ನಟ ದುನಿಯಾ ವಿಜಯ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಎಂದು ಹೇಳಬಹುದು, ಸದ್ಯ ದುನಿಯಾ ವಿಜಯ್ ಅವರ ಸಲಗ ಚಿತ್ರ ರಾಜ್ಯದಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಜನರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಬಹುದು. ಇನ್ನು ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಖಡಕ್ ಆಗಿ ಕಾಣಿಸಿಕೊಂಡಿದ್ದು ಚಿತ್ರದಲ್ಲಿ ದುನಿಯಾ ವಿಜಯ್ ಅವರ ನಟನೆಗೆ ಜನರು ಫುಲ್ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಇನ್ನು ಮೂರೂ ವಾರಗಳ ಹಿಂದೆ ನಟ ದುನಿಯಾ ವಿಜಯ್ ಅವರು ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದ ಹಿನ್ನಲೆಯಲ್ಲಿ ಕಣ್ಣೀರನ್ನ ಹಾಕಿದ್ದರು ಮತ್ತು ನಾಲ್ಕು ತಿಂಗಳುಗಳ ಹಿಂದೆ ದುನಿಯಾ ವಿಜಯ್ ಅವರ ತಾಯಿ ತೀರಿಕೊಂಡಿದ್ದು ಕುಟುಂಬದಲ್ಲಿ ನೋವಿನಲ್ಲಿ ಮುಳುಗಿತ್ತು ಎಂದು ಹೇಳಬಹುದು.
ಇನ್ನು ತಾಯಿ ಅಗಲಿಕೆಯ ನೋವನ್ನ ಮರೆಯುವ ಮುನ್ನವೇ ಈಗ ದುನಿಯಾ ವಿಜಯ್ ಅವರಿಗೆ ಇನ್ನೊಂದು ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಮತ್ತೆ ದುನಿಯಾ ವಿಜಯ್ ಅವರು ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ದುನಿಯಾ ವಿಜಯ್ ಅವರ ತಂದೆ ತೀರಿಕೊಂಡಿದ್ದು ದುನಿಯಾ ವಿಜಯ್ ಮತ್ತು ಅವರ ಕುಟುಂಬ ನೋವಿನಲ್ಲಿ ಮುಳುಗಿದೆ ಎಂದು ಹೇಳಬಹುದು.
ದುನಿಯಾ ವಿಜಯ್ ಅವರ ತಂದೆ ಹಲವು ಸಮಯಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಇಂದು ಬೆಳಿಗ್ಗೆ ಇಹಲೋಕವನ್ನ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ, ಇಂದು ನಿಧನರಾಗಿದ್ದಾರೆ. ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಅವರಿಗೆ 81 ವರ್ಷ ವಯಸ್ಸಾಗಿದ್ದು ಅವರು ಕೆಲವು ಸಮಯಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವಾರದಿಂದ ಅವರ ಆರೋಗ್ಯದಲ್ಲಿ ತೀರಾ ಏರುಪೇರು ಆಗಿದ್ದು ಅವರನ್ನ ಆಸ್ಪತ್ರೆಗೆ ಕೂಡ ದಾಖಲು ಮಾಡಲಾಗಿತ್ತು, ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕವನ್ನ ತ್ಯಜಿಸಿದ್ದಾರೆ.
ಇನ್ನು ಮೃತ ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ಅವರ ಅಂತ್ಯಕ್ರಿಯೆಯನ್ನು ಆನೇಕಲ್ ತಾಲೂಕಿನ ಕುಂಬಾರಹಳ್ಳಿಯಲ್ಲಿ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಕಳೆದ ಜುಲೈನಲ್ಲಿ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನರಾಗಿದ್ದರು. ಅವರ ಬಳಿಕ ಇಂದು ಅವರ ತಂದೆ ರುದ್ರಪ್ಪ ವಿಧಿವಶರಾಗಿದ್ದಾರೆ. ನಟ ದುನಿಯಾ ವಿಜಯ್ ಮತ್ತು ಅವರ ಕುಟುಂಬಕ್ಕೆ ಈ ನೋವನ್ನ ಅರಗಿಸಿಕೊಳ್ಳುವ ಶಕ್ತಿ ಆ ದೇವರು ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.