ರಾಹಕರಿಗೆ ಬಂಪರ್ ಪ್ಲ್ಯಾನ್.
Jio ವಾರ್ಷಿಕ ರಿಚಾರ್ಜ್ ಪ್ಲಾನ್ ಮೇಲೆ 23 ದಿನಗಳನ್ನು ಹೆಚ್ಚುವರಿಯಾಗಿ ಪಡೆಯಬಹುದಾಗಿದೆ.
Diwali Offer On Jio 2999 Recharge Plan: ಭಾರತದ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅದರ ಪ್ರಯುಕ್ತ ಅನೇಕ ಟೆಲಿಕಾಂ ಆಪರೇಟರ್ಗಳು ತಮ್ಮ ಗ್ರಾಹಕರಿಗೆ ದೀಪಾವಳಿ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದೀಗ ನಾವು ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ದೀಪಾವಳಿ ಹಬ್ಬದ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ.
ರಿಲಯನ್ಸ್ ಜಿಯೋ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿದೆ. Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ.
Jio 2999 Recharge Plan
ಇದೀಗ ನೀವು Jio 2,999 ವಾರ್ಷಿಕ ರಿಚಾರ್ಜ್ ಪ್ಲಾನ್ ಮೇಲೆ 23 ದಿನಗಳನ್ನು ಹೆಚ್ಚುವರಿಯಾಗಿ ಪಡೆಯಬಹುದಾಗಿದೆ. ಈ ಪ್ಲಾನ್ ನಲ್ಲಿ ನೀವು ದಿನಕ್ಕೆ 2.5GB ಡೇಟಾ, ಅನಿಯಮಿತ ಕರೆ, ದಿನಕ್ಕೆ 100 SMS ಅನ್ನು ಪಡೆಯಬಹುದಾಗಿದೆ. Jio 2,999 Recharge Plan 365 ದಿನಗಳ ಮಾನ್ಯತೆಯ್ನನು ಪಡೆದುಕೊಂಡಿದೆ. ಈ ರಿಚಾರ್ಜ್ ಪ್ಲಾನ್ ನಲ್ಲಿ Jio Cinema, Jio ಕ್ಲೌಡ್ ಮತ್ತು Jio TV ಅನ್ನು ಸಹ ಪಡೆಯಬಹುದಾಗಿದೆ. MyJio ಅಪ್ಲಿಕೇಶನ್ ನಲ್ಲಿ ರಿಚಾರ್ಜ್ ಮಾಡುವ ಮೂಲಕ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಪಡೆಯಬಹುದಾಗಿದೆ.
MyJio ಅಪ್ಲಿಕೇಶನ್ ನಿಂದ ರೀಚಾರ್ಜ್ ಮಾಡಿ
ಈ ದೀಪಾವಳಿಯ ರಿಚಾರ್ಜ್ ಕೊಡುಗೆ ಸದ್ಯಕ್ಕೆ My Jio ಅಪ್ಲಿಕೇಶನ್ ನಲ್ಲಿ ಮಾತ್ರ ಲಭ್ಯವಿದೆ. ಗ್ರಾಹಕರಿಗೆ ಬೇರೆ ರಿಚಾರ್ಜ್ ಪ್ಲಾಟ್ ಫಾರ್ಮ್ ನಲ್ಲಿ ಈ ಆಫರ್ ಅನ್ನು ಪಡೆದುಕೊಳ್ಳಬಹುದೇ ಇಲ್ಲವೇ ಎಂಬುದನ್ನು ರಿಲಯನ್ಸ್ ಜಿಯೋ ಇನ್ನೂ ಸ್ಪಷ್ಟಪಡಿಸಿಲ್ಲ. ಅಲ್ಲದೆ ನೀವು ಇದರೊಂದಿಗೆ ಇತರ UPI ಅಪ್ಲಿಕೇಶನ್ಗಳನ್ನು ಬಳಸಬಹುದು. ಈ ಆಯ್ಕೆಯು ಪ್ರಸ್ತುತ Paytm ,Phone Pay ಮತ್ತು ಇತರೆ ಇ -ವಾಲೆಟ್ ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಾಗುದಿಲ್ಲ.