e-Air Taxi: ಈಗ 90 ನಿಮಿಷಗಳ ದೂರವನ್ನ 7 ನಿಮಿಷದಲ್ಲಿ ತಲುಪಬಹುದು, ಆಕಾಶದಲ್ಲಿ ಹಾರಾಡುವ ಟ್ಯಾಕ್ಸಿ ಬಂತು.
ಚಕ್ರಗಳೇ ಇಲ್ಲದ ಕಾರ್(Car), ಚಾಲಕನ ಸಹಾಯವಿಲ್ಲದೆ ಚಲಿಸುವ ಕಾರ್ ಬಿಡುಗಡೆಗೊಳ್ಳುವ ಬಗ್ಗೆ ಸಾಕಷ್ಟು ಸುದ್ದಿಗಳು Viral ಆಗಿವೆ.
e-Air Taxi : ಸದ್ಯ ಆಧುನಿಕ ತಂತ್ರಜ್ಞಾನಗಳೊಂದಿಗೆ ಭಾರತ ಉನ್ನತ ಸ್ಥಾನದಲ್ಲಿದೆ ಎನ್ನಬಹುದು. ದೇಶದಲ್ಲಿ ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ದೇಶಿಯ ಆಟೋ (Auto) ವಲಯದಲ್ಲಿ ವಿಭಿನ್ನ ಫೀಚರ್ ಇರುವಂತ ವಾಹನಗಳು ಪರಿಚಯವಾಗಿದೆ. ಚಕ್ರಗಳೇ ಇಲ್ಲದ ಕಾರ್(Car), ಚಾಲಕನ ಸಹಾಯವಿಲ್ಲದೆ ಚಲಿಸುವ ಕಾರ್ ಬಿಡುಗಡೆಗೊಳ್ಳುವ ಬಗ್ಗೆ ಸಾಕಷ್ಟು ಸುದ್ದಿಗಳು Viral ಆಗಿವೆ.
ಸದ್ಯ ತಂತ್ರಜ್ಞಾನ ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ವಿಮಾನದಂತೆ ಆಕಾಶದಲ್ಲಿ ಹಾರಾಡುವ ವಾಹನವೊಂದು ಪರಿಚಯವಾಗುವ ಬಗ್ಗೆ ಸುದ್ದಿ ಲಭಿಸಿದೆ. ಹೌದು, ಆಕಾಶದಲ್ಲಿ ವಿಮಾನಗಳು ಓಡಾಡುತ್ತಿರುವುದನ್ನು ಹೆಚ್ಚಿನ ಜನರು ನೋಡಿರುತ್ತಾರೆ. ಆದರೆ ಆಕಾಶದಲ್ಲಿ ವಿಮಾನದಂತೆ ಓಡಾಡಯುವ ಟ್ಯಾಕ್ಸಿ ಕೂಡ ಇದೆ ಎಂದರೆ ನೀವು ನಂಬುತ್ತೀರಾ. ಇದೀಗ ಆಕಾಶದಲ್ಲಿ ಹಾರಾಡುವಂತಹ ಟ್ಯಾಕ್ಸಿ ಬಗ್ಗೆ ಮಾಹಿತಿ ತಿಳಿಯೋಣ.
ಆಕಾಶದಲ್ಲಿ ಹಾರಬಲ್ಲ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ
ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋವನ್ನು ಬೆಂಬಲಿಸುವ ಇಂಟರ್ ಗ್ಲೋಬ್ ಎಂಟರ್ ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ 2026 ರಲ್ಲಿ ಭಾರತದಲ್ಲಿ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಿದೆ. ಅದು ಆನ್-ರೋಡ್ ಸೇವೆಗಳೊಂದಿಗೆ ವೆಚ್ಚ-ಸ್ಪರ್ಧಾತ್ಮಕವಾಗಿರುತ್ತದೆ ಎಂದು ಕಂಪನಿಗಳು ಹೇಳಿಕೊಂಡಿದೆ.
ಈಗ 90 ನಿಮಿಷಗಳ ದೂರವನ್ನ 7 ನಿಮಿಷದಲ್ಲಿ ತಲುಪಬಹುದು
ಆರ್ಚರ್ ಏವಿಯೇಷನ್, ಕ್ರಿಸ್ಲರ್-ಪೋಷಕ ಸ್ಟೆಲಾಂಟಿಸ್, ಬೋಯಿಂಗ್ ಮತ್ತು ಯುನೈಟೆಡ್ ಏರ್ ಲೈನ್ಸ್ ನ ಬೆಂಬಲದೊಂದಿಗೆ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ( eVTOL ) ವಿಮಾನಗಳನ್ನು ತಯಾರಿಸುತ್ತದೆ. Midnight ಇ-ವಿಮಾನಗಳು ನಾಲ್ಕು ಪ್ರಯಾಣಿಕರನ್ನು ಮತ್ತು ಪೈಲಟ್ ಅನ್ನು 100 ಮೈಲುಗಳವರೆಗೆ ಅಂದರೆ 161 ಕಿಲೋಮೀಟರ್ ವರೆಗೆ ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಈ ಸೇವೆಯು 200 ವಿಮಾನಗಳೊಂದಿಗೆ ಪ್ರಾರಂಭವಾಗುವ ಗುರಿಯನ್ನು ಹೊಂದಿದೆ ಮತ್ತು ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುವುದು. ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸಲು ಸಾಮಾನ್ಯವಾಗಿ 60 ರಿಂದ 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈ ಏರ್ ಟ್ಯಾಕ್ಸಿ ಮೂಲಕ ಸುಮಾರು 7 ನಿಮಿಷಗಳಲ್ಲಿ ಪ್ರಯಾಣವನ್ನು ಮುಗಿಸಬಹುದಾಗಿದೆ. ಇನ್ನು ನೂತನ ಆವಿಷ್ಕಾರದ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ 2026 ರ ವೇಳೆಯಲ್ಲಿ ಭಾರತಕ್ಕೆ ಬರುವ ಬಗ್ಗೆ ವರದಿಯಾಗಿದೆ. ಈ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಬಿಡುಗಡೆಯಾದರೆ ಪ್ರಯಾಣದ ಸಮಯ ಸಾಕಷ್ಟು ಉಳಿತಾಯವಾಗಲಿದೆ.