Drought Relief Amount: ಬರ ಪರಿಹಾರ ಮೊತ್ತ ಇನ್ನು ಖಾತೆಗೆ ಜಮಾ ಆಗಿಲ್ವ…? ಹಣ ಜಮಾ ಆಗಲು ಇಂದೇ ಈ ಕೆಲಸ ಮಾಡಿ.
ಬರ ಪರಿಹಾರ ಹಣ ಜಮಾ ಆಗಲು ಇಂದೇ ಈ ಕೆಲಸ ಮಾಡಿ
Drought Relief Amount New Update: ಕೇಂದ್ರ ಸರ್ಕಾರ ದೇಶದ ರೈತರಿಗಾಗಿ ಬರ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರವನ್ನು ರೈತರ ಖಾತೆಗೆ ನೆರವು ನೀಡಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯೂ ಆದೇಶ ಹೊರಡಿಸಿದೆ.
NDRF ಮಾರ್ಗಸೂಚಿಗಳ ಪ್ರಕಾರ, ಗರಿಷ್ಠ 2 ಹೆಕ್ಟೇರ್ ಪ್ರದೇಶದ ಮಿತಿಯೊಂದಿಗೆ ಬೆಳೆ ನಷ್ಟ ಪರಿಹಾರವನ್ನು ನಿಗದಿಪಡಿಸಲಾಗಿದೆ. ಈ ಬಾರಿ 2023-24ನೇ ಸಾಲಿನ ಖಾರಿಫ್ ಮುಂಗಾರು ಬರ ಪರಿಹಾರವಾಗಿ ಸರ್ಕಾರ 3 ಬಾರಿ ಹಣ ಬಿಡುಗಡೆ ಮಾಡಿದೆ. ಸದ್ಯ ಕೇಂದ್ರದ ಈ ಬೆಲೆ ಪರಿಹಾರ ಮೊತ್ತ ರೈತರ ಖಾತೆಗೆ ಜಮಾ ಆಗಲು ರೈತರು ಈ ಕೆಲಸ ಮಾಡುವುದು ಅಗತ್ಯವಾಗಿದೆ.
ಬರ ಪರಿಹಾರ ಮೊತ್ತ ಇನ್ನು ಖಾತೆಗೆ ಜಮಾ ಆಗಿಲ್ವ…?
ಈ ಬಾರಿ 2023-24ನೇ ಸಾಲಿನ ಖಾರಿಫ್ ಮುಂಗಾರು ಹಂಗಾಮಿನ ಬರ ಪರಿಹಾರವಾಗಿ ಸರಕಾರ 3 ಬಾರಿ ಹಣ ಬಿಡುಗಡೆ ಮಾಡಿದ್ದು, ಬಹುತೇಕ ಎಲ್ಲ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಿದೆ. ಅಂತಿಮವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗರಿಷ್ಠ 3,000 ರೂ. ಹಣ ಜಮಾ ಮಾಡಲಾಗಿದೆ. ಆದಾಗ್ಯೂ, ಕೆಲ ಅರ್ಹ ರೈತರ ಖಾತೆಗೆ ಬರ ಪರಿಹಾರದ ಮೊತ್ತ ಜಮಾ ಆಗಿಲ್ಲ. ಹೀಗಾಗಿ ಖಾತೆಗೆ ಜಮಾ ಆಗಲು ರೈತರು ಈ ಕೆಳಗಿನ ಕೆಲಸಗಳನ್ನು ಮಾಡುವುದು ಅಗತ್ಯವಾಗಿದೆ.
ಬರ ಪರಿಹಾರ ಹಣ ಜಮಾ ಆಗಲು ಇಂದೇ ಈ ಕೆಲಸ ಮಾಡಿ
•ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರನ್ನು ಗುರುತಿಸಲು ರೈತ ಗುರುತಿನ ಖಾತೆಯನ್ನು (Former ID) ವ್ಯವಸ್ಥೆಗೊಳಿಸಿದೆ. ಅದರಲ್ಲಿ ನಿಮ್ಮ ಕೃಷಿ ವಿವರಗಳು, ಭೂಮಿಯ ವಿವರಗಳನ್ನು ದಾಖಲಿಸಬೇಕು. ಇದರಿಂದ ಸರ್ಕಾರವು ಅರ್ಹ ರೈತರನ್ನು ಸುಲಭವಾಗಿ ಗುರುತಿಸಬಹುದು ಮತ್ತು ಸರ್ಕಾರದ ಯೋಜನೆಯನ್ನು ತಲುಪಿಸಲು ಈ ಖಾತೆಯು ಸಹಕಾರಿಯಾಗುತ್ತದೆ. ನೀವು FID ಖಾತೆಯನ್ನು ಹೊಂದಿಲ್ಲದಿದ್ದರೆ ನಿಮಗೆ ಬರ ಪರಿಹಾರದ ಹಣದಂತಹ ಯಾವುದೇ ಸೌಲಭ್ಯಗಳು ರೈತರಿಗೆ ಲಭ್ಯವಾಗುವುದಿಲ್ಲ ಆದ್ದರಿಂದ ನೀವು FID ಖಾತೆ ಹೊಂದಿಲ್ಲದಿದ್ದರೆ ತಕ್ಷಣವೇ ಎಫ್‌ಐಡಿ ರಚಿಸಿ.
•ಆಧಾರ್ ಮತ್ತು ಪಹಣಿ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಮಾಡದಿದ್ದರೆ ಸರ್ಕಾರದಿಂದ ಪರಿಹಾರ ಸಿಗುವುದಿಲ್ಲ ಎಂದು ಸರ್ಕಾರ ಹೇಳಿದೆ.
•ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಸರ್ಕಾರದಿಂದ ಪರಿಹಾರ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ಸರ್ಕಾರವು ಡಿಬಿಟಿ ಮೂಲಕ ನೇರ ನಗದು ವರ್ಗಾವಣೆಯನ್ನು ಮಾಡುತ್ತದೆ.
•ಸರಕಾರ ಪ್ರತಿ ವರ್ಷ ಸಮೀಕ್ಷೆ ನಡೆಸಿ ಅರ್ಹ ಬರಪೀಡಿತ ಪ್ರದೇಶವನ್ನಷ್ಟೇ ಬರ ಪೀಡಿತ ಪ್ರದೇಶ ಎಂದು ಘೋಷಿಸುತ್ತದೆ. ಹೀಗಾಗಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಬರ ಪೀಡಿತ ಪ್ರದೇಶಕ್ಕೆ ಒಳಪಡದಿದ್ದರೆ ಬರ ಪರಿಹಾರದ ಹಣ ಸಿಗುವುದಿಲ್ಲ.