Gold Purchase Rules: ಯಾವುದೇ ID ಅಥವಾ ದಾಖಲೆ ನೀಡದೆ ಎಷ್ಟು ಚಿನ್ನ ಖರೀದಿ ಮಾಡಬಹುದು, ಕೇಂದ್ರದ ನಿಯಮ ಹೇಳುವುದೇನು…?
ಯಾವುದೇ ದಾಖಲೆ ಇಲ್ಲದೆ ಇನ್ನುಮುಂದೆ ಇಷ್ಟು ಚಿನ್ನವನ್ನ ಮಾತ್ರ ಖರೀದಿ ಮಾಡಬಹುದು.
Documents For Gold Purchase: ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವ ವಸ್ತುವೆಂದರೆ ಅದು ಚಿನ್ನ. ಮಾರುಕಟ್ಟೆಯಲ್ಲಿ ಚಿನ್ನದ ದರ ದಿನದಿಂದ ದಿನಕ್ಕೆ ವ್ಯತ್ಯಾಸ ಕಾಣುತ್ತಿರುತ್ತದೆ. ದಿನದಲ್ಲಿ ಏರಿಕೆ ಅಥವಾ ಇಳಿಕೆ ಕಾಣುವ ಚಿನ್ನ ಸದ್ಯ ಚಿನ್ನದ ಬೆಲೆ ಗಗನಕ್ಕೇರಿದೆ. ಈ ಬಾರಿಯ ಹೊಸ ವರ್ಷದ ಆರಂಭದಿಂದ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ ಎನ್ನಬಹುದು. ಇನ್ನು ಚಿನ್ನದ ಬೆಲೆ ಎಷ್ಟೇ ವ್ಯತ್ಯಾಸ ಕಂಡರೂ ಕೂಡ ಬೇಡಿಕೆ ಕಡಿಮೆಯಾಗುವುದಿಲ್ಲ.
ಇನ್ನು ಇತ್ತೀಚಿಗೆ ಕೇಂದ್ರ ಸರ್ಕಾರ ಚಿನ್ನದ ಖರೀದಿ ಮತ್ತು ಮಾರಾಟದಲ್ಲಿ Hallmark ಅನ್ನು ಕಡ್ಡಾಗೊಳಿಸಿರುವದು ಎಲ್ಲರಿಗೂ ತಿಳಿದೇ ಇದೆ. ಚಿನ್ನ ಖರೀದಿಸುವಾಗ ಹಾಲ್ಮಾರ್ಕ್ ಚಿನ್ನವನ್ನೇ ಖಾರೀದಿಸುವುದು ಕಡ್ಡಾಯ. ಇನ್ನು ಚಿನ್ನ ಖರೀದಿಸುವವರು ಚಿನ್ನದ ಪ್ರತಿ ನಿಯಮಗಳ ಬಗ್ಗೆ ತಿಳಿದಿರಬೇಕು. ಚಿನ್ನ ಖರೀದಿಯ ಸಮಯದಲ್ಲಿ ನಗದು ಮಿತಿಯನ್ನು ಕೂಡ ಅಳವಡಿಸಲಾಗುತ್ತದೆ. ಚಿನ್ನವನ್ನು ಮಿತಿಗಿಂತ ಹೆಚ್ಚಿನ ನಗದು ರೂಪದಲ್ಲಿ ಖರೀದಿಸಿದರೆ ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದರ ಬಗ್ಗೆ ನಿಮಗೆ ಅರಿವಿರಲಿ.
ಯಾವುದೇ ID ಅಥವಾ ದಾಖಲೆ ನೀಡದೆ ಎಷ್ಟು ಚಿನ್ನ ಖರೀದಿ ಮಾಡಬಹುದು
ಚಿನ್ನವನ್ನು ಖರೀದಿಸಲು ನೀವು ಮೊತ್ತವನ್ನು ನಗದು ರೂಪದಲ್ಲಿ ನೀಡಬಹುದು, ಆದರೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಮಾರಾಟಗಾರರಿಂದ ಸ್ವೀಕರಿಸಲಾಗುವುದಿಲ್ಲ. ಚಿನ್ನಾಭರಣ ಮಾರಾಟಗಾರರು 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆ ಸ್ವೀಕರಿಸಿದ ಮೊತ್ತಕ್ಕೆ ದಂಡವನ್ನು ವಿಧಿಸಬಹುದು.
ನೀವು ಆಭರಣ ಖರೀದಿಸುವಾಗ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಮಾರಾಟಗಾರರಿಗೆ ನೀಡುವಂತಿಲ್ಲ. ಒಂದುವೇಳೆ 2 ಲಕ್ಷ ರೂ. ಗಿಂತ ಹೆಚ್ಚಿನ ನಗದು ನೀಡುವುದಾದರೆ ಗುರುತಿನ ಪುರಾವೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಅನ್ನು ಮಾರಾಟಗಾರರಿಗೆ ನೀಡಬೇಕಾಗುತ್ತದೆ. ಆಭರಣ ಖರೀದಿಯು 2 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅನ್ನು ನೀಡುವ ಅಗತ್ಯ ಇಲ್ಲ.
ವಿವಾಹಿತ ಮತ್ತು ಅವಿವಾಹಿತರಿಗೆ ಚಿನ್ನ ಖರೀದಿಸುವ ಮಿತಿ ಎಷ್ಟು..?
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಚಿನ್ನದ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ರೀತಿಯ ಮಿತಿಯನ್ನು ಸರ್ಕಾರ ವಿಧಿಸಿದೆ. ವಿವಾಹಿತ ಮಹಿಳೆಯರು ತಮ್ಮ ಬಳಿ ಕನಿಷ್ಠ 500 ಗ್ರಾಂ ಚಿನ್ನವನ್ನು ಸಂಗ್ರಹಿಸಿಡಲು ಸರ್ಕಾರ ಅನುಮತಿ ನೀಡಿದೆ.
ಇನ್ನು ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಚಿನ್ನವನ್ನು ಸರ್ಕಾರ ಅನುಮತಿಸಿದೆ. ಇನ್ನು ಪುರುಷರು ತಮ್ಮ ಬಳಿ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಲು ಸರ್ಕಾರ ಅನುಮತಿಯನ್ನು ನೀಡಿದೆ. ಚಿನ್ನವನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ ಅದು 20 ಪ್ರತಿಶತದಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.