Dhoni Daughter: MS ಧೋನಿ ಮಗಳು ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ…? ಇದೊಂದು ದುಬಾರಿ ಶಾಲೆ.

MS ಧೋನಿ ಮಗಳು ಝಿಯಾ ಓದುತ್ತಿರುವ ಶಾಲೆಯ ಫೀಸ್ ನ ಬಗ್ಗೆ ಮಾಹಿತಿ ಲಭಿಸಿದೆ.

Dhoni Daughter School Fees: ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಎಮ್.ಎಸ್ ದೋನಿ (M.S Dhoni) ಸದಾ ಒಂದಲ್ಲ ಒಂದು ವಿಚಾರವಾಗಿ ಹೈಲೈಟ್ ಆಗುತ್ತಾರೆ. ದೋನಿ ತಮ್ಮ ಅದ್ಬುತ ಕ್ರಿಕೆಟ್ ಆಟದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

ಎಮ್. ಎಸ್ ದೋನಿ ಅವರು ಭಾರತಕ್ಕೆ ಎರಡನೇ ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಇದೀಗ ದೋನಿ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದು ಮಾಹಿತಿ ಲಭಿಸಿದೆ. ದೋನಿ ಅವರ ಮುದ್ದಿನ ಮಗಳ ಬಗ್ಗೆ ಒಂದಿಷ್ಟು ವಿವರ ತಿಳಿಯೋಣ.

Doni Daughter School Fees
Image Credit: News24online

ಮಹೇಂದ್ರ ಸಿಂಗ್ ದೋನಿ
ದೋನಿ ಅವರು ಕ್ರಿಕೆಟ್ ನ ಜೊತೆಗೆ ಆಗಾಗ ವೈವಾಹಿಕ ಜೀವನದ ಸಲುವಾಗಿ ಕೂಡ ಸುದ್ದಿಯಾಗುತ್ತಾರೆ. ಇನ್ನು 2010 ರಲ್ಲಿ ದೋನಿ ಅವರು ಸಾಕ್ಷಿ ಅವರನ್ನು ಮದುವೆಯಾಗಿದ್ದರು. ಇನ್ನು ಈ ದಂಪತಿಗೆ ಒಂದು ಹೆಣ್ಣು ಮಗಳಲಿದ್ದಾಳೆ. ದೋನಿ ಅವರ ಮಗಳ ಹೆಸರು ಝೀನಾ. 2015 ರ ಫೆಬ್ರವರಿ 6 ರಂದು ದೋನಿ ಅವರು ತಂದೆಯಾಗಿ ಪ್ರಮೋಷನ್ ಪಡೆದಿದ್ದರು. ಇನ್ನು ದೋನಿ ಅವರ ಮಗಳು ಜನಿಸಿದ ಸಮಯದಲ್ಲಿ ಅವರು ಆಸ್ಟ್ರೇಲಿಯಾದಲ್ಲಿದ್ದದು. ಈ ವೇಳೆ ವಿಶ್ವಕಪ್ ಪಂದ್ಯದಲ್ಲಿ ದೋನಿ ಬ್ಯುಸಿ ಆಗಿದ್ದು ವಿಶ್ವಕಪ್ ಮುಗಿದ ಬಳಿಕ ದೋನಿ ಅವರ ಮಗಳನ್ನು ನೋಡಲು ಬಂದಿದ್ದರು.

ದೋನಿ ಅವರ ಮುದ್ದಾದ ಮಗಳು ಝಿಯಾ
ದೋನಿ ಅವರು ಹೆಚ್ಚಾಗಿ ಮನೆಯಲ್ಲಿದ್ದರೆ ತಮ್ಮ ಮಗಳ ಜೊತೆ ಕಾಲ ಕಳೆಯುತ್ತಾರೆ. ಸದ್ಯ ದೋನಿ ಅವರ ಮಗಳಿಗೆ 8 ವರ್ಷ ವಯಸ್ಸಾಗಿದೆ. ಜಾರ್ಖಂ ರಾಜಧಾನಿ ರಾಂಚಿಯಲ್ಲಿ ಝಿಯಾ ಓದುತ್ತಿದ್ದಾಳೆ. ಇನ್ನು ಝಿಯಾ ಓದುತ್ತಿರುವ ಶಾಲೆಯ ಬಗ್ಗೆ ಮಾಹಿತಿ ಲಭಿಸಿದೆ. ಇನ್ನು ಝಿಯಾ ಸ್ಕೂಲ್ ಫೀಸ್ ಬಗ್ಗೆ ಕೆಲವು ಕುತೂಹಲರಾಗಿರುತ್ತಾರೆ. ಝಿವಾ ರಾಂಚಿಯ ಟೌರಿಯನ್​ ವರ್ಲ್ಡ್​ ಶಾಲೆಯ ವಿದ್ಯಾರ್ಥಿನಿ ಆಗಿದ್ದಾರೆ. ಟೌರಿಯನ್​ ವರ್ಲ್ಡ್​ ಶಾಲೆಯಾ ಅಧಿಕೃತ ವೆಬ್ ಸೈಟ್ ನಲ್ಲಿ ಸ್ಕೂಲ್ ಫೀಸ್ ನ ಬಗ್ಗೆ ಮಾಹಿತಿ ಲಭಿಸಿದೆ.

MS dhoni daughter Ziva
Image Credit: Thesportslite

MS ಧೋನಿ ಮಗಳು ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ
ವೆಬ್ ಸೈಟ್ ನ ಮಾಹಿತಿಯ ಪ್ರಕಾರ, ಗ್ರೇಡ್ 2 ರಿಂದ 8 ರವರೆಗೆ ವಾರ್ಷಿಕವಾಗಿ 2 ಲಕ್ಷ 75 ಸಾವಿರ ರೂ. ಅನ್ನು ಪಾವತಿಸಬೇಕಾಗುತ್ತದೆ. ಸದ್ಯ ಝಿಯಾ ಮೂರನೇ ತರಗತಿ ಓದುತ್ತಿದ್ದು ಮಾಸಿಕವಾಗಿ 25 ಸಾವಿರ ಶುಲ್ಕ ಪಾವತಿಸಬೇಕಾಗಿದೆ. ಐಪಿಎಲ್, ಬ್ಯುಸಿನೆಸ್ ಸೇರಿ ಇನ್ನಿತರ ಮೂಲದಿಂದ ಆದಾಯ ಪಡೆಯುತ್ತಿರುವ ದೋನಿ ಅವರಿಗೆ ಇದೇನು ದೊಡ್ಡ ಮೊತ್ತವಲ್ಲ. ಭಾರತ ತಂಡದ ಕ್ರಿಕೆಟ್ ಆಟಗಾರರ ಪೈಕಿ ದೋನಿ ಅವರು ಹೆಚ್ಚು ಆದಾಯ ಗಳಿಸುವವರಲ್ಲಿ ಒಬ್ಬರಾಗಿದ್ದಾರೆ.

Join Nadunudi News WhatsApp Group

Join Nadunudi News WhatsApp Group