Passport: ಇನ್ನುಮುಂದೆ ಹೊಸ ಪಾಸ್ಪೋರ್ಟ್ ಪಡೆಯಲು ಈ ದಾಖಲೆ ಕಡ್ಡಾಯ, ಕೇಂದ್ರದ ಇನ್ನೊಂದು ಘೋಷಣೆ.
ಇದೀಗ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೆ ನೀಡಬೇಕಾದ ದಾಖಲೆಗಳ ಬಗ್ಗೆ ಹೊಸ ಆದೇಶವನ್ನು ಹೊರಡಿಸಲಾಗಿದೆ.
Documents For Passport Apply: ಸಾಮಾನ್ಯವಾಗಿ ಪಾಸ್ ಪೋರ್ಟ್ (Passport) ವಿದೇಶ ಪ್ರಯಾಣಕ್ಕೆ ಅಗತ್ಯವಾಗಿರುತ್ತದೆ. ಇತ್ತೀಚಿಗೆ ಪಾಸ್ ಪೋರ್ಟ್ ಗುರುತಿನ ಪುರಾವೆಯಾಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ಇನ್ನು ಸರ್ಕಾರ ಇತ್ತೀಚಿಗೆ ಪಾಸ್ ಪೋರ್ಟ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ಜಾರಿಗೊಳಿಸಿದೆ. ಪಾಸ್ ಪೋರ್ಟ್ ನೀಡುವಲ್ಲಿ ಇತ್ತೀಚಿಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.
ಇತ್ತೀಚೆಗಷ್ಟೇ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸರ್ಕಾರ ಒದಗಿಸಿದ ವೇದಿಕೆಯಾದ ಡಿಜಿಲಾಕರ್ ಮೂಲಕ ಅಗತ್ಯ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿದೆ.
ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವವರಿಗೆ ಮಹತ್ವದ ಮಾಹಿತಿ
ವಿವಿಧ ಪ್ರದೇಶಗಳಲ್ಲಿರುವ ಪಾಸ್ ಪೋರ್ಟ್ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್ಟ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಭೌತಿಕ ದಾಖಲೆ ಪರಿಶೀಲನೆಯ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಸರ್ಕಾರದ್ದಾಗಿದೆ. ಇನ್ನು ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತಂದ ಬೆನ್ನಲ್ಲೇ ಇದೀಗ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೆ ನೀಡಬೇಕಾದ ದಾಖಲೆಗಳ ಬಗ್ಗೆ ಹೊಸ ಆದೇಶವನ್ನು ಹೊರಡಿಸಲಾಗಿದೆ.
ನೀವು ಹೊಸ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ಈ ಎಲ್ಲಾ ದಾಖಲೆಗಳು ಅಗತ್ಯವಾಗಿದೆ. ಭಾರತ ಸರ್ಕಾರವು ಪಾಸ್ ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದೆ. ಅಗತ್ಯವಿರುವ ದಾಖಲೆಗಳ ಪರಿಶೀಲನಾಪಟ್ಟಿಯನ್ನು ಹೊಂದಿದ್ದರೆ ನೀವು ಸುಲಭವಾಗಿ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನುಮುಂದೆ ಹೊಸ ಪಾಸ್ಪೋರ್ಟ್ ಪಡೆಯಲು ಈ ದಾಖಲೆ ಕಡ್ಡಾಯ
*ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೆ ವಿಳಾಸದ ಪುರಾವೆ ಅಗತ್ಯ. ವೋಟರ್ ಐ ಕಾರ್ಡ್, ಆಧಾರ್ ಕಾರ್ಡ್ ಅಥವಾ ಇ-ಆಧಾರ್, ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ವಾಟರ್ ಬಿಲ್, ಗ್ಯಾಸ್ ಕನೆಕ್ಷನ್ ಬಿಲ್, ಬ್ಯಾಂಕ್ ಅಕೌಂಟ್ ಸ್ಟೇಟ್ ಮೆಂಟ್, ಆದಾಯ ತೆರಿಗೆ ಅಸೆಸ್ಮೆಂಟ್ ಆರ್ಡರ್, ಬಾಡಿಗೆ ಒಪ್ಪಂದ ಈ ಧಾಖಲೆಗಳಲ್ಲಿ ಯಾವುದಾದರು ಒಂದು ಅಗತ್ಯವಾಗಿದೆ.
*ಇನ್ನು ಹುಟ್ಟಿದ ದಿನಾಂಕದ ಪುರಾವೆಯಾದ ಜನನ ಪ್ರಮಾಣಪತ್ರವನ್ನು ನೀಡಬೇಕು. ಇದರ ಜೊತೆಗೆ ಆಧಾರ್ ಕಾರ್ಡ್ ಅಥವಾ ಇ-ಆಧಾರ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಬೇಕು.
*ಪಾಸ್ ಪೋರ್ಟ್ ಗಾತ್ರದ ಫೋಟೋ ಸೇರಿದಂತೆ ಆಧಾರ್ ಕಾರ್ಡ್ ಅಥವಾ ಇ-ಆಧಾರ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವೋಟರ್ ಐಡಿ ಇದರಲ್ಲಿ ಯಾವುದಾದರು ಒಂದರ ಪ್ರತಿಯನ್ನು ನೀಡಬೇಕು.
*ಹಳೆಯ ಪಾಸ್ ಪೋರ್ಟ್ ಇದ್ದರೆ ಅದನ್ನು ಕೂಡ ದಾಖಲೆಯಾಗಿ ನೀಡಬೇಕಾಗುತ್ತದೆ.