Diwali Car Offer: ದೀಪಾವಳಿ ಹಬ್ಬದ ವಿಶೇಷ ಆಫರ್, ಈ ಕಾರುಗಳ ಮೇಲೆ 1 ಲಕ್ಷದ ತನಕ ರಿಯಾಯಿತಿ ಘೋಷಣೆ.
ಈ ಕಾರುಗಳ ಮೇಲೆ ದೀಪಾವಳಿ ಹಬ್ಬದ ಭರ್ಜರಿ ರಿಯಾಯಿತಿ ಘೋಷಣೆ ಆಗಿದೆ.
Diwali Offers On Cars 2023: ದೇಶಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಕಾರ್ ಗಳು ಬಿಡುಗಡೆ ಆಗುತ್ತಿರುತ್ತದೆ. ಕಾರ್ ಖರೀದಿ ಮಾಡುವವರಿಗೆ ಹಣಕಾಸಿನ ವಿಷಯದಲ್ಲಿ ಬಿಟ್ಟು ಆಯ್ಕೆಯಲ್ಲಿ ಸಮಸ್ಯೆ ಉಂಟಾಗುದಿಲ್ಲ. ಇದೀಗ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ ತಯಾರಕ ಕಂಪನಿ ಗಳು ತಮ್ಮ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿವೆ.
ಹೌದು ಇದೀಗ ದೀಪಾವಳಿ ಹಬ್ಬಕ್ಕೆ ಬೆರಳೆಣಿಕೆಯ ದಿನಗಳು ಬಾಕಿ ಇದೆ. ಈ ದೀಪಾವಳಿ ಹಬ್ಬಕ್ಕೆ ಟಾಟಾ, ಮಾರುತಿ ಸುಜುಕಿ, ಹ್ಯುಂಡೈ ಹಾಗೂ ರೆನಾಲ್ಟ್ ಸೇರಿದಂತೆ ವಿವಿಧ ವಾಹನ ತಯಾರಕರು ಕಾರು ಖರೀದಿ ಮೇಲೆ ದೊಡ್ಡಮಟ್ಟದಲ್ಲಿ ರಿಯಾಯಿತಿ ಘೋಷಣೆಯನ್ನು ಮಾಡಿದ್ದಾರೆ.
ಈ ಕಾರುಗಳ ಮೇಲೆ 1 ಲಕ್ಷದ ತನಕ ರಿಯಾಯಿತಿ ಘೋಷಣೆ
*Tata Altroz
Tata Altroz ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿದೆ. ಈ ಕಾರ್ ನ ರೂಪಾಂತರಗಳ ಮೇಲೆ 30 ಸಾವಿರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. Tata Altroz ಎಕ್ಸ್ ಶೋರೂಮ್ ಪ್ರಕಾರ 6.60 ಲಕ್ಷದಿಂದ 10 .74 ಲಕ್ಷ ರೂಪಾಯಿ ಆಗಿದೆ. ಪೆಟ್ರೋಲ್, CNG, ಡೀಸೆಲ್ ಎಂಜಿನ್ ನಲ್ಲಿ 18.5 ರಿಂದ 26.2 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
*Tata Tiago
Tata Tiago ಕಾರ್ ಮೇಲೆ ಭರ್ಜರಿ ರಿಯಾಯಿತಿ ಘೋಷಣೆಯಾಗಿದೆ. ಇದರ CNG ರೂಪಾಂತರದ ಮೇಲೆ 40 ಸಾವಿರ ವರೆಗೆ ರಿಯಾಯಿತಿ ಲಭ್ಯವಿದೆ. Tata Tiago ಬೆಲೆ ಎಕ್ಸ್ ಶೋರೂಮ್ ಪ್ರಕಾರ 8.10 ಲಕ್ಷ ಆಗಿದೆ. ಈ ಕಾರ್ ಪ್ರತಿ ಕೆಜಿ ಗೆ 26.49 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
*Renault Kwid
ಬಿಡುಗಡೆಯ ಸಮಯದಲ್ಲಿ ಜನಪ್ರಿಯತೆ ಗಳಿಸಿದ Renault Kwid ನ ಮಾರಾಟ ಈಗ ನಿಧಾನ ಆಗಿದೆ. ದೇಶದ ಎಲ್ಲಾ ಶೋರೂಮ್ ಗಳಲ್ಲಿ ಈ ಕಾರ್ ಮೇಲೆ 50 ಸಾವಿರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ Renault Kwid ನ ಬೆಲೆ ಎಕ್ಸ್ ಶೋರೂಮ್ ಪ್ರಕಾರ 4.70 ಲಕ್ಷದಿಂದ 6.45 ಲಕ್ಷದ ವರೆಗೆ ಇದೆ. ಪೆಟ್ರೋಲ್ ಎಂಜಿನ್ ನಲ್ಲಿ ದೊರೆಯುವ ಈ ಕಾರ್ 21 ರಿಂದ 23 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
*Hyundai i20N Line
Hyundai i20N line ಕಾರ್ ಮೇಲೆ ಬರೋಬ್ಬರಿ 55 ಸಾವಿರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ Hyundai i20N line ನ ಬೆಲೆ ಎಕ್ಸ್ ಶೋರೂಮ್ ಪ್ರಕಾರ 9 99 ಲಕ್ಷದಿಂದ 12.47 ಲಕ್ಷ ಆಗಿದೆ.
*Maruti Suzuki Baleno
Maruti Suzuki Baleno ಕಾರ್ ಮೇಲೆ ದೀಪಾವಳಿ ಹಬ್ಬದ ಉತ್ತಮ ರಿಯಾಯಿತಿ ಘೋಷಣೆಯಾಗಿದೆ. Baleno ಎಕ್ಸ್ ಶೋರೂಮ್ ಬೆಲೆ 6.61 ಲಕ್ಷದಿಂದ 9.88 ಲಕ್ಷ ಆಗಿದೆ.ಇದು ಗ್ರಾಹಕರಿಗೆ ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗುತ್ತದೆ.
*Maruti Suzuki Wagon R
Maruti Suzuki Wagon R ಮೇಲೆ 58 ಸಾವಿರವರೆಗೆ ಡಿಸ್ಕೌಂಟ್ ಲಭ್ಯವಿದೆ. ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ 5.54 ಲಕ್ಷದಿಂದ 7.42 ಲಕ್ಷ ಆಗಿದೆ. Maruti Suzuki Wagon R ಪೆಟ್ರೋಲ್ ಹಾಗೂ CNG ರೂಪಾಂತರದಲ್ಲಿ 23 .56 ಹಾಗೂ 25 .19 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
Maruti Suzuki Ignis 65 ಸಾವಿರ, Maruti Suzuki Alto K10 70 ಸಾವಿರ, Maruti Suzuki Celerio 73 ಸಾವಿರ, ಹಾಗೆ Citroen C3 1 ಲಕ್ಷದ ವರೆಗೆ ರಿಯಾಯಿತಿ ಪ್ರಯೋಜನವನ್ನು ಒಳಗೊಂಡಿದೆ. ಈ ಆಫರ್ ಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರ್ ಶಿಪ್ ಗೆ ಭೇಟಿ ನೀಡಿ.