Ducati: ಭಾರತಕ್ಕೆ ಬಂತು ಹೊಸ ಡುಕಾಟಿ ಬೈಕ್, ಬೆಲೆ ಮತ್ತು ಫೀಚರ್ ಕಂಡು ದಂಗಾದ ಜನರು.
ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಡುಕಾತಿ ಕಂಪನಿಯ ಹೊಸ ಬೈಕ್.
Ducati Diavel V4 bike: ದೇಶೀಯ ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪನಿಗಳು ಹೊಸ ಬೈಕ್ ಗಳನ್ನ ಪರಿಚಯಿಸುತ್ತಿರುತ್ತವೆ. ಎಲೆಕ್ಟ್ರಿಕ್ ಬೈಕ್ ಗಳು ಸಹ ಇತ್ತೀಚಿಗೆ ಹೆಚ್ಚು ಹೆಚ್ಚು ಬಿಡುಗಡೆ ಗೊಳ್ಳುತ್ತಿವೆ. ಯುವಕರು ಬೈಕ್ (Bike)ಖರೀದಿಯ ಮೇಲೆ ಹೆಚ್ಚಿನ ಆಸಕ್ತಿಯನ್ನ ಹೊಂದಿರುತ್ತಾರೆ. ಇದೀಗ ಡುಕಾತಿ (Ducati)ಕಂಪನಿಯ ಹೊಸ ಬೈಕ್ ಒಂದು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.
ಡುಕಾತಿ ಡಯಾವೆಲ್ ವಿ 4 ಬೈಕ್
ಡುಕಾತಿ ಕಂಪನಿಯು ತನ್ನ ಹೊಚ್ಚ ಹೊಸ ಡುಕಾತಿ ಡಯಾವೆಲ್ ವಿ 4 ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಬೈಕ್ ನವದೆಹಲಿ, ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ, ಕೊಲ್ಕತ್ತಾ, ಅಹಮದಾಬಾದ್, ಮತ್ತು ಚಂಡೀಗಢದ ಎಲ್ಲಾ ಡುಕಾತಿ ಶೋ ರೂಮ್ ಗಳಲ್ಲಿ ಶ್ರೀಘ್ರದಲ್ಲಿಯೇ ಖರೀದಿಗೆ ಸಿಗುತ್ತದೆ. ಡುಕಾತಿ ಡಯಾವೆಲ್ ವಿ 4 ಬೈಕ್ ನ ಆರಂಭಿಕ ಬೆಲೆ 25 .91 ಲಕ್ಷ ರೂಪಾಯಿ ಆಗಿದೆ.
ಡುಕಾತಿ ಡಯಾವೆಲ್ ವಿ 4 ಬೈಕ್ ವೈಶಿಷ್ಟ್ಯತೆ
ಉದ್ದ ಮತ್ತು ಅಗಲವಾದ ಹ್ಯಾಂಡಲ್ ಬಾರ್ ಗಳು ಈ ಬೈಕ್ ನ ವಿಶೇಷತೆಯಾಗಿದೆ. ಡುಕಾತಿ ಡಾಯವೆಲ್ ವಿ 4 ಬೈಕ್ ರೆಡ್ ಮತ್ತು ಥ್ರಿಲ್ಲಿಂಗ್ ಬ್ಲ್ಯಾಕ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಸ್ವಲ್ಪ ಪರಿಷ್ಕ್ರತ ಹೆಡ್ ಲ್ಯಾಂಪ್ ಕ್ಲಸ್ಟರ್, ಪ್ಲೋಟಿಂಗ್ ಟೈಲ್ ವಿಭಾಗ, ಮಾಸ್ಕ್ಯುಲರ್ 20 ಲೀಟರ್ ಇಂಧನ ಟ್ಯಾಂಕ್, ಉತ್ತಮ ಏರೋಡೈನಾಮಿಕ್ಸ್ ಗಾಗಿ ಏರ್ ವೆಂಟ್ ಗಳು ಮತ್ತು 240 /45 ಹಿಂದಿನ ಟೈರ್ ಅನ್ನು ಪಡೆದಿದೆ.
ಹಾಗೆ ಡಯಾವೆಲ್ ವಿ 4 ಪೂರ್ಣ ಎಲ್ಇಡಿ ಲೈಟಿಂಗ್, 5 -ಇಂಚಿನ ಟಿಎಫ್ ಟಿ ಡಿಸ್ಪ್ಲೇ, ಡುಕಾಟಿ ಲಿಂಕ್ ಅಪ್ಲಿಕೇಶನ್ ಬ್ಲೂಟೂತ್ ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಹೀಗೆ ಮುಂತಾದ ವೈಶಿಷ್ಟ್ಯತೆ ಯನ್ನ ಪಡೆದಿದೆ. ಎಲೆಕ್ಟ್ರಾನಿಕ್ ಪ್ಯಾಕೇಜ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಪವರ್ ಲಾಂಚ್ ಅನ್ನು ಕೂಡ ಈ ಬೈಕ್ ನಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಮೂರೂ ಪವರ್ ಮೂಡ್ ಹಾಗೂ ನಾಲ್ಕು ರೈಡಿಂಗ್ ಮೋಡ್ ಗಳನ್ನೂ ಒಳಗೊಂಡಿದೆ. ಹೊಸ V4 Gran Turismo ಎಂಜಿನ್ ಇದರ ಮತ್ತೊಂದು ವಿಶೇಷತೆಯಾಗಿದೆ.