Gram Panchayat : ಇಂತಹ ರೈತರಿಗೆ ಬರಪರಿಹಾರದ ಹಣ ಬಿಡುಗಡೆ, ಪಂಚಾಯತಿಯಲ್ಲಿ ಅರ್ಹ ರೈತರ ಪಟ್ಟಿ ಬಿಡುಗಡೆ

ರಾಜ್ಯದ ರೈತರಿಗೆ ಬಿಗ್ ಅಪ್ಡೇಟ್, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರ ಪರಿಹಾರ ಪಟ್ಟಿ ಪ್ರಕಟ.

Drought Relief List Published Under Gram Panchayat: ರಾಜ್ಯದಲ್ಲಿ ಬರ ಉಂಟಾಗಿರುವ ಬಗ್ಗೆ ಎಲ್ಲರಿಗು ತಿಳಿದಿದೆ. ಈ ಬಾರಿ ಮಳೆಯ ಅಭಾವದಿಂದ ರಾಜ್ಯದ ರೈತರು ಬಾರಿ ನಷ್ಟವನ್ನು ಅನುಭವಿಸಿದ್ದಾರೆ. ಈ ಹಿನ್ನಲೆ ರಾಜ್ಯ ಸರ್ಕಾರ ಬರ ಪರಿಹಾರ ನೀಡಲು ಮುಂದಾಗಿದೆ.

ರಾಜ್ಯದ ರೈತರಿಗೆ ಈಗಾಗಲೇ ಮೊದಲನೇ ಕಂತಿನ ಬರ ಪರಿಹಾರದ ಮೊತ್ತವನ್ನು ನೀಡಿದೆ. ರಾಜ್ಯದ ಅರ್ಹ ರೈತರು ತಮ್ಮ ಬೆಳೆಗೆ ಪರಿಹಾರವನ್ನು ಪಡೆದುಕೊಂಡಿದ್ದಾರೆ. ಸದ್ಯ ಇಂತಹ ಬರ ಪರಿಹಾರ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಕಟಿಸಲು ಸರ್ಕಾರ ನಿರ್ಧರಿಸಿದೆ.

Drought Relief Fund
Image Credit: Oneindia

ರಾಜ್ಯದ ರೈತರಿಗೆ ಬಿಗ್ ಅಪ್ಡೇಟ್
ರಾಜ್ಯಾದ್ಯಂತ ಬರ ಪೀಡಿತ ಪ್ರದೇಶಗಳಲ್ಲಿನ ಪ್ರತಿ ರೈತರಿಗೆ ತಲಾ 2,000 ರೂ. ಇದುವರೆಗೆ 32 ಲಕ್ಷ ರೈತರಿಗೆ 575 ಕೋಟಿ ರೂ. ಪರಿಹಾರ ರೂಪದಲ್ಲಿ ರಾಜ್ಯ ಸರ್ಕಾರವೇ ಹಣ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಈ ವರ್ಷ ಹಿಂದೆಂದೂ ಕಾಣದ ಬರಗಾಲ ಎದುರಾಗಿದೆ. ಕೇಂದ್ರದಿಂದ ಬರ ಪರಿಹಾರ ಈವರೆಗೆ ಸಿಕ್ಕಿಲ್ಲ. ಆದ್ದರಿಂದ ರಾಜ್ಯ ಸರಕಾರ ರೈತರಿಗೆ ಮೊದಲ ಕಂತಿನಲ್ಲಿ 2 ಸಾವಿರ ರೂ. ನೀಡಲು ನಿರ್ಧರಿಸಿದ್ದು, ಈಗಾಗಲೇ 32 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ.

ಕೊಡಗಿನಲ್ಲಿ ಕೂಡ 11,000 ರೈತರಿಗೆ 1.5 ಕೋಟಿ ಬಿಡುಗಡೆಯಾಗಿದೆ. ರೈತರ ಪರಿಹಾರದ ಹಣ ದುರ್ಬಳಕೆಯಾಗದಂತೆ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರೈತರ ಪರಿಹಾರ ಧನವನ್ನು ಫ್ರೂಟ್ಸ್ ಸಾಫ್ಟ್ ವೇರ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಪಾರದರ್ಶಕವಾಗಿ ಜಮಾ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.

Drought Relief List Published Under Gram Panchayat
Image Credit: Newsclick

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರ ಪರಿಹಾರ ಪಟ್ಟಿ ಪ್ರಕಟ
ಅರ್ಹ ರೈತರಿಗೆ ಬರ ಪರಿಹಾರ ನೀಡಲು ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪಟ್ಟಿ ಪ್ರಕಟಿಸಲಾಗಿದೆ. ರೈತರು ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಪರಿಶೀಲಿಸಬಹುದು. ಹೆಸರು ಬಿಟ್ಟು ಹೋಗಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕಂದಾಯ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group