DL Apply: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನುಮುಂದೆ ಕಷ್ಟಪಡಬೇಕಿಲ್ಲ, ಕೇವಲ 10 ನಿಮಿಷದಲ್ಲಿ ಬರಲಿದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್
ಮನೆಯಲ್ಲೇ ಕುಳಿತು ಕೇವಲ 10 ನಿಮಿಷದಲ್ಲಿ ಡ್ರೈವಿಂಗ್ ಲೈಸನ್ಸ್ ಅನ್ನು ಪಡೆದುಕೊಳ್ಳಬಹುದು, ಹೊಸ ಸೇವೆ ಆರಂಭ
Driving Licence Apply Online Process: ವಾಹನ ಹೊಂದಿರುವ ಪ್ರತಿಯೊಬ್ಬರೂ ಹೊಂದಿರಬೇಕಾದ ಮುಖ್ಯ ದಾಖಲೆ ಎಂದರೆ ಅದು Driving Licence. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ನೀವು ರಸ್ತೆಗಿಳಿದರೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಇದ್ದರೆ ವಾಹನ ಓಡಿಸುವ ಸಮಯದಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಇನ್ನು ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಕಷ್ಟು ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನುಮುಂದೆ ಕಷ್ಟಪಡಬೇಕಿಲ್ಲ
ಡ್ರೈವಿಂಗ್ ಲೈಸನ್ಸ್ ಗಾಗಿ RTO ಆಫೀಸ್ ಗೆ ಆಗಾಗ ಅಲೆದಾಡಬೇಕಾಗಿತ್ತು. ಆದರೆ ನೀವು ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಲು ಕಷ್ಟಪಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವುದು ಹೇಗೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ.
ಕೇವಲ 10 ನಿಮಿಷದಲ್ಲಿ ಬರಲಿದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್
ಕಾನೂನುಗಳು ಮತ್ತು ಕಲಿಕಾ ಪರವಾನಗಿಗಳ ಭಯದಿಂದಾಗಿ ಕೇಂದ್ರ ಸಾರಿಗೆ ಸಚಿವಾಲಯವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನುಮುಂದೆ ನೀವು Driving Licence ಅನ್ನು ಪಡೆಯಲು RTO ಗೆ ಭೇಟಿ ನೀಡಬೇಕೆಂದಿಲ್ಲ. ಇದಕ್ಕಾಗಿ ನೀವು ರಸ್ತೆ ಸಾರಿಗೆ ಇಲಾಖೆಯ https://parivahan.gov.in/parivahan/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮನೆಯಲ್ಲಿಯೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದು.
DL ಪಡೆಯಲು ನೀವು ಮೊದಲು ಕಲಿಕೆಯ ಪರವಾನಗಿ ಅರ್ಜಿಯನ್ನು ಸಲ್ಲಿಸಬೇಕು. ಕಲಿಕೆಗೆ ಅರ್ಜಿ ಸಲ್ಲಿಸಿದ ನಂತರ ನೀವು ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನಿಮ್ಮ ಕಲಿಕೆಯ ಪರವಾನಗಿಯನ್ನು ತಯಾರಿಸಲಾಗುತ್ತದೆ. ನಂತರ ನೀವು ಆರು ತಿಂಗಳೊಳಗೆ ನಿಮ್ಮ ಶಾಶ್ವತ ಚಾಲನಾ ಪರವಾನಗಿಯನ್ನು ಪಡೆಯಬಹುದು. ಇನ್ನು ನೀವು DL ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಅಗತ್ಯವಾಗಿದೆ.
ಡ್ರೈವಿಂಗ್ ಲೈಸೆನ್ಸ್ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು ಯಾವುವು..?
*ಆಧಾರ್ ಕಾರ್ಡ್
*ಪಾಸ್ಪೋರ್ಟ್ ಸೈಜ್ ಫೋಟೋ
*8ನೇ ಅಥವಾ 10ನೇ ಅಂಕಗಳು
*ಪ್ಯಾನ್ ಕಾರ್ಡ್
*ಮತದಾರರ ಗುರುತಿನ ಚೀಟಿ
*ಪಡಿತರ ಚೀಟಿ
*ಮೊಬೈಲ್ ನಂ