Dwarakanath Guruji: ನಿಜವಾಯಿತು ಖ್ಯಾತ ಜ್ಯೋತಿಷಿಯ ಭವಿಷ್ಯ, ಹಾಗಾದ್ರೆ ಪ್ರಧಾನಿಯಾಗಲ್ವಾ ನರೇಂದ್ರ ಮೋದಿ.

ನಿಜವಾಯಿತು ಮೋದಿ ಬಗ್ಗೆ ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯ

Dwarkanath Guruji’s Prediction About Lokasbha Election: ಸದ್ಯ ದೇಶದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಇನ್ನು ಕೇಂದ್ರದಲ್ಲಿ ಮೂರನೇ ಬಾರಿಗೆ BJP ನೇತೃತ್ವದ ಮೋದಿ ಸರ್ಕಾರ ರಚನೆ ಆಗುತ್ತದೆ ಎನ್ನುವ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಈ ಬಾರಿ ಕೂಡ ಸರ್ಕಾರ ನಮ್ಮದೇ ಎನ್ನುವ ನಂಬಿಕೆಯಲ್ಲಿ BJP ಸರ್ಕಾರವಿತ್ತು. ಇದೀಗ ಈ ರೀತಿ ಕನಸುಕಂಡ BJP ಸರ್ಕಾರಕ್ಕೆ ದೊಡ್ಡ ಆಘಾತ ಎದುರಾಗಿದೆ.

ಒಂದೇ ಮ್ಯಾಜಿಕ್ ನಂಬರ್ ದಾಟುತ್ತದೆ ಎಂದು ಬಿಜೆಪಿ ನಂಬಿತ್ತು. ಆದರೆ ಅದರ ಆಸೆ ಕೈಬಿಡಬೇಕಾಗಿದೆ. ಈಗ ಎನ್‌ಡಿಎ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು. ಸದ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ದ್ವಾರಕಾನಾಥ್ ಗುರೂಜಿಯವರ ಭವಿಷ್ಯವಾಣಿ ವೈರಲ್ ಆಗುತ್ತಿದೆ. ಗುರೂಜಿ ಅವರ ಭವಿಷ್ಯ ನಿಜವಾಯ್ತಾ..? ಎನ್ನುವ ಚರ್ಚೆ ಇದೀಗ ಶುರುವಾಗಿದೆ.

Dwarakanath Guruji Prediction
Image Credit: Daijiworld

ನಿಜವಾಯಿತು ಖ್ಯಾತ ಜ್ಯೋತಿಷಿಯ ಭವಿಷ್ಯ
2024ರ ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿದರೆ ದ್ವಾರಕಾನಾಥ್ ಗುರೂಜಿಯವರು ಕೆಲ ದಿನಗಳ ಹಿಂದೆ ನುಡಿದ ಭವಿಷ್ಯ ನಿಜವಾಗುತ್ತಿರುವಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಖ್ಯಾತ ಜ್ಯೋತಿಷಿ ದ್ವಾರಕಾನಾಥ್ ಗುರೂಜಿ ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ರಾಜ್ಯ ರಾಜಕೀಯದಲ್ಲಿ ಆಗಲಿರುವ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. “ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಬರಬಹುದು. ಆದರೆ ಅದು ವಿಳಂಬವಾಗಬಹುದು. ಪ್ರಧಾನಿ ಯಾರಾಗಬೇಕೆಂಬುದರ ಬಗ್ಗೆ ತಕ್ಷಣ ನಿರ್ಧಾರ ಆಗುವುದಿಲ್ಲ ಎಂದರು”. ಸದ್ಯ ಪ್ರಕಟಗೊಂಡಿರುವ ಫಲಿತಾಂಶವನ್ನು ಗಮನಿಸಿದರೆ ಗುರೂಜಿ ಹೇಳಿದ ಭವಿಷ್ಯವಾಣಿ ನಿಜವಾಗಿದೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

ಹಾಗಾದ್ರೆ ಪ್ರಧಾನಿಯಾಗಲ್ವಾ ನರೇಂದ್ರ ಮೋದಿ
ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಆಗಬಹುದು. ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾಗಬಹುದು ಎಂದಿದ್ದರು. ಇಡೀ ಕೂಡ ಈಗ ನಿಜವಾಗುವಂತಿದೆ. ಕೇಂದ್ರದಲ್ಲಿ ಮೋದಿ ಮೂರನೇ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಮಿತ್ರ ಪಕ್ಷಗಳ ನೆರವಿಲ್ಲದೇ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟ. ಮಿತ್ರ ಪಕ್ಷಗಳೂ ಪ್ರಧಾನಿ ಹುದ್ದೆಗೆ ಬೇಡಿಕೆ ಇಡಬಹುದು. ಆಗ ಸರ್ಕಾರ ರಚನೆ ಸುಲಭವಲ್ಲ. ಹೀಗಾಗಿ ಗುರೂಜಿ ಹೇಳಿದಂತೆ ತಡವಾಗಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಸದ್ಯ ಮೋದಿ ಪ್ರಧಾನಿ ಆಗಲ್ವ..? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮಾಡುತ್ತಿದೆ. ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಆಯ್ಕೆಯಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Dwarakanath Guruji Prediction About Lok Sabha Election
Image Credit: Original Source

Join Nadunudi News WhatsApp Group

Join Nadunudi News WhatsApp Group