Ancestral Property: ಪಿತ್ರಾರ್ಜಿತ ಆಸ್ತಿ ಖರೀದಿ ಮಾಡುವವರಿಗೆ ಹೊಸ ನಿಯಮ, ಈ ದಾಖಲೆಗಳು ಕಡ್ಡಾಯ.

ಪಿತ್ರಾರ್ಜಿತ ಆಸ್ತಿಯನ್ನು ಖರೀದಿಸುವ ಮುನ್ನ ಈ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯ.

Document Required For Ancestral Property  Purchase: ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ನಿಯಮವನ್ನು ಭಾರತೀಯ ನ್ಯಯಾಲಯ ಜಾರಿಗೊಳಿಸಿದೆ. ಆಸ್ತಿಯನ್ನು ಮುಖ್ಯವಾಗಿ ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಸ್ವ- ಸ್ವಾದೀನ ಆಸ್ತಿ ಮತ್ತು ಪೂರ್ವಜರ ಆಸ್ತಿಯಾಗಿ ವಿಂಗಡಿಸಲಾಗುತ್ತದೆ.

ಸ್ವಂತವಾಗಿ ಸಂಪಾದಿಸಿದ ಆಸ್ತಿಯನ್ನು ಸ್ವ- ಸ್ವಾದೀನ ಆಸ್ತಿ ಎನ್ನಲಾಗುತ್ತದೆ. ಇನ್ನು ಹಲವಾರು ತಲೆಮಾರುಗಳಿಂದ ಪಡೆದ ಆಸ್ತಿ ಪೂರ್ವಜರ ಆಸ್ತಿ ಆಗಿರುತ್ತದೆ. ನಾಲ್ಕು ತಲೆಮಾರಿನ ಪುರುಷರು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಪೂರ್ವಜರ ಆಸ್ತಿ ಎನ್ನಲಾಗುತ್ತದೆ. ಇದೀಗ ಪಿತ್ರಾರ್ಜಿತ ಆಸ್ತಿಯನ್ನು ಖರೀದಿಸುವಾಗ ಯಾವ ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Document Required For Ancestral Property Purchase
Image Credit: Godigit

ಪೂರ್ವಜರ ಆಸ್ತಿಯ ಹಕ್ಕುಗಳ ಬಗ್ಗೆ ತಿಳಿಯಿರಿ
ಇನ್ನು 2005 ರ ತಿದ್ದುಪಡಿಗೂ ಮುನ್ನ ಪೂರ್ವಜರ ಆಸ್ತಿಯಲ್ಲಿ (Ancestral Property) ಗಂಡು ಮಕ್ಕಳಿಗೆ ಮಾತ್ರ ಅಧಿಕಾರವಿತ್ತು. ಸದ್ಯ 2005 ರ ತಿದ್ದುಪಡಿಯ ನಂತರ ಹೆಣ್ಣುಮಕ್ಕಳು ಪೂರ್ವಜರ ಆಸ್ತಿಯ ಅಧಿಕಾರವನ್ನು ಕೂಡ ಪಡೆದುಕೊಂಡಿದ್ದರು. ಇನ್ನು ಆಸ್ತಿಯನ್ನು ಅನುವಂಶೀಯವಾಗಿ ಪಡೆದಾಗ ಅಂತಹ ಆಸ್ತಿಯ ಬಗ್ಗೆ ಅನೇಕ ವಿಷಯಗಳ ಬಗ್ಗೆ ಗೊಂದಲಗಳಿರುತ್ತದೆ.

ಪೂರ್ವಜರ ಆಸ್ತಿಯ ಹಂಚಿಕೆಗೆ ಯಾರು ಅರ್ಹರು
ಒಮ್ಮೆ ಪೂರ್ವಜರ ಆಸ್ತಿಯನ್ನು ವಿಭಜಿಸಿದರೆ ಅದು ಪೂರ್ವಜರ ಆಸ್ತಿಯ ಲಕ್ಷಣವನ್ನು ಹೊಂದುವುದನ್ನು ನಿಲ್ಲಿಸುತ್ತದೆ ಮತ್ತು ಅದನ್ನು ಸ್ವೀಕರಿಸಿದ ಕುಟುಂಬದ ಸದಸ್ಯರ ಕೈಯಲ್ಲಿ ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿ ಆಗುತ್ತದೆ. ಇದು ಅಂತಹ ಕುಟುಂಬದ ಸದಸ್ಯರಿಗೆ ವ್ಯವಹರಿಸಲು ಅನಿಯಂತ್ರಿತ ಹಕ್ಕನ್ನು ನೀಡುತ್ತದೆ ಮತ್ತು ಅಂತಹ ಆಸ್ತಿಯನ್ನು ವಿಲೇವಾರಿ ಮಾಡಲಾಗುತ್ತದೆ.

Ancestral Property Purchase
Image Credit: Housing

ಪೂರ್ವಜರ ಆಸ್ತಿಯ ಹಂಚಿಕೆಯ ಹಕ್ಕನ್ನು ಎಲ್ಲರು ಹುಟ್ಟಿನಿಂದಲೇ ಪಡೆಯುತ್ತಾರೆ. ಆಸ್ತಿಯ ಮಾಲೀಕರ ಮರಣದ ನಂತರ ಉತ್ತರಾಧಿಕಾರಿಗಳು ಪೂರ್ವಜರ ಆಸ್ತಿಯನ್ನು ಹಂಚಿಕೊಳ್ಳುತ್ತಾರೆ. ಆಸ್ತಿಯ ಮುಖ್ಯ ಮಾಲೀಕರ ಮಕ್ಕಳನ್ನು ಮೊದಲು ಎಣಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಆಸ್ತಿಯನ್ನು ವಿಂಗಡಿಸಲಾಗುತ್ತದೆ.

Join Nadunudi News WhatsApp Group

ಪಿತ್ರಾರ್ಜಿತ ಆಸ್ತಿಯನ್ನು ಖರೀದಿಸುವ ಮುನ್ನ ಈ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯ
*ಪಿತ್ರಾರ್ಜಿತ ಆಸ್ತಿಯನ್ನು ಖರೀದಿ ಮಾಡುವ ಮುನ್ನ ಯಾರು ಆಸ್ತಿಯನ್ನು ಖರೀದಿ ಮಾಡುತ್ತಾರೋ ಅವರ ಉತ್ತರಾಧಿಕಾರದ ವಿವರವನ್ನು ತಿಳಿಯಬೇಕು. ಉತ್ತರಾಧಿಕಾರದ ಮಾಹಿತಿ ಎಂದರೆ ಆಸ್ತಿ ಮಾರಾಟಗಾರರ ಅಂಶದ ಮಾಹಿತಿಯನ್ನು ತಿಳಿಯಬೇಕು.

*ಆಸ್ತಿ ಹಂಚಿಕೆ ಸರಿಯಾಗಿದೆಯಾ? ಆಸ್ತಿ ನಕಲಿಯೇ? ಆಸ್ತಿಗೆ ಎಷ್ಟು ಜನ ವಾರಸುದಾರರಿದ್ದಾರೆ? ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿಯಬೇಕು.

Property Purchase
Image Credit: Original Source

*ಖರೀದಿಸುವ ಆಸ್ತಿಯು ಯಾವುದೇ ವಿವಾದಲ್ಲಿದೆಯಾ ಎನ್ನುವ ಬಗ್ಗೆ ನೀವು ತಿಳಿಯಬೇಕು.

*ಹಾಗೆಯೆ ಆಸ್ತಿಯ ಮೂಲ ಶೀರ್ಷಿಕೆಯನ್ನು (Property Tittle ) ಅನ್ನು ಸಂಬಂಧಿಸಿದ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಪಡೆಯಬೇಕಾಗುತ್ತದೆ.

*ಆಸ್ತಿಯು ಯಾರಿಂದ ಯಾರಿಗೆ ವರ್ಗಾವಣೆ ಆಗಿ ಬಂದಿದೆ ಎನ್ನುವುದರ ಬಗ್ಗೆ ನೀವು ಮಾಹಿತಿ ತಿಳಿಯಬೇಕು.

*ಆಸ್ತಿಯ ಮೂಲ ಮಾಲೀಕ ಮರಣ ಪ್ರಮಾಣ ಪತ್ರವನ್ನು (Death certificate) ಮುಖ್ಯವಾಗಿ ಪರಿಶೀಲನೆ ಮಾಡಬೇಕು.

*ಪೂರ್ವಜರ ಆಸ್ತಿಯ ಖರೀದಿಯ ಸಮಯದಲ್ಲಿ Encumbrance Certificate (EC ) ಮಾಹಿತಿ ತಿಳಿಯಬೇಕು. ಆಸ್ತಿಯು ಎಲ್ಲ ಅಡಚಣೆಗಳು ಹಾಗೂ ಎಲ್ಲ ಸಾಲಗಳಿಂದ ಮುಕ್ತವಾಗಿದೆ ಎಂದು ಈ Encumbrance ಪ್ರಮಾಣ ಪತ್ರ ಮಾಹಿತಿ ನೀಡುತ್ತದೆ.

Join Nadunudi News WhatsApp Group