Ads By Google

DL And RC: DL ಮತ್ತು RC ಯಲ್ಲಿ ಇನ್ನುಮುಂದೆ QR ಕೋಡ್, ಹೊಸ DL ಮತ್ತು ವಾಹನ ಖರೀದಿಸುವವರಿಗೆ ಹೊಸ ನಿಯಮ

central government change the DL and RC rules in india

Image Credit: Original Source

Ads By Google

DL And RC Latest Update: ಸದ್ಯ ದೇಶದಲ್ಲಿ ಸಾಕಷ್ಟು ಹೊಸ ಹೊಸ ನಿಯಮಗಳು ಬದಲಾಗುತ್ತಿದೆ. ಜನರು ಕೇಂದ್ರದ ಹೊಸ ನಿಯಮವನ್ನು ತಪ್ಪದೆ ಪಾಲಿಸಬೇಕಿದೆ. ಇತ್ತೀಚೆಗಂತೂ ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ.

ಇನ್ನು ಪ್ರತಿ ವಾಹನ ಸವಾರರು ಕೂಡ Driving Licence ಮಾತ್ತು Registration Certificate ಹೊಂದಿರುವುದು ಕಡ್ಡಾಯವಾಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ ಯಾವುದೇ ಸಣ್ಣ ರೀತಿಯ ತಪ್ಪು ಮಾಡಿ ಸಂಚಾರಿ ಪೋಲೀಸರ ಬಳಿ ಸಿಕ್ಕಿಬಿದ್ದರೆ ಅವರು ಮೊದ್ಲು ಕೇಳುವ ದಾಖಲೆ DL ಮತ್ತು RC ಆಗಿದೆ. ಹೀಗಾಗಿ ಈ ಎರಡು ದಾಖಲೆಗಳು ಅಗತ್ಯವಾಗಿದೆ. ಸದ್ಯ RC ಮತ್ತು DL ಗೆ ಸಂಬಂಧಿಸಿದಂತೆ ಕೇಂದ್ರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Image Credit: YD News

ದೇಶದಲ್ಲಿ ಜಾರಿಗೆ ಬರಲಿದೆ ಏಕರೂಪದ DL ಮತ್ತು RC
ಈ ಹಿಂದೆ ಕೇಂದ್ರ ಸರ್ಕಾರ ಏಕರೂಪದ DL ಮತ್ತು RC ಇರಬೇಕು ಎಂದು ಆದೇಶವನ್ನು ಹೊರಡಿಸಿತ್ತು. ಈ ಆದೇಶದ ಅನುಗುಣವಾಗಿ ಸರ್ಕಾರ ಏಕರೂಪದ DL ಮತ್ತು RC ಯನ್ನು ಜಾರಿಗೆ ತರಲು ಸಾಕಷ್ಟು ಕ್ರಮ ಕೈಗೊಂಡಿದೆ. ಸದ್ಯ ದೇಶದಾದ್ಯಂತ ಏಕರೂಪ ಚಾಲನಾ ಪರವಾನಗಿ ಹಾಗೂ ವಾಹನಗಳ ನೋಂದಣಿ ಪ್ರಮಾಣಪತ್ರ ಹೊಂದುವ ಬಗ್ಗೆ ಸರ್ಕಾರದಿಂದ ಹೊಸ ಆದೇಶ ಪ್ರಕಟವಾಗಿದೆ. 2024 ರ ಫೆಬ್ರವರಿಯಲ್ಲಿ ಏಕರೂಪದ DL ಮತ್ತು RC ಜಾರಿಗೆ ಬರಲಿದೆ. ಇನ್ನುಮುಂದೆ ಏಕರೂಪದ DL ಮತ್ತು RC ಯಲ್ಲಿ ಕ್ಯೂಆರ್ ಕೋಡ್ ಕೂಡ ಇರಲಿದೆ.

DL And RC Smart Card
Driving Licence ಮತ್ತು Registration Certificate ಗಾಗಿ ಚಿಪ್ ಗಳು ಮತ್ತು QR ಕೋಡ್ ಒಳಗೊಂಡ ಅತ್ಯಾಧುನಿಕ ಸೌಲಭ್ಯವಿರುವ ಸ್ಮಾರ್ಟ್ ಕಾರ್ಡ್ ಗಳನ್ನೂ ಪರಿಚಯಿಸಲು RTO ತಯಾರಿ ನಡೆಸುತ್ತಿದೆ. ಪ್ರಸ್ತುತ ಮಾರಾಟಗಾರರು ಕಳೆದ 15 ವರ್ಷಗಳಿಂದ ಚಿಪ್‌ ಗಳನ್ನು ಒಳಗೊಂಡಿರುವ ಸ್ಮಾರ್ಟ್ ಕಾರ್ಡ್‌ಗಳನ್ನು ಪೂರೈಸುತ್ತಿದ್ದಾರೆ ಮತ್ತು ಫೆಬ್ರವರಿ 2024 ರಲ್ಲಿ ಅದರ ಒಪ್ಪಂದವನ್ನು ಮುಕ್ತಾಯಗೊಳಿಸಲಿದ್ದಾರೆ.

Image Credit: Team BHP

ಡಿಜಿಟಲ್ ಡಿಎಲ್ ಮತ್ತು ಆರ್ ಸಿ ವಿಶೇಷತೆ ಏನು..?
ಇನ್ನು DL ನ ಮುಂಭಾಗದಲ್ಲಿ ಕಾರ್ಡ್‌ ದಾರರ ಹೆಸರು, ಸಿಂಧುತ್ವ, ಜನ್ಮ ದಿನಾಂಕ, ರಕ್ತದ ಗುಂಪು, ವಿಳಾಸ ಮತ್ತು ಭಾವಚಿತ್ರ ಇರುತ್ತದೆ. ಅಲ್ಲದೆ ಚಿಪ್ ಅನ್ನು ಸಹ ಸ್ಥಾಪಿಸಲಾಗಿದೆ. ವಾಹನ ಮಾದರಿ ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ಕಾರ್ಡ್‌ನ ಹಿಂಭಾಗದಲ್ಲಿ QR ಕೋಡ್‌ ನೊಂದಿಗೆ ನಮೂದಿಸಲಾಗುತ್ತದೆ.

ಹಾಗೆಯೆ RC ಮುಂಭಾಗದಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾನ್ಯತೆ, ಚಾಸಿಸ್, ಎಂಜಿನ್ ಸಂಖ್ಯೆಗಳು, ಮಾಲೀಕರ ಮಾಹಿತಿ ಮತ್ತು ವಿಳಾಸ ಇರುತ್ತದೆ. ಕಾರ್ಡ್‌ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ಮಾದರಿ, ವಾಹನದ ಮಾದರಿ, ಆಸನ ಸಾಮರ್ಥ್ಯ, ಹಣಕಾಸು ಮಾಹಿತಿಯೊಂದಿಗೆ ಕ್ಯೂಆರ್ ಕೋಡ್ ಇರುತ್ತದೆ. ಈ ಕ್ಯೂಆರ್ ಕೋಡ್‌ನ ವಿಶೇಷತೆ ಎಂದರೆ ಇದರಿಂದಾಗಿ ಕಾರ್ಡ್‌ದಾರರ ವಿವರಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸುಲಭವಾಗುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in