Dr. Rajkumar: ಬಂಗಾರದ ಮನುಷ್ಯ ಸಿನಿಮಾಕ್ಕೆ ಡಾ|| ರಾಜಕುಮಾರ್ ಪಡೆದ ಸಂಭಾವನೆ ಎಷ್ಟು…? ಆ ಕಾಲದ ದುಬಾರಿ ಸಂಭಾವನೆ.
ಬಂಗಾರದ ಮನುಷ್ಯ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ ರಾಜಕುಮಾರ್ ಅವರು ಪಡೆದ ಸಂಭಾವನೆ ಎಷ್ಟು.
Dr. Rajkumar Salary In Bangarada Manushya Movie: ಕನ್ನಡ ಚಿತ್ರರಂಗದಲ್ಲಿ ನಟ ಡಾ|| ರಾಜಕುಮಾರ್ (Dr. Rajkumar) ರವರ ಸಿನಿಮಾ ಜೀವನ ಒಂದು ಚರಿತ್ರೆಯನ್ನು ಸ್ರಷ್ಟಿಸಿದೆ. ಅವರ ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ಹಿಟ್ ಅನ್ನು ನೀಡಿದ್ದು ಅವರಿಗೆ ಅನೇಕ ಪ್ರಶಸ್ತಿ ಹಾಗು ಬಿರುದನ್ನು ತಂದುಕೊಟ್ಟಿದೆ.
ಬ್ಲಾಕ್ ಎಂಡ್ ವೈಟ್ ಕಾಲದಲ್ಲೂ ಸಿನಿಮಾ ಪ್ರಿಯರಿಗೆ ಸಿನಿಮಾ ಮೇಲೆ ಆಸಕ್ತಿ ಕಡಿಮೆ ಆಗದಂತೆ ಭರ್ಜರಿ ಸಿನಿಮಾಗಳನ್ನೂ ನೀಡಿದ ಕೀರ್ತಿ Dr. Rajkumar ರವರಿಗೆ ಸಲ್ಲುತ್ತದೆ. ಅಂತಹ ಸಿನಿಮಾಗಳಲ್ಲಿ ಬಂಗಾರದ ಮನುಷ್ಯ ಕೊಡ ಒಂದಾಗಿರುತ್ತದೆ.
ಬಂಗಾರದ ಮನುಷ್ಯ ಸಿನಿಮಾದ ಇತಿಹಾಸ
Bangarada Manushya Movie 1972 ಮಾರ್ಚ್ 31 ರಂದು ರಿಲೀಸ್ ಆಗಿದ್ಧು, ಸಿದ್ಧಲಿಂಗಯ್ಯ ರವರು ನಿರ್ದೇಶಕರಾಗಿರುತ್ತಾರೆ ಹಾಗು ಬಂಗಾರದ ಮನುಷ್ಯ ಸಿನಿಮಾದಲ್ಲಿ ನಟ ಡಾ|| ರಾಜಕುಮಾರ್, ನಟಿ ಭಾರತಿ ಮತ್ತು ದ್ವಾರಕೀಶ್, ವಜ್ರಮುನಿ ಹೀಗೆ ಅನೇಕ ಕಲಾವಿದರು ನಟಿಸಿರುತ್ತಾರೆ. ಬಂಗಾರದ ಮನುಷ್ಯ ಸಿನಿಮಾದ ಕೆಲಸ 09 ತಿಂಗಳು ನೆಡೆದಿರುತ್ತದೆ.
ಈ ಸಿನಿಮಾವು ಕನ್ನಡ ಚಿತ್ರ ರಂಗದ ಎವೆರ್ ಗ್ರೀನ್ ಸಿನಿಮಾ ಆಗಿರುತ್ತದೆ. ಹಾಗೂ ಈ ಸಿನಿಮಾ ತೆಲುಗಿನಲ್ಲಿ “ದೇವುಡುಲಾಂಟಿ ಮನಿಷಿ” ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು. ಇಂದಿಗೂ ಅನೇಕ ಜನರು ಇಷ್ಟ ಪಟ್ಟು ನೋಡಿದ ಸಿನಿಮಾಗಳಲ್ಲಿ ಬಂಗಾರದ ಮನುಷ್ಯ ಕೂಡ ಒಂದಾಗಿರುತ್ತದೆ.
Dr. Rajkumar ಅವರ ಸಿನಿಮಾ ಜರ್ನಿ
ಕನ್ನಡ ಚಿತ್ರ ರಂಗದಲ್ಲಿ ಡಾ|| ರಾಜಕುಮಾರ್ ಕೇವಲ ಒಂದೇ ಪಾತ್ರಕ್ಕೆ ಸೀಮಿತವಾಗದೆ, ಅನೇಕ ವಿಭಿನ್ನ ಪಾತ್ರಗಳನ್ನುಮಾಡಿರುತ್ತಾರೆ. ದ್ವಿಪಾತ್ರ ಹಾಗು ತ್ರಿಪಾತ್ರ ದಲ್ಲೂ ಅಭಿನಯಿಸಿದ್ದಾರೆ. ಡಾ|| ರಾಜಕುಮಾರ್ ರವರ ಸಿನಿಮಾ ಹಾಡುಗಳು ಇಂದಿಗೂ ಜನಪ್ರಿಯತೆಯನ್ನು ಹೊಂದಿದೆ. ರಾಜಕುಮಾರ್ ರವರು ಭಕ್ತಿ ಗೀತೆ, ಸಿನಿಮಾ ಹಾಡು, ಭಾವಗೀತೆ, ಜಾನಪದ ಗೀತೆಗಳನ್ನೂ ಹಾಡಿರುತ್ತಾರೆ. ಕೇವಲ ನಟನೆಗೆ ಸೀಮಿತವಾಗದೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಉತ್ತಮ ಹಾಡುಗಾರರಾಗಿರುತ್ತಾರೆ.
ಡಾ|| ರಾಜಕುಮಾರ್ ಅವರ ವೇತನ
ಕನ್ನಡ ಚಿತ್ರ ರಂಗದ ಎವೆರ್ ಗ್ರೀನ್ ಹೀರೊ Dr. Rajkumar ರವರು ಸುಮಾರು 206 ಸಿನಿಮಾಗಳಲ್ಲಿ ನಟಿಸಿರುತ್ತಾರೆ. ಅವುಗಳಲ್ಲಿ 200 ಕ್ಕೂ ಹೆಚ್ಚಿಗೆ ಸಿನಿಮಾಗಳಲ್ಲಿ ಅವರು ನಾಯಕರಾಗಿರುತ್ತಾರೆ. ಇಂದಿನ ನಟರು ಒಂದು ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆಗಿನ ಕಾಲದಲ್ಲಿ ಒಂದು ಸಿನಿಮಾ ಮಾಡಿದರೆ 10,000 ರೂಪಾಯಿ ಮಾತ್ರ ಸಿಗುತ್ತಿತ್ತು.
ರಾಜಕುಮಾರ್ ಅವರು ಬಂಗಾರದ ಮನುಷ್ಯ ಚಿತ್ರಕ್ಕೆ ಕೇವಲ 4,000 ರೂಪಾಯಿ ಸಂಭಾವನೆಯನ್ನು ಪಡೆದಿದ್ದರು. ಡಾ|| ರಾಜಕುಮಾರ್ ರವರು ಕನ್ನಡ ಚಿತ್ರ ರಂಗಕ್ಕೆ ನೀಡಿದ ಕೊಡುಗೆ ಅಪಾರವಾಗಿರುತ್ತದೆ. ರಾಜಕುಮಾರ್ ಅವರು ನಟರಿಗೂ ಆದರ್ಶ ಹಾಗು ಸ್ಪೂರ್ತಿ ಆಗಿರುತ್ತಾರೆ ಮತ್ತು ಸಿನಿ ಪ್ರಿಯರಿಗೆ ಪ್ರೀತಿಯ ಅಪ್ಪಾಜ್ಜಿಯಾಗಿ ಉಳಿದಿರುತ್ತಾರೆ.