Ration Card Apply:ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಈ ದಾಖಲೆ ಅಗತ್ಯ ಬೇಕೇಬೇಕು, ಇಲ್ಲವಾದರೆ ಅರ್ಜಿ ತಿರಸ್ಕಾರ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಗತ್ಯವಾಗಿ ಬೇಕಾಗುವ ದಾಖಲೆಗಳು ಏನು.
Documents For Ration Card Application: ರೇಷನ್ ಕಾರ್ಡ್ (Ration Card ) ಕುರಿತಾಗಿ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಮುಖ್ಯವಾಗಿದೆ.
ಇನ್ನ್ನು ರಾಜ್ಯ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿಶೇಷ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಹೊರಡಿಸುತ್ತಿದೆ. ಈ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಪಡೆಯುವ ಹಂಬಲ ಜನರಲ್ಲಿ ಹೆಚ್ಚುತ್ತಿದೆ. ಯೋಜನೆಗಳ ಲಾಭ ಪಡೆಯುವ ಸಲುವಾಗಿ ಲಕ್ಷಾಂತರ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ
ಇನ್ನು ವಿಧಾನಸಭ ಚುನಾವಣೆಯ ಕಾರಣ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿತ್ತು. ಕಳೆದ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿತ್ತು. ಇನ್ನು ಲಕ್ಷಾಂತರ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ಒನ್, ಸೈಬರ್ ಸೆಂಟರ್ ಅಥವಾ ಆನ್ಲೈನ್ ನ ಮೂಲಕ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ.
ಸ್ವಂತ ಕಾರ್ ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು
ಇನ್ನು ಸ್ವಂತ ಕಾರ್ ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗುವ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಘೋಷಣೆ ಹೊರಡಿಸಿದೆ. ಸ್ವಂತ ಕಾರ್ ಹೊಂದಿದವರಿಗೆ ಹೊಸ ಬಿಪಿಎಲ್ ಕಾರ್ಡ್ ನೀಡದಿರುವುದು ಹಾಗೂ ಪ್ರಸ್ತುತ ಹೊಂದಿರುವ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡುವ ಬಗ್ಗೆ ಘೋಷಣೆ ಹೊರಡಿಸಲಾಗಿದೆ.
ವೈಟ್ ಬೋರ್ಡ್ ಕಾರು ಇರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಮತ್ತು ಎಲ್ಲೊ ಬೋರ್ಡ್ ಕಾರ್ ಇರುವವರ ಬಿಪಿಎಲ್ ಕಾರ್ಡ್ ರದ್ದನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿರುವ ಬಗ್ಗೆ ಸುದ್ದಿ ವೈರಲ್ ಆಗಿದೆ. ಇದೀಗ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆದಾರರರಿಗೆ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ. ಈ ದಾಖಲೆಗಳು ಇದ್ದರೆ ಮಾತ್ರ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಸಾಧ್ಯವಾಗಲಿದೆ.
ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
*ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಕುಟುಂಬದ ಎಲ್ಲಾ ಸದಸ್ಯ ಆಧಾರ್ ಕಾರ್ಡ್ ಅಗತ್ಯವಾಗಿದೆ.
*6 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರ ಬಯೋಮೆಟ್ರಿಕ್
*ಇನ್ನು ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ, ಆದಾಯ ಪ್ರಮಾಣ ಪತ್ರ.
*ಆರು ವಯಸ್ಸಿನ ಕಡಿಮೆ ವಯಸ್ಸಿನ ಮಕ್ಕಳ ಜನನ ಪ್ರಮಾಣ ಪತ್ರ.
*ವಿಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣ ಪತ್ರ ಇವೆಲ್ಲದರ ಸ್ಕಾನ್ ಮಾಡಿದ ಪ್ರತಿ ಅಗತ್ಯ.
*ಸ್ಕಾನ್ ಮಾಡಿದ ಕುಟುಂಬದ ಆದಾಯ ಪ್ರಮಾಣ ಪತ್ರ, ಅರ್ಜಿದಾರರ ಇತ್ತೀಚಿನ ಪಾಸ್ ಪೋಸ್ಟ್ ಸೈಜ್ ಭಾವಚಿತ್ರ.
* ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಹಾಗೂ ವಾರ್ಡ್ ಕೌನ್ಸಿಲರ್ ಅಥವಾ ಪ್ರಧಾನ್ ನೀಡಿದ ಸ್ವಯಂ ಘೋಷಣೆ ಪ್ರಮಾಣ ಪತ್ರ.