Ayushman Card Document: ಈ ದಾಖಲೆಗಳು ಇಲ್ಲದಿದ್ದರೆ ಆಯುಷ್ಮನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಕೇಂದ್ರದ ಆದೇಶ.
ಅಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಅಗತ್ಯವಾಗಿದೆ.
Document Required For Apply Ayushman Card: ದೇಶದ ಬಡ ಮತ್ತು ನಿರ್ಗತಿಕ ವರ್ಗದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ ಜನರಿಗಾಗಿ ಹೊಸ ಆರೋಗ್ಯ ಯೋಜನೆಯನ್ನು ಪರಿಚಯಿಸಿದೆ. ಪ್ರಧಾನ ಮಂತ್ರಿ Ayushman Bharat ಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.
ಈ ಯೋಜನೆಯಡಿ ದೇಶದ ಬಡ ಮತ್ತು ನಿರ್ಗತಿಕ ವರ್ಗದವರು ಉಚಿತ ಚಿಕಿತ್ಸೆಯನ್ನು ಪಡೆಯಬಹುದುದಾಗಿದೆ. ಅರ್ಹ ಫಲಾನುಭವಿಗಳು ವಾರ್ಷಿಕವಾಗಿ ತಲಾ 5,00,000 ರೂ. ಗಳ ಉಚಿಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ನೀವು ಕೂಡ ಈ ಆಯುಷ್ಮಾನ್ ಭಾರತ್ ಯೋಜನೆಯನ್ನು ಪಡೆಯಲು ಬಯಸಿದರೆ ಇಂದೇ ಯೋಜನೆಗೆ ಅರ್ಜಿ ಸಲ್ಲಿಸಿ. ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಈ ದಾಖಲೆಗಳು ಇಲ್ಲದಿದ್ದರೆ ಆಯುಷ್ಮನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ
*Aadhaar card
*Ration card
*Mobile number
*Address proof
*ಈ ಮೇಲಿನ ಎಲ್ಲ ದಾಖಲೆಗಳು ಇದ್ದರೆ ಮಾತ್ರ ನೀವು Ayushman Card ಅನ್ನು ಪಡೆಯಬಹುದಾಗಿದೆ.
*ನಿಮ್ಮ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ನೀವು ಈ ಯೋಜನೆಗೆ Online ಅಥವಾ Offline ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆಯುಷ್ಮನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ
*ಅಧಿಕೃತ ವೆಬ್ ಸೈಟ್ http://beneficiary.nha.gov.in ಲಾಗಿನ್ ಆಗುವ ಮೂಲಕ ಸುಲಭವಾಗಿ ಆಯುಷ್ಮಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.
*ಅಲ್ಲಿ ನೀಡಲಾದ ಫಲಾನುಭವಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್ ನಲ್ಲಿ ಸ್ವೀಕರಿಸಿದ OTP ಅನ್ನು ಪರಿಶೀಲಿಸಿ.
*ಅಲ್ಲಿ ಆಯುಷ್ಮಾನ್ ಕಾರ್ಡ್ ಗಾಗಿ ರೇಷನ್ ಕಾರ್ಡ್ ಆಯ್ಕೆಯನ್ನು ನೀವು ನೋಡುತ್ತೀರಿ. ನಿಮ್ಮ ಕುಟುಂಬದ ಹೆಸರನ್ನು ಇಲ್ಲಿ ಹುಡುಕಿ ನಂತರ, ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರು ಮತ್ತು ವಿವರಗಳನ್ನು ನಮೂದಿಸಿ.
*ವಿವರಗಳಲ್ಲಿ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಪರಿಶೀಲಿಸಿ. ಸಮ್ಮತಿಯ ನಮೂನೆಯು ತೆರೆಯುತ್ತದೆ, ಅದರ ಎಲ್ಲಾ ಆಯ್ಕೆಗಳನ್ನು ಟಿಕ್ ಮಾಡಿ ಮತ್ತು ಬಲಭಾಗದಲ್ಲಿರುವ ಅನುಮತಿಸು ಬಟನ್ ಕ್ಲಿಕ್ ಮಾಡಬೇಕು.
*ಆಯುಷ್ಮಾನ್ ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರನ್ನು ಫಲಾನುಭವಿ ಎಂದು ಪರದೆಯ ಮೇಲೆ ನೀಲಿ ಬಾಕ್ಸ್ ನಲ್ಲಿ ಪ್ರದರ್ಶಿಸಲಾಗುತ್ತದೆ.
*ಬಾಕ್ಸ್ ನ ಕೆಳಗೆ E-KYC ಆಧಾರ್ OTP ಆಯ್ಕೆಯನ್ನು ಆಯ್ಕೆಮಾಡಿ. ಆಧಾರ್ ಪರಿಶೀಲನೆಯನ್ನು ನಿರ್ವಹಿಸಿದ ನಂತರ, ಪುಟದ ಬಲಭಾಗದಲ್ಲಿರುವ ಕ್ಯಾಪ್ಚರ್ ಫೋಟೋ ಕೆಳಗಿನ ಐಕಾನ್ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
*ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯಿರಿ ಮತ್ತು ಪ್ರೊಸೀಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
*ನಂತರ ಫಾರ್ಮ್ ನಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಸರಿ ಬಟನ್ ಕ್ಲಿಕ್ ಮಾಡಿದರೆ ನೀವು ಸುಲಭವಾಗಿ ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು.