Property Document: ಇನ್ನುಮುಂದೆ ಈ ದಾಖಲೆಗಳು ಇಲ್ಲದಿದ್ದರೆ ಆಸ್ತಿ ಖರೀದಿಸಲು ಸಾಧ್ಯವಿಲ್ಲ, ಎಲ್ಲರಿಗೂ ಒಂದೇ ನಿಯಮ.

ಆಸ್ತಿ ಖರೀದಿ ಮಾಡುವಾಗ ಯಾವೆಲ್ಲ ದಾಖಲೆಗಳು ಅಗತ್ಯ ...?

Document Required For Property Purchase: ಆಸ್ತಿ ಖರೀದಿಯ ಸಮಯದಲ್ಲಿ ಕೇಂದ್ರದ ಎಲ್ಲ ನಿಯಮವನ್ನು ಪಾಲಿಸಬೇಕಾಗುತ್ತದೆ. ಆಸ್ತಿ ಖರೀದಿಯು ಒಂದು ರೀತಿಯ ಉಳಿತಾಯ ಆಗಿರುವುದರಿಂದ ಹೆಚ್ಚಿನ ಜನರು ಆಸ್ತಿ ಖರೀದಿಸಲು ಬಯಸುತ್ತಾರೆ.

ಆಸ್ತಿ ಖರೀದಿಸಿ ತಮ್ಮ ಬಳಿ ಇರುವ ಹಣವನ್ನು ಉಳಿತಾಯ ಅಮಾಡುವ ಯೋಜನೆಯನ್ನು ಹಾಕುತ್ತಾರೆ. ಆದರೆ ಭಾರತದಲ್ಲಿ ಅಸ್ತಿ ಖರೀದಿಗೆ ಅದರದ್ದೇ ಆದ ನಿಯಮಗಳಿವೆ ಎನ್ನಬಹುದು.

Property Purchase Latest Update
Image Credit: Housing

ಆಸ್ತಿ ಖರೀದಿಯ ಸಮಯದಲ್ಲಿ ದಾಖಲೆಗಳು ಅಗತ್ಯ
ಒಂದು ಸಣ್ಣ ಆಸ್ತಿಯನ್ನು ಕೂಡ ಬೇರೆಯವರಿಂದ ಖರೀದಿ ಮಾಡಬೇಕಿದ್ದರೆ ನೀವು ಆಸ್ತಿ ಖರೀದಿಯ ಎಲ್ಲ ನಿಯಮಗಳ ಬಗ್ಗೆ ತಿಳಿರಬೇಕು. ಇದೀಗ ನಾವು ಆಸ್ತಿ ಖರೀದಿಯ ಸಮಯದಲ್ಲಿ ಬೇಕಾಗುವ ದಾಖಲೆಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ. ಆಸ್ತಿ ಖರೀದಿಯ ಸಮಯದಲ್ಲಿ ಈ ಎಲ್ಲ ದಾಖಲೆಗಳು ಮುಖ್ಯ ಪಾತ್ರ ವಹಿಸುತ್ತದೆ ಎನ್ನಬಹುದು.

*Sale deed (ಮಾರಾಟದ ಒಪ್ಪಂದದ ಪತ್ರ)
ಮಾರಾಟದ ಒಪ್ಪಂದದ ಪತ್ರವು ಆಸ್ತಿಯ ಬಗ್ಗೆ ಎಲ್ಲ ಮಾಹಿತಿಯನ್ನು ಹೊಂದಿರುತ್ತದೆ. ಆಸ್ತಿಯ ಹಕ್ಕು, ಆಸ್ತಿಯ ನಿಖರ ಅಳತೆ, ಆಸ್ತಿಯ ಹತೋಟಿ, ದಿನಾಂಕ, ಷರತ್ತು, ಪಾವತಿ ಸಾಮಾನ್ಯ ಪ್ರದೇಶಗಳು ಮತ್ತು ವಿವಿಧ ಸೌಲಭ್ಯ ವಿವರ ಈ Sale deed ನಲ್ಲಿ ಅಡಕವಾಗಿರುತ್ತದೆ. ಆಸ್ತಿ ಖರೀದಿ ಮತ್ತು ಸ್ವಾದೀನ ಪಡಿಸಿಕೊಳ್ಳುವ ಮನೆ ಸಾಲಕ್ಕಾಗಿ ಈ ದಾಖಲೆಯನ್ನು ನೀಡಲಾಗುತ್ತದೆ.

Document Required For Property Purchase
Image Credit: Propertyguru

*Mother Deed (ಮದರ್ ಡೀಡ್)
ಆಸ್ತಿಯ ಮಾಲೀಕತ್ವವನ್ನು ಗುರುತಿಸಲು ಮದರ್ ಡೀಡ್ ಪ್ರಮುಖ ದಾಖಲೆಯಾಗಿದೆ. ಖರೀದಿದಾರರು ಯಾರಿಂದ ಆಸ್ತಿಯನ್ನು ಖರೀದಿ ಮಾಡುತ್ತದೆ ಎನ್ನುವ ವಿವರ ಈ ಮದರ್ ಡೀಡ್ ನಲ್ಲಿ ಲಭ್ಯವಾಗುತ್ತದೆ. ಬ್ಯಾಂಕಿಂಗ್ ಸಾಲ ಪಡೆಯುವ ಸಮಯದಲ್ಲಿ ಈ ಮದರ್ ಡೀಡ್ ಪ್ರಮುಖ ದಾಖಲೆಯಾಗಿದೆ.

Join Nadunudi News WhatsApp Group

*Encumbrance Certificate
ಆಸ್ತಿಯು ಎಲ್ಲ ಅಡಚಣೆಗಳು ಹಾಗೂ ಎಲ್ಲ ಸಾಲಗಳಿಂದ ಮುಕ್ತವಾಗಿದೆ ಎಂದು ಈ Encumbrance ಪ್ರಮಾಣ ಪತ್ರ ಮಾಹಿತಿ ನೀಡುತ್ತದೆ. ಬ್ಯಾಂಕಿಂಗ್ ಸಾಲ ಪಡೆಯುವ ಸಮಯದಲ್ಲಿ ಈ ಪ್ರಮಾಣ ಪತ್ರ ಪ್ರಮುಖ ದಾಖಲೆಯಾಗಿದೆ. ಆಸ್ತಿ ಸಂಬಂಧಿತ ವಹಿವಾಟಿನ ಎಲ್ಲ ಮಾಹಿತಿ ಈ ದಾಖಲೆಯಲ್ಲಿ ಇರುತ್ತದೆ.

Join Nadunudi News WhatsApp Group