Drishyam 2 Hindi Collection: ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ದೃಶ್ಯಂ 2, ಭರ್ಜರಿ ಕಲೆಕ್ಷನ್ ಮಾಡಿದೆ ಹಿಂದಿ ದೃಶ್ಯಂ 2.

Drishyam 2 Hindi Collection:  ದೃಶ್ಯಂ (Drishaym) ಚಿತ್ರವನ್ನ ಸಾಮಾನ್ಯವಾಗಿ ಎಲ್ಲರೂ ನೋಡೇ ಇರುತ್ತಾರೆ. ಆರಂಭದಲ್ಲಿ ಮಲಯಾಳಂ ನಲ್ಲಿ ನಟ ಮೋಹನ್ ಲಾಲ್ (Mohan Lal) ಅವರು ಈ ಚಿತ್ರವನ್ನ ಮಾಡಿದರು. ಮೋಹನ್ ಲಾಲ್ ಅವರು ದೃಶ್ಯಂ ಚಿತ್ರವನ್ನ ಮಾಡಿದ ನಂತರ ಕನ್ನಡದಲ್ಲಿ ನಟ ರವಿಚಂದ್ರನ್ (Ravichandran ) ಅವರು ಸದೃಶ್ಯ ಚಿತ್ರವನ್ನ ಮಾಡಿದರು.

ಸದ್ಯ ಎಲ್ಲಾ ಭಾಷೆಯಲ್ಲಿ ದೃಶ್ಯಂ ಬಹಳ ಒಳ್ಳೆಯ ಸಾಧನೆಯನ್ನ ಮಾಡಿತು ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡ ಮತ್ತು ಮಲಯಾಳಂ ಚಿತ್ರವಲ್ಲದೆ ದೃಶ್ಯಂಚಿತ್ರ ಹಿಂದಿಯಲ್ಲಿ ಕೂಡ ಸಾಕಷ್ಟು ಪ್ರಸಿದ್ಧಿಯನ್ನ ಪಡೆದುಕೊಂಡಿತು ಎಂದು ಹೇಳಬಹುದು.

ದೃಶ್ಯಂ ಹಿಂದಿಯಲ್ಲಿ ಖ್ಯಾತ ನಟ ಅಜಯ್ ದೇವಗನ್ (Ajay Devgan) ಅವರು ಮಾಡಿದ್ದು ಚಿತ್ರದಲ್ಲಿ ನಟ ಅಜಯ್ ದೇವಗನ್ ಅವರ ನಟನೆಗೆ ಜನರು ಫುಲ್ ಫಿದಾ ಆಗಿದ್ದಾರೆ.

Drishyam 2 dusted the box office, Hindi Drishyam 2 made huge collections.
Image Credit: lifestyleasia

ದೃಶ್ಯಂ ಮೊದಲ ಭಾಗ ಫುಲ್ ಹಿಟ್
ಮಲಯಾಳಂ ನಲ್ಲಿ ಬಿಡುಗಡೆಯಾದ ದೃಶ್ಯಂ ಚಿತ್ರದ ಮೊದಲ ಭಾಗ ಹೇಗೆ ಹೇಗೆ ಯಶಸ್ಸನ್ನ ಸಾಧಿಸಿತೋ ಅದೇ ರೀತಿಯಲ್ಲಿ ಎರಡನೆಯ ಭಾಗ ಇನ್ನಷ್ಟು ಯಶಸ್ಸನ್ನ ಸಾಧಿಸಿತು.

ಕನ್ನಡದಲ್ಲಿ ಕೆಲವು ತಿಂಗಳುಗಳ ಹಿಂದೆ ಹಿಂದೆ ಬಿಡುಗಡೆಯಾದ ದೃಶ್ಯ 2 ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವುದರ ಮೂಲಕ ಬೋಸ್ ಫೂನ್ಸ್ ಧೂಳಿಪಟ ಮಾಡಿತ್ತು. ಸದ್ಯ ದೃಶ್ಯಂ 2 (Drishyam 2) ಈಗ ಹಿಂದಿಯಲ್ಲಿ ಬಿಡುಗಡೆ ಆಗಿದ್ದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ ಹೇಳಬಹುದು.

Join Nadunudi News WhatsApp Group

ಹಿಂದಿಯಲ್ಲಿ ಬಿಡುಗಡೆಯಾದ ದೃಶ್ಯಂ 2
ನಟ ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಈಗ ಹಿಂದಿಯಲ್ಲಿ ಬಿಡುಗಡೆ ಆಗಿದ್ದು ಬಿಡುಗಡೆಯಾದ ಎಲ್ಲಾ ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ. ಚಿತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

Drishyam 2 made a huge collection
Image Credit: freepressjournal

ಮಲಯಾಳಂ ನಲ್ಲಿ ಇರುವ ರೀತಿಯಲ್ಲಿಯೇ ಹಿಂದಿಯಲ್ಲಿ ಇದ್ದು ನಟ ಅಜಯ್ ದೇವಗನ್ ಅವರ ನಟನೆಗೆ ಜನರು ಫುಲ್ ಫಿದಾ ಆಗಿದ್ದಾರೆ. ಸದ್ಯ ಬಿಡುಗಡೆಯಾಗಿ ಎರಡು ದಿನಗಳು ಆಗಿದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ದೃಶ್ಯಂ 2
ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 15 ಕೋಟಿ ಕಲೆಕ್ಷನ್ ಮಾಡಿದ ದೃಶ್ಯಂ 2 ಬಿಡುಗಡೆಯಾದ ಎರಡನೆಯ ದಿನ ಬರೋಬ್ಬರಿ 21 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದರ ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.

ಶುಕ್ರವಾರ ಸುಮಾರು 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಶನಿವಾರ 21 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದು ಮೂರನೇ ದಿನ ಆಗಿದ್ದು ಇಂದು ಸುಮಾರು 25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Drishyam 2 made huge collection in Hindi
Image Credit: thequint

ಅಭಿಷೇಕ್ ಪಾಠಕ್ (Abhishek Patak) ಅವರು ನಿರ್ದೇಶನ ಮಾಡಿರುವ ದೃಶ್ಯಂ 2 ಚಿತ್ರ ಜನರ ಮೆಚ್ಚುಗೆ ಕಾರಣ ಆಗಿದ್ದು ಹಲವು ಸಮಯದ ನಂತರ ಮತ್ತೆ ಹಿಂದಿ ಚಿತ್ರ ಇಷ್ಟು ಕಲೆಕ್ಷನ್ ಮಾಡಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಈಗಾಗಲೇ ಸುಮಾರು 36 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ದೃಶ್ಯಂ 2 ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಸದ್ಯ ನಟ ಅಜಯ್ ದೇವಗನ್ ಅವರು ಮತ್ತೆ ಬಾಲಿವುಡ್ ಚಿತ್ರರಂಗದ ಹೆಸರನ್ನ ಆ ಮೇಲೆ ತರುವ ಕೆಲಸವನ್ನ ಮಾಡಿದ್ದಾರೆ.

Join Nadunudi News WhatsApp Group