loan Doc: ಬ್ಯಾಂಕಿನಲ್ಲಿ ಗೃಹಸಾಲ ಮಾಡುವವರಿಗೆ ಜಾರಿಗೆ ಬಂತು ಹೊಸ ರೂಲ್ಸ್, ಈ 4 ದಾಖಲೆ ಇಲ್ಲದಿದ್ದರೆ ನಿಮ್ಮ ಅರ್ಜಿ ರದ್ದು.

ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಗೃಹ ಸಾಲದ ಅರ್ಜಿಯು ತಿರಸ್ಕಾರಗೊಳ್ಳುತ್ತದೆ.

Document For Home Loan: ದೇಶದ ಜನಪ್ರಿಯ ಬ್ಯಾಂಕುಗಳು ಜನರಿಗಾಗಿ ವೈಯಕ್ತಿಕ ಸಾಲ, ಗೃಹಸಾಲ, ವಾಹನ ಸಾಲಗಳನ್ನು ನೀಡುತ್ತವೆ. ಜನರು ತಮಗೆ ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ ಸಾಲದ ಮೊರೆಹೋಗುತ್ತಾರೆ. ಇನ್ನು ಹೆಚ್ಚಿನ ಜನರು ತಮ್ಮ ಮನೆ ನಿರ್ಮಾಣದ ಕನಸನ್ನು ಈಡೇರಿಸಿಕೊಳ್ಳಲು Home Loan ಅನ್ನು ಪಡೆಯುವುದು ಸಹಜ. ಇನ್ನು ಜನರು ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿ ಹೆಚ್ಚಾಗಿ ಬಡ್ಡಿಯ ಬಗ್ಗೆ ಯೋಚಿಸುವುದು ಸಹಜ.

Document For Home Loan
Image Credit: hdfcsales

ಬ್ಯಾಂಕಿನಲ್ಲಿ ಗೃಹಸಾಲ ಮಾಡುವವರಿಗೆ ಜಾರಿಗೆ ಬಂತು ಹೊಸ ರೂಲ್ಸ್
ಕಡಿಮೆ ಬಡ್ಡಿದರದಲ್ಲಿ (Interest Rate) ಯಾವ ಬ್ಯಾಂಕ್ ಗಳು ಸಾಲವನ್ನು ನೀಡುತ್ತವೆ ಎಂದು ಗ್ರಾಹಕರು ಸಾಲ ಪಡೆಯುವ ಮುನ್ನ ಯೋಚಿಸುತ್ತಾರೆ. ಇನ್ನು ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುವ ಸಮಯದಲ್ಲಿ ಬ್ಯಾಂಕ್ ನ ಎಲ್ಲ ನಿಯಮವನ್ನು ಸಾಲಗಾರರು ಅನುಸರಿಸಬೇಕಾಗುತ್ತದೆ.

ಕೆಲವೊಮ್ಮೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ ಅರ್ಜಿಯು ತಿರಸ್ಕಾರವಾಗುವ ಸಾಧ್ಯತೆ ಇರುತ್ತದೆ. ನೀವು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಸಾಲದ ಅರ್ಜಿಯು ತಿರಸ್ಕಾರಗೊಳ್ಳುತ್ತದೆ. ಗೃಹ ಸಾಲವನ್ನು ನೀಡುವ ಮುನ್ನ ಬ್ಯಾಂಕುಗಳು ಅರ್ಜಿದಾರರ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಯಾವುದೇ ದಾಖಾಲೆಯಲ್ಲಿ ತಪ್ಪಿದ್ದರು ಕೂಡ ಬ್ಯಾಂಕ್ ಅಂತವರ ಅರ್ಜಿಯನ್ನು ತಿರಸ್ಕರಿಸುತ್ತದೆ.

Home Loan
Image Credit: Idfcfirstbank

ಈ 4 ದಾಖಲೆ ಇಲ್ಲದಿದ್ದರೆ ನಿಮ್ಮ ಅರ್ಜಿ ರದ್ದು
*ನೀವು ಸಾಲವನ್ನು ತೆಗೆದುಕೊಳ್ಳಲು ಕನಿಷ್ಠ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿಲ್ಲದಿದ್ದರೆ ಬ್ಯಾಂಕ್‌ ಗಳು ಕೆಲವೊಮ್ಮೆ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸುತ್ತವೆ. ಸದ್ಯ 700 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ (Credit Score) ನೊಂದಿಗೆ ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತವೆ. ನಿಮ್ಮ ಹಳೆಯ ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವ ಮಾರ್ಗವಾಗಿದೆ.

*ನೀವು ಪರ್ಸನಲ್ ಲೋನ್ ಅಥವಾ ಇನ್ನಾವುದೇ ರೀತಿಯ ಲೋನ್ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಲೋನ್ ಮೊತ್ತವು ನಿಮ್ಮ ಆದಾಯಕ್ಕೆ ಹೊಂದಿಕೆಯಾಗದಿದ್ದರೆ ನಿಮ್ಮ ಲೋನ್ ಅರ್ಜಿಯನ್ನು ತಿರಸ್ಕರಿಸಬಹುದು. ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿಲ್ಲದಿದ್ದರೂ ಸಹ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸಬಹುದು.

Join Nadunudi News WhatsApp Group

Home Loan Latest Update
Image Credit: Grihashakti

*ಬ್ಯಾಂಕ್ ನ ಸಾಲದ ನಿಯಮಗಳು ಮುಖ್ಯವಾಗಿರುತ್ತದೆ. ನೀವು ಸಾಲದ ಅರ್ಜಿಯಲ್ಲಿ ಸರಿಯಾದ ಮಾಹಿತಿಯನ್ನು ನೀಡದಿದ್ದರೆ ಅಥವಾ ನೀವು ನೀಡಿದ ಮಾಹಿತಿಯು ಸುಳ್ಳು ಎಂದು ಕಂಡುಬಂದರೆ ನಿಮ್ಮ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಇರುತ್ತದೆ.

*ನೀವು ಸ್ಥಿರವಾದ ಕೆಲಸವನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ನಿಮಗೆ ಹಣವನ್ನು ನೀಡಲು ಮುಂದಾಗುವುದಿಲ್ಲ. ನೀವು ಉದ್ಯೋಗವನ್ನು ಆಗಾಗ ಬದಲಾಯಿಸುತ್ತಿರುವುದು ಉತ್ತಮ. ಅನೇಕ ಬಾರಿ ಜನರು ಈಗಾಗಲೇ ಸಾಕಷ್ಟು ಸಾಲವನ್ನು ತೆಗೆದುಕೊಂಡಿದ್ದು, ನಂತರ ಅವರು ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಅರ್ಜಿ ತಿರಸ್ಕಾರವಾಗಲಿದೆ.

Join Nadunudi News WhatsApp Group