Dragon Chicken: ಈ ಕೋಳಿಗಳನ್ನ ಸಾಕಿದರೆ 2.8 ಲಕ್ಷಕ್ಕೆ ಮಾರಾಟ ಮಾಡಬಹುದು, ಹಣ ಗಳಿಸಲು ಇಂದೇ ಆರಂಭಿಸಿ ಈ ಕೋಳಿ ಫಾರ್ಮ್.

ವಿಶ್ವದ ಈ ದುಬಾರಿ ಕೋಳಿ ಸಾಕಾಣಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು.

Dragon Chicken Business Profit: ಸದ್ಯ ಮಾರುಕಟ್ಟೆಯಲ್ಲಿ ಮಾಂಸಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಜನರು ಹೆಚ್ಚಾಗಿ ಮಾಂಸಾಹಾರವನ್ನು ಇಷ್ಟಪಡುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಮಾಂಸಗಳನ್ನು ನೀಡುವ ಪ್ರಾಣಿಗಳನ್ನು ಸಾಕಲಾಗುತ್ತದೆ. ಕುರಿ, ಮೇಕೆ, ಕೋಳಿ ಮಾಂಸಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಲಕ್ಷಾಂತರ ಕೋಳಿ ಫಾರ್ಮ್ ಗಳು ಇವೆ.

ಎಲ್ಲ ಕೋಳಿ ಫಾರ್ಮ್ ಗಳು ಕೂಡ ವಿವಿಧ ತಳಿಯ ಕೋಳಿಗಳನ್ನು ಸಾಕಾಣಿಕೆ ಮಾಡುತ್ತವೆ. ಸದ್ಯ ಈತಳಿಯ ಕೋಳಿಯ ಬಗ್ಗೆ ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ತಳಿಯ ಕೋಳಿ ಸಾಕಾಣಿಕೆಯಿಂದ ಮಾಸಿಕವಾಗಿ ಲಕ್ಷ ಲಕ್ಷ ಹಣವನ್ನು ಗಳಿಸಬಹುದು. ಅಷ್ಟಕ್ಕೂ ಅದು ಯಾವ ತಳಿಯ ಕೋಳಿ ಎಂದು ಚಿಂತಿಸುತ್ತಿದ್ದೀರಾ…? ಇದೀಗ ಮಾಸಿಕ ಲಕ್ಷ ಲಕ್ಷ ಲಾಭ ನೀಡುವ ಕೋಳಿ ತಳಿಯ ಬಗ್ಗೆ ವಿವರ ತಿಳಿಯೋಣ.

Dragon Chicken Business
Image Credit: Zeenews

Dragon Chicken
ಸದ್ಯ ಮಾರುಕಟ್ಟೆಯಲ್ಲಿ ವಿಶೇಷವಾದ ಕೋಳಿ ತಳಿಯೆಂದರೆ ಅದು “Dragon Chicken“. ಈ ತಳಿಯ ಕೋಳಿಗಳು ಸಾಕಾಣಿಕೆಯು ಹೆಚ್ಚಿನ ಲಾಭವನ್ನು ನೀಡುತ್ತವೆ. ಇದು ವಿಶ್ವದಲ್ಲೇ ದುಬಾರಿ ಕೋಳಿ ತಳಿಯಾಗಿದೆ. ಪ್ರಪಂಚದಾದ್ಯಂತ ಹೆಚ್ಚು ಪಡೆದಿರುವ ಈ ಕೋಳಿಗಳು ವಿಯೆಟ್ನಾಂ ನಲ್ಲಿ ಮಾತ್ರ ಕಂಡುಬರುತ್ತವೆ. ಸದ್ಯ ಭಾರತದಲ್ಲಿ ಕೂಡ ಈ ಕೋಳಿ ತಳಿಯ ಸಾಕಾಣಿಕೆ ಮಾಡಲು ಯೋಜಿಸಲಾಗಿದೆ. ಈ ಕೋಳಿ ತಳಿಯ ಸಾಕಾಣಿಕೆಯ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

ಭಾರತದಲ್ಲಿ Dragon Chicken ಸಾಕಾಣಿಕೆ ಹೇಗೆ ಸಾಧ್ಯ..?
ನೀವು ಭಾರತದಲ್ಲಿ ಡ್ರ್ಯಾಗನ್ ಚಿಕನ್ ಅನ್ನು ಸಾಕಲು ಬಯಸಿದರೆ ಮೊದಲು ನೀವು ಅದರ ಮರಿಗಳನ್ನ ವಿಯೆಟ್ನಾಂ ನಿಂದ ಪಡೆಯಬೇಕು. ಇದಲ್ಲದೆ ಈ ಕೋಳಿಗಳ ಸಾಕಣೆಯು ಸಾಮಾನ್ಯ ಕೋಳಿಗಳ ಸಾಕಣೆಯಂತೆಯೇ ಇರುತ್ತದೆ. ಅವುಗಳ ಡೋಸೇಜ್ ಮಾತ್ರ ಹೆಚ್ಚಾಗಿರುತ್ತದೆ ಮತ್ತು ಅವುಗಳನ್ನು ಒಂದು ರೂಪದಲ್ಲಿ ಸೀಮಿತಗೊಳಿಸುವುದು ಕಷ್ಟ. ಆದ್ದರಿಂದ ನೀವು ಭಾರತದಲ್ಲಿ ಅವುಗಳನ್ನು ಸಾಕಲು ಯೋಜಿಸುತ್ತಿದ್ದರೆ ಕನಿಷ್ಠ ನೀವು ಸಣ್ಣ ಮತ್ತು ತೆರೆದ ಸ್ಥಳವನ್ನು ಹೊಂದಿರಬೇಕು.

Dragon Chicken Business Profit
Image Credit: Pmfby

ಭಾರತೀಯ ಮಾರುಕಟ್ಟೆಯಲ್ಲಿ ಈ ತಳಿಯ ಕೋಳಿಯ ಬೆಲೆ ಎಷ್ಟಿದೆ..?
Dragon Chicken ನಲ್ಲಿ ವಿಶೇಷವೆಂದರೆ ಅವುಗಳ ಕಾಲುಗಳು. ಕೋಳಿಗಳ ಕಾಲುಗಳು ತುಂಬಾ ದಪ್ಪವಾಗಿದ್ದು, ಅವು ಕೋಳಿ ಕಾಲುಗಳು ಎಂದು ಭಾವಿಸಲು ಸಾಧ್ಯವಾಗುವುದಿಲ್ಲ. ಈ ಕೋಳಿಗಳನ್ನು ಮೊದಲು ವಿಯೆಟ್ನಾಂ ನ ರಾಜಧಾನಿ ಹನೋಯಿ ಬಳಿಯ ಫಾರ್ಮ್ನಲ್ಲಿ ಸಾಕಲಾಯಿತು. ಈ ಈ ಚಿಕೆನ್ ನ ಬೆಲೆ ಪ್ರತಿ ಕೆಜಿಗೆ 280 ರೂ ಆಗಿದ್ದು ಹತ್ತು ಕೆಜಿಗೆ ಸುಮಾರು 2800 ರೂ ಆಗಿದೆ. ಅದೇ ರೀತಿಯಲ್ಲಿ ನೀವು 1000  ಕೆಜಿ ಮಾಂಸ ಮಾರಾಟ ಮಾಡಿದರೆ ಸುಮಾರು 2,80,000 ವ್ಯವಹಾರವನ್ನ ಮಾಡಬಹುದು. ಇತರೆ ಕೋಳಿಗಳಿಗೆ ಹೋಲಿಕೆ ಮಾಡಿದರೆ ಈ ಕೋಳಿಯ ಬೆಲೆ ಕೊಚ ದುಬಾರಿ ಎಂದು ಹೇಳಬಹುದು.

Join Nadunudi News WhatsApp Group

Join Nadunudi News WhatsApp Group