Driving Licence: ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆ, ಹೊಸ ನಿಯಮ ಜಾರಿಗೆ ತಂದ ಕೇಂದ್ರ ಸರ್ಕಾರ.
ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮದಲ್ಲಿ ಬದಲಾವಣೆ ತಂದಿದೆ.
Driving Licence New Rules 2023: ಸಾಮಾನ್ಯವಾಗಿ ವಾಹನ ಸವಾರರಿಗೆ Driving Licence ಮುಖ್ಯ ದಾಖಲೆಯಾಗಿದೆ. ವಾಹನ ಸವಾರರು ಯಾವುದೇ ರೀತಿಯ ತಪ್ಪು ಮಾಡಿದರು Driving Licence ನೀಡಬೇಕಾಗುತ್ತದೆ. ಇತ್ತೀಚಿಗೆ ದೇಶದಲ್ಲಿ ಹಲವು ನಿಯಮಗಳು ಬದಲಾಗುತ್ತಿದ್ದು ಅದರಲ್ಲಿ Driving Licence ನಿಯಮ ಕೂಡ ಸೇರಿಕೊಂಡಿದೆ.
ವಾಹನ ಸವಾರರು ಹೊಸದಾಗಿ Driving Licence ಮಾಡುವ ಮುನ್ನ ಈ ಬದಲಾಗಿರುವ ನಿಯಮದ ಬಗ್ಗೆ ತಿಳಿಯುವುದು ಉತ್ತಮ. ಸರ್ಕಾರ ಈ ನಿರ್ಧಾರ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಮಾರ್ಗವನ್ನು ಸರಳಗೊಳಿಸಿದೆ ಎನ್ನಬಹುದು.
ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆ
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇತ್ತೀಚಿಗೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರವು ಹೊಸ ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ. ಇದೀಗ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮದಲ್ಲಿ ಬದಲಾವಣೆ ತಂದಿದೆ. ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮದಲ್ಲಿ ಸರ್ಕಾರ ಯಾವ ರೀತಿಯ ಬದಲಾವಣೆಯನ್ನು ತಂದಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಇನ್ನುಮುಂದೆ Driving Test ಅಗತ್ಯವಿಲ್ಲ
ಇನ್ನುಮುಂದೆ Regional Transport Office (RTO) ಗೆ ಭೇಟಿ ನೀಡುವ ಮೂಲಕ ಯಾವುದೇ ರೀತಿಯ ಡ್ರೈವಿಂಗ್ ಪರೀಕ್ಷೆಯನ್ನು ನೀಡುವ ಅಗತ್ಯವಿಲ್ಲ. ಈ ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ. Driving Test ನೀಡುವ ಬದಲು ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ತರಬೇತಿ ಶಾಲೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ಗಾಗಿ ನೀವೇ ನೋಂದಾಯಿಸಿಕೊಳ್ಳಬಹುದು.
ಡ್ರೈವಿಂಗ್ ಸ್ಕೂಲ್ ನ ಪ್ರಮಾಣಪತ್ರ ಅಗತ್ಯ
Driving Training School ನಿಂದ ತರಬೇತಿಯನ್ನು ತೆಗೆದುಕೊಳ್ಳಬೇಕು ಮತ್ತು ಅಲ್ಲಿ Test ನಲ್ಲಿ ಉತ್ತೀರ್ಣರಾಗಬೇಕು. ಅರ್ಜಿದಾರರಿಗೆ Driving Training School ನಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ ಅರ್ಜಿದಾರರಿಗೆ Driving licence ನೀಡಲಾಗುತ್ತದೆ. ಇನ್ನು ತರಬೇತುದಾರರು ಕನಿಷ್ಠ 12ನೇ ತರಗತಿ ಡಿಪ್ಲೊಮಾ, ಕನಿಷ್ಠ ಐದು ವರ್ಷಗಳ ಚಾಲನಾ ಅನುಭವ ಮತ್ತು ಸಂಚಾರ ನಿಯಮಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರಬೇಕು.