e-shram Card: ನರೇಂದ್ರ ಮೋದಿ ಸರ್ಕಾರದ ಇನ್ನೊಂದು ಯೋಜನೆ, ಪ್ರತಿಯೊಬ್ಬರಿಗೂ ಸಿಗಲಿದೆ 2 ಲಕ್ಷ

ಈ ಯೋಜನೆಯಡಿ ಉಚಿತ ಚಿಕಿತ್ಸೆ, 2 ಲಕ್ಷ ರೂ.ಗಳ ವಿಮೆ ಸೌಲಭ್ಯ!

e-shram Card Apply Online: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲು ಇ-ಶ್ರಮ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ e-Shram Card ಯೋಜನೆಯನ್ನು ಪರಿಚಯಿಸಿದೆ.

ಹಾಗಾದರೆ ನಾವೀಗ ಅದರ ಪ್ರಯೋಜನಗಳೇನು…? ಅದನ್ನು ಯಾರು ಪಡೆದುಕೊಳ್ಳಬಹುದು…? ಹಾಗೆ ಆ ಯೋಜನೆಗೆ ಅರ್ಜಿ ಸಲ್ಲಿಸುದು ಹೇಗೆ…? ಅಗತ್ಯವಿರುವ ದಾಖಲೆಗಳೇನು..? ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

e-Shram card apply
Image Credit: Housing

ಪ್ರಯೋಜನಗಳು…?
* 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ

*60 ವರ್ಷದ ನಂತರ ತಿಂಗಳಿಗೆ 3 ಸಾವಿರ ರೂ. ಪಿಂಚಣಿ

*ಕಾರ್ಮಿಕರಿಗೆ 2 ಲಕ್ಷ ರೂ. ಗಳ ಅಪಘಾತ ವಿಮೆ

Join Nadunudi News WhatsApp Group

*ಅಪಘಾತದಲ್ಲಿ ಅಂಗವಿಕಲರಾದರೆ ಕಾರ್ಮಿಕರಿಗೆ 1 ಲಕ್ಷ ರೂ.

*ಎಲ್ಲಾ ಕಾರ್ಮಿಕರಿಗೆ ತಿಂಗಳಿಗೆ 500 ರಿಂದ 1000 ರೂ.

*ಮೊದಲ ಮನೆ ಕಟ್ಟಲು ಆರ್ಥಿಕ ನೆರವು

*ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು

*ಗರ್ಭಿಣಿಯರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯಧನ ಸಿಗುತ್ತದೆ.

e-Shram Card Eligibility
Image Credit: TV9 Telugu

ಅರ್ಹತೆ…?
*16 ರಿಂದ 59 ವರ್ಷದೊಳಗಿನ ಮನೆಕೆಲಸದಾಳು
*ಚಾಲಕ
*ಅಂಗಡಿ ಸೇಲ್ಸ್ ಗರ್ಲ್ ಅಥವಾ ಸೇಲ್ಸ್ ಬಾಯ್

ಅಗತ್ಯವಿರುವ ದಾಖಲೆಗಳು…?
*ಆಧಾರ್ ಸಂಖ್ಯೆ
*ಮೊಬೈಲ್ ಸಂಖ್ಯೆ
*ಬ್ಯಾಂಕ್ ಖಾತೆ ಸಂಖ್ಯೆ

ಆನ್ಲೈನ್ ನಲ್ಲಿ ಈ ರೀತಿಯಾಗಿ ಅರ್ಜಿ ಸಲ್ಲಿಸಿ
*ಮೊದಲು www.eshram.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
*ಆಧಾರ್ ಸಂಖ್ಯೆ ನಮೂದಿಸಿ ಹಾಗೂ ಆಧಾರ್ ಲಿಂಕ್ ಮಾಡಿದ ಫೋನ್ ನಂಬರ್ ನಮೂದಿಸಬೇಕು.
*OTP ನಮೂದಿಸಿ, ನೊಂದಣಿ ಫಾರ್ಮ್ ನಲ್ಲಿರುವ ವಿವರವನ್ನು ಭರ್ತಿ ಮಾಡಿ, ಸಬ್ಮಿಟ್ ಬಟ್ಟನ್ ಕ್ಲಿಕ್ ಮಾಡಬೇಕು.

e-Shram Card Benefits
Image Credit: Original Source

Join Nadunudi News WhatsApp Group