News Channel Anchor: ಕನ್ನಡದ ಟಿವಿ ನ್ಯೂಸ್ ರಿಪೋರ್ಟರ್ ಗಳಿಗೆ ಇರುವ ಸಂಬಳ ಎಷ್ಟು ಗೊತ್ತಾ?

ಕನ್ನಡ ನ್ಯೂಸ್ ಚಾನೆಲ್ಗಳಲ್ಲಿ ನಿರೂಪಕನಾಗಿ ಕಾಣಿಸಿಕೊಳ್ಳುವಂತಹ ನಿರೂಪಕರಿಗೆ ಎಷ್ಟು ಸಂಬಳ ಸಿಗುತ್ತದೆ ಎಂಬುದನ್ನು ನೋಡೋಣ.

Kannada News Channel Anchor Salary: ಚಿಕ್ಕ ವಯಸ್ಸಿನಲ್ಲಿ ನಾವು ಯಾವುದೇ ಕೆಲಸ ಇಲ್ಲದೆ ನಮಗೆ ಇಷ್ಟ ಬಂದ ಹಾಗೆ ನಮ್ಮ ಜೀವನವನ್ನು ಎಂಜಾಯ್ ಮಾಡ್ಕೊಂಡು ಬರ್ತೇವೆ. ಆದರೆ ಒಂದು ಹಂತ ಆದ ನಂತರ ಪ್ರತಿಯೊಬ್ಬರೂ ಕೂಡ ಕೆಲವೊಂದು ಕೆಲಸಗಳನ್ನು ಜೀವನ ನಿರ್ವಹಣೆಗೆ ಹಾಗೂ ನಮ್ಮನೆ ನಂಬಿಕೊಂಡಿರುವಂತಹ ಮನೆಯವರ ನಿರ್ವಹಣೆಗೆ ಮಾಡಲೇಬೇಕಾಗುತ್ತದೆ. ಕೆಲವರು ತಾವು ವಿದ್ಯಾಭ್ಯಾಸ ಮಾಡಿರುವಂತಹ ವಿದ್ಯೆಗೆ ಸರಿ ಹೊಂದುವಂತಹ ಕೆಲಸಗಳನ್ನು ಮಾಡುತ್ತಾರೆ ಇನ್ನು ಕೆಲವರು ಸರಿಯಾದ ಕೆಲಸ ಸಿಗದೇ ಇದ್ದಾಗ ಸಿಗುವಂತ ಕೆಲಸವನ್ನೇ(Job) ಸರಿಯಾಗಿ ಮಾಡುವಂತ ಕೆಲಸವನ್ನು ಮಾಡುತ್ತಾರೆ.

ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿರೂಪಕರಿಗೆ ಸಿಗುವಂತಹ ಸಂಬಳದ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಹೌದು ನೀವು ಟಿವಿಯಲ್ಲಿ ನೋಡುವಾಗ ಕೆಲವೊಂದು ನ್ಯೂಸ್ ಚಾನೆಲ್ ಗಳಲ್ಲಿ ಯುವ ನಿರೂಪಕರನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ನ್ಯೂಸ್ ಚಾನೆಲ್ ಗಳಲ್ಲಿ ಒಂದು ಕಾಲದಲ್ಲಿ ರೆಹಮಾನ್ ಶೀತಲ್ ಸೇರಿದಂತೆ ಸಾಕಷ್ಟು ಸ್ಟಾರ್ ನಿರೂಪಕರನ್ನು ಕೂಡ ನಾವು ಕಂಡಿದ್ದೇವೆ. ಅದೇ ರೀತಿ ಇವತ್ತು ಕೂಡ ನೀವು ಸಾಕಷ್ಟು ನ್ಯೂಸ್ ಚಾನೆಲ್ ಗಳಲ್ಲಿ ಎಲ್ಲರೂ ಮೆಚ್ಚುವಂತಹ ನಿರೂಪಕರನ್ನು ಕೂಡ ಕಾಣಬಹುದಾಗಿದ್ದು ಈ ನಿರೂಪಕರು ಸಾಮಾನ್ಯವಾಗಿ ಜರ್ನಲಿಸಂ ಡಿಗ್ರಿಯನ್ನು(Journalism Degree) ಪಡೆದುಕೊಂಡು ಬಂದಿರುತ್ತಾರೆ.

Kannada News Channel Anchor Salary
Image Source: Pinterest

ಕೆಲವರು ಈ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳ ಕಾಲ ತಮ್ಮ ಅನುಭವವನ್ನು ಪಡೆದ ನಂತರ ನಿರೂಪಕರಾಗಿರುವವರು ಕೂಡ ಸಾಕಷ್ಟು ಜನ ಇದ್ದಾರೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಭಾಷೆಯಲ್ಲಿ ನ್ಯೂಸ್ ನಿರೂಪಕರಿಗೆ ಸ್ವಲ್ಪ ಸಂಬಳ ಕಡಿಮೆ ಇರಬಹುದು ಆದರೂ ಕೂಡ ಬೇರೆ ಕೆಲಸಗಳಿಗೆ ಹೋಲಿಸಿದರೆ ಅನುಭವದ ಜೊತೆಗೆ ಇಲ್ಲಿ ಕೂಡ ಸಂಬಳ ಹೆಚ್ಚಾಗುವುದನ್ನು ನೀವು ಕಾಣಬಹುದಾಗಿದೆ. ಹಾಗಿದ್ರೆ ಬನ್ನಿ ಕನ್ನಡ ನ್ಯೂಸ್ ಚಾನೆಲ್ಗಳಲ್ಲಿ ನಿರೂಪಕನಾಗಿ ಕಾಣಿಸಿಕೊಳ್ಳುವಂತಹ ನಿರೂಪಕರಿಗೆ ಎಷ್ಟು ಸಂಬಳ ಸಿಗುತ್ತದೆ ಎಂಬುದನ್ನು ನೋಡೋಣ.

ಸಾಮಾನ್ಯ ರೂಪದಲ್ಲಿ ಸುದ್ದಿ ನಿರೂಪಕರಿಗೆ(News Channel Anchor) ಆರಂಭಿಕವಾಗಿ ತಿಂಗಳಿಗೆ 12 ಸಾವಿರ ರೂಪಾಯಿಯಿಂದ 25000 ವರೆಗೂ ಕೂಡ ಸಂಬಳ ಇರುತ್ತದೆ. ಐದು ವರ್ಷಗಳ ಅನುಭವವನ್ನು ಪಡೆದ ನಂತರ ಸುದ್ದಿ ನಿರೂಪಕರ ಸಂಬಳ ಎನ್ನುವುದು ಐವತ್ತು ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿ ವರೆಗೂ ಕೂಡ ಹೆಚ್ಚಾಗುತ್ತದೆ.

Kannada News Channel Anchor Salary
Image Source; The Cognate

ಹೀಗಾಗಿ ಒಂದು ವೇಳೆ ನೀವು ಕೂಡ ಸುದ್ದಿ ನಿರೂಪಣೆ ಮಾಡುವಂತಹ ಉತ್ತಮ ಮಾತುಗಾರಿಕೆಯನ್ನು ಹೊಂದಿದ್ದರೆ ಅಥವಾ ಆಗು ಹೋಗುವಿಕೆಗಳ ಬಗ್ಗೆ ಜ್ಞಾನವನ್ನು ಹೊಂದಿದ್ದರೆ ಖಂಡಿತವಾಗಿ ನೀವು ನ್ಯೂಸ್ ಚಾನೆಲ್ ಗಳಲ್ಲಿ ನಿರೂಪಣೆ ಕೆಲಸಕ್ಕಾಗಿ ಅಪ್ಲೈ ಮಾಡಬಹುದಾಗಿದೆ. ಈ ಕೆಲಸದ ಬಗ್ಗೆ ನಿಮಗೂ ಕೂಡ ಆಸಕ್ತಿ ಇದ್ದರೆ ಖಂಡಿತವಾಗಿ ನೀವು ಸಂಬಂಧಪಟ್ಟಂತಹ ಸುದ್ದಿ ವಾಹಿನಿ ಗಳಿಗೆ ನಿಮ್ಮ ಅರ್ಜಿಯನ್ನು ಹಾಗೂ ಕೆಲಸ ಮಾಡಿರುವಂತಹ ಅನುಭವದ ವಿವರಗಳನ್ನು ಸಲ್ಲಿಸುವ ಮೂಲಕ ಕೆಲಸಕ್ಕೆ ಪ್ರಯತ್ನಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group