Traffic Rules: ಒಂದು ಟ್ರಾಫಿಕ್ ನಿಯಮ ಬ್ರೇಕ್ ಮಾಡಿದರೆ ಗರಿಷ್ಠ 22 ಲಕ್ಷ ದಂಡ, ಇದೊಂದು ದುಬಾರಿ ಟ್ರಾಫಿಕ್ ನಿಯಮ.
ದುಬೈನಲ್ಲಿ ಹೊಸ ಟ್ರಾಫಿಕ್ ದಂಡ ಪಟ್ಟಿ ಪ್ರಕಟ. ನಿಯಮ ಬ್ರೇಕ್ ಮಾಡಿದರೆ ದಂಡದ ಜೊತೆ ಶಿಕ್ಷೆ ಖಚಿತ.
Dubai Traffic Rules: ಇತ್ತೀಚಿಗೆ ಸಾಕಷ್ಟು ಸಂಚಾರ ನಿಯಮಗಳು ಜಾರಿ ಆಗಿವೆ. ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಹೊಸ ಹೊಸ ನಿಯಮಗಳು ಸಂಚಾರ ನಿಯಮದಲ್ಲಿ ಸೇರಿಕೊಳ್ಳುತ್ತಿವೆ.
ಟ್ರಾಫಿಕ್ ರೂಲ್ಸ್ ಬ್ರೇಕ್ ಆಗುತ್ತಿರುವುದರಿಂದ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಂಚಾರ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ. ಇನ್ನು ವಾಹನ ಹೊಂದಿರುವವರು ಈ ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸಬೇಕು.
ಟ್ರಾಫಿಕ್ ನಿಯಮ ಬ್ರೇಕ್ ಮಾಡಿದರೆ ದಂಡದ ಜೊತೆ ಶಿಕ್ಷೆ
ಟ್ರಾಫಿಕ್ ನಿಯಮ ಬ್ರೇಕ್ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ಶಿಕ್ಷೆಗೂ ಒಳಗಾಗಬೇಕಾಗುತ್ತದೆ. ಟ್ರಾಫಿಕ್ ರೂಲ್ಸ್ ಗೆ ದಂಡ ಸೇರಿದಂತೆ ಹಲವು ಶಿಕ್ಷೆಗಳಿವೆ. ಇದೀಗ ದುಬೈನಲ್ಲಿ ಹೊಸ ಟ್ರಾಫಿಕ್ ದಂಡ ಪಟ್ಟಿ ಪ್ರಕಟ ಮಾಡಲಾಗಿದೆ. ಈ ದಂಡದ ಮೊತ್ತ ಕೇಳಿದರೆ ನೀವು ಶಾಕ್ ಆಗುವುದು ಖಚಿತ. ಈ ದಂಡದ ಮೊತ್ತದಲ್ಲಿ ನೀವು ಹೊಸ ಕಾರನ್ನು ಖರೀದಿಸಬಹುದು.
ರಸ್ತೆಯಲ್ಲಿ ಟ್ರಾಫಿಕ್ ನಿಯಮ ಪಾಲನೆ ಮಾಡುವುದು ಅಗತ್ಯವಾಗಿದೆ. ಸಿಗ್ನಲ್ ಜಂಪ್ ಮಾಡುವುದು, ರಂಗ್ ಸೈಡ್ ಡ್ರೈವ್ ಮಾಡುವುದು, ಅತಿ ವೇಗದಲ್ಲಿ ವಾಹನ ಓಡಿಸುವುದು ಸೇರಿದಂತೆ ಒಂದೊಂದು ನಿಯಮ ಉಲ್ಲಂಘನೆಗೂ ಒಂದೊಂದು ರೀತಿಯ ದಂಡ ವಿಧಿಸಲಾಗುತ್ತದೆ. ಈ ಮೂಲಕ ಟ್ರಾಫಿಕ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡುವಂತೆ ನೋಡಿಕೊಳ್ಳಬೇಕಾಗುತ್ತದೆ.
ದುಬೈನಲ್ಲಿ ಹೊಸ ಟ್ರಾಫಿಕ್ ನಿಯಮ
ಅದೆಷ್ಟೇ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತಂದರು ಕೂಡ ಅಪಘಾತಗಳು ಹೆಚ್ಚಾಗಿ ಆಗುತ್ತಿವೆ. ಇದೀಗ ದುಬೈ ಪೊಲೀಸರು ಸುರಕ್ಷತೆಗಾಗಿ ದುಬಾರಿ ದಂಡ ಜಾರಿ ಮಾಡಿದ್ದಾರೆ.
ಒಂದು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಗರಿಷ್ಠ 22 ಲಕ್ಷ ರೂಪಾಯಿ ದಂಡ ಜಾರಿ ಮಾಡಲಾಗಿದೆ. ಕನಿಷ್ಠ ಅಂದರೆ 2.24 ಲಕ್ಷ ರೂಪಾಯಿ. ಇದೀಗ ದುಬೈನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಕಟ್ಟುವುದಕ್ಕಿಂತ ಹೊಸ ವಾಹನ ಖರೀದಿಸುವುದೇ ಉತ್ತಮ ಅನ್ನೋ ಮಾತುಗಳು ಕೇಳಿಬಂದಿದೆ.