ಪ್ರಸ್ತುತ ದಿನಗಳಲ್ಲಿ ಯಾರುತಾನೆ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ ಹೇಳಿ. ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆ ಎಂದು ಹೇಳಬಹುದು. ಪೊಲೀಸರು ತಮ್ಮ ನಿಯಮಗಳನ್ನ ಬಹಳ ಕಟ್ಟುನಿಟ್ಟಿ ಮಾಡಿರುವ ಕಾರಣ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾರು ಕೂಡ ವಾಹನಗಳನ್ನ ಚಾಲನೆ ಮಾಡುತ್ತಿಲ್ಲ. ಇನ್ನು ಡ್ರೈವಿಂಗ್ ಲೈಸೆನ್ಸ್ ನಿಯಮಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ನಿಯಮಗಳು ಜಾರಿಯಲ್ಲಿ ಇದ್ದು ಜನರು ಅವುಗಳನ್ನ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡವರಿಗೆ ಮತ್ತು ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಬಂದಿದ್ದು ಬಂದಿದ್ದು ಇನ್ನುಮುಂದೆ ನಿಮಗೆ ಬಹಳ ವಿಶೇಷವಾದ ಡ್ರೈವಿಂಗ್ ಲೈಸೆನ್ಸ್ ಸಿಗಲಿದೆ.
ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದಂತೆ ದೆಹಲಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‌ಸಿ) ಗಾಗಿ ಸರ್ಕಾರ ಶೀಘ್ರದಲ್ಲೇ ಕ್ಯೂಆರ್ ಕೋಡ್ ಆಧಾರಿತ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಿದೆ. ಈ ಹೊಸ ಚಾಲನಾ ಪರವಾನಗಿ ಕ್ವಿಕ್ ರೆಸ್ಪಾನ್ಸ್ ಕೋಡ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ನಂತಹ ವೈಶಿಷ್ಟ್ಯಗಳೊಂದಿಗೆ ಸುಧಾರಿತ ಮೈಕ್ರೋಚಿಪ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ದೆಹಲಿ ಸಾರಿಗೆ ಇಲಾಖೆಯು ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರಗಳಿಗಾಗಿ ಕ್ಯೂಆರ್ ಕೋಡ್ ಆಧಾರಿತ ಸ್ಮಾರ್ಟ್ ಕಾರ್ಡ್‌ಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದೆ. ಇನ್ನು ಬದಲಾದ ನಿಯಮಗಳ ಪ್ರಕಾರ ಹೊಸ ನೋಂದಣಿ ಪ್ರಮಾಣಪತ್ರದ ಮುಂದೆ ಮಾಲೀಕರ ಹೆಸರನ್ನು ಮುದ್ರಿಸಲಾಗುತ್ತದೆ. ಅದೇ ಸಮಯದಲ್ಲಿ, ಮೈಕ್ರೊಚಿಪ್ ಮತ್ತು ಕ್ಯೂಆರ್ ಕೋಡ್ ಅನ್ನು ಕಾರ್ಡ್‌ನ ಹಿಂಭಾಗದಲ್ಲಿ ಎಂಬೆಡ್ ಮಾಡಲಾಗುತ್ತದೆ. ಇನ್ನು ಈ QR ಕೋಡ್ ನಲ್ಲಿ ಹತ್ತು ವರ್ಷದ ಎಲ್ಲಾ ಡಾಟಾಬೇಸ್ ಸಂಗ್ರಹ ಆಗಿರುತ್ತದೆ.
ಇನ್ನು ಕ್ಯೂಆರ್ ಆಧಾರಿತ ಹೊಸ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವೆಬ್ ಆಧಾರಿತ ಡೇಟಾಬೇಸ್ ಸಾರಥಿ ಮತ್ತು ವಾಹನ್ ಗೆ ಸಂಪರ್ಕಿಸಲು ಮತ್ತು ಸಂಯೋಜಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಕ್ಯೂಆರ್ ಅನ್ನು ದೇಶಾದ್ಯಂತ ಅಳವಡಿಸಲಾಗುತ್ತಿದೆ. ಕ್ಯೂಆರ್ ಕೋಡ್ ರೀಡರ್ ಅನ್ನು ಸುಲಭವಾಗಿ ಪಡೆಯುವುದರಿಂದ ಕಾರ್ಡ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಸುಲಭವಾಗಿ ಓದಬಹುದು. ಇನ್ನುಮುಂದೆ ಒಬ್ಬ ವ್ಯಕ್ತಿ ಮತ್ತು ವಾಹನಗಳ ಸಂಪೂರ್ಣ ಮಾಹಿತಿ ಈ QR ಕೋಡ್ ಮೂಲಕ ಅಧಿಕಾರಿಗೆ ಸಿಗಲಿದೆ. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.