Dilip Surana: ಡೋಲೋ 650 ಮಾತ್ರೆಯಿಂದ ಕಂಪನಿಗೆ ಬಂದ ಆದಾಯ ಎಷ್ಟು, ಕರೋನ ತಂದುಕೊಟ್ಟ ಲಾಭ.

ಕರೋನ ಸೋಂಕಿನ ಕಾರಣ ಕೋಟ್ಯಧಿಪತಿಯಾದ ಡೋಲೋ 650 ಮಾತ್ರೆಯ ಕಂಪನಿ ಮಾಲೀಕ.

Dolo 650 Company Profit: ದೇಶದೆಲ್ಲೆಡೆ ಕರೋನ (Corona Virus) ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡಿತ್ತು. ಈ ಸಂದರ್ಭದಲ್ಲಿ ಜನರು ಕಂಗಾಲಾಗಿದ್ದರು. ಕರೋನದಿಂದಾಗಿ ದೇಶದಲ್ಲಿನ ಲಕ್ಷಾಂತರ ಜನರು ಸಾವು ಬದುಕಿನ ಹೋರಾಟ ನಡೆಸಿದ್ದರು. ಅದೆಷ್ಟೋ ಜನರು ಕೊರೊನಗೆ ಬಲಿಯಾಗಿದ್ದಾರೆ.

ಇನ್ನು ಕರೋನ ಹೆಚ್ಚಿಟ್ಟಿದ್ದ ಸಮಯದಲ್ಲಿ ಡೊಲೊ 650 ಮಾತ್ರ ಜನಸಾಮಾನ್ಯರಿಗೆ ನೆರವಾಗಿತ್ತು. ಡೊಲೊ 650 ಮಾತ್ರೆಯ ಬೇಡಿಕೆ ಕರೋನ ಸಮಯದಲ್ಲಿ ಹೆಚ್ಚಿತ್ತು. ಇನ್ನು ಕರೋನ ಸಮಯದಲ್ಲಿ ಡೊಲೊ 650 ಮಾತ್ರೆಯ ಕಂಪನಿಯ ಮಾಲೀಕರು ಸಾಕಷ್ಟು ಆದಾಯವನ್ನು ಗಳಿಸಿದ್ದರು. ಡೊಲೊ 650 ಕಂಪನಿಯ ಮಾಲೀಕರ ಆಸ್ತಿ ಎಷ್ಟಿದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Owner of dolo 650 pill who became billionaire because of corona infection.
Image Credit: uppapharmacy

ಡೊಲೊ 650 ಕಂಪನಿಯ ಮಾಲೀಕ ದಿಲೀಪ್ ಸುರಾನಾ
ಮೈಕ್ರೋ ಲ್ಯಾಬ್ಸ್ ನ ಅಧ್ಯಕ್ಷ ಹಾಗೂ ಎಂಡಿ ದಿಲೀಪ್ ಸುರಾನಾ (Dilip Surana) ಬೆಂಗಳೂರಿನಲ್ಲಿ ಅಲ್ಟ್ರ ಲಕ್ಸೊರಿ ಆಸ್ತಿಯನ್ನು ಹೊಂದಿದ್ದಾರೆ. 66 ಕೋಟಿ ಬೆಲೆಬಾಳುವ ಐಷಾರಾಮಿ ಬಂಗಲೆಯನ್ನು ದಿಲೀಪ್ ಸುರಾನಾ ಹೊಂದಿದ್ದಾರೆ.

ದಿಲೀಪ್ ಅವರ ಜಾಗದ ವಿಸ್ತೀರ್ಣವು 12043 ಚದರ ಅಡಿಯನ್ನು ಹೊಂದಿದೆ. ಆ ಜಾಗದಲ್ಲಿ 8373 ಚದರ ಅಡಿ ವಿಸ್ತೀರ್ಣದ ಬಂಗಲೆಯನ್ನು ನಿರ್ಮಿಸಲಾಗಿದೆ. ಇನ್ನು ದಿಲೀಪ್ ಸುರಾನಾ ಅವರು ತಮ್ಮ ಭವ್ಯ ಬಂಗಲೆಯ ಖರೀದಿಗೆ 3.36 ಕೋಟಿ ರೂ ಪಾವತಿಸಿದ್ದಾರೆ.

During the Corona epidemic, people used more Dolo 650 tablets and the company got crores of revenue
Image Credit: theceomagazine

ದಿಲೀಪ್ ಸುರಾನಾ ಅವರ ಒಟ್ಟು ಆಸ್ತಿಯ ಮೌಲ್ಯ
ಇನ್ನು ದಿಲೀಪ್ ಸುರಾನಾ ಅವರು ಮೈಕ್ರೋ ಲ್ಯಾಬ್ ನ ಅಧ್ಯಕ್ಷರಾಗಿದ್ದಾರೆ. ಇನ್ನು ಇವರ ವಾರ್ಷಿಕ ಆದಾಯವು 4000 ಕೋಟಿ ರೂ. ಆಗಿದೆ. ಇವರ ಕಂಪನಿಯು ಮದುಮೇಹ ಹೃದಯ ಸಂಬಂದಿ, ನೋವು ನಿವಾರಕಗಳಿಗೆ ಔಷಧಿಗಳನ್ನು ನೀಡುತ್ತವೆ.

Join Nadunudi News WhatsApp Group

ದೇಶಿಯ ಮಾರುಕಟ್ಟೆಯಿಂದ ಶೇ. 60 ರಷ್ಟು ಆದಾಯ ಬರುತ್ತದೆ. ಈ ಕಂಪನಿಯು ಈಗ 17 ಪ್ಯಾಕ್ಟರಿಗಳೊಂದಿಗೆ 50 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. 2020 ರಲ್ಲಿ ಡೊಲೊ 650 ಮಾತ್ರೆಯನ್ನು ಮಾರಾಟ ಮಾಡುವ ಮೂಲಕ ಕಂಪನಿಯು 400 ಕೋಟಿ ಆದಾಯವನ್ನು ಗಳಿಸಿದೆ. 2020 -2021 ರ ನಡುವೆ ಕಂಪನಿಯ ಲಾಭವು ಶೇ. 224 ರಷ್ಟು ಏರಿಕೆಯಾಗಿತ್ತು.

Join Nadunudi News WhatsApp Group