E18R EV: ಒಮ್ಮೆ ಚಾರ್ಜ್ ಮಾಡಿದರೆ 200Km ಮೈಲೇಜ್, ಯುವಕರಿಗಾಗಿ ಇನ್ನೊಂದು ಎಲೆಕ್ಟ್ರಿಕ್ ಬೈಕ್.
ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 200 ಕಿಲೋ ಮೀಟರ್ ಮೈಲೇಜ್ ಕೊಡುವ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಬಿಡುಗಡೆ.
E18R Electric Bike Details: ಇದೀಗ ಮಾರುಕಟ್ಟೆಯ ಹೊಸ ಎಲೆಕ್ಟ್ರಿಕ್ ಬೈಕ್ (Electric Bike) ಒಂದು ಬಿಡುಗಡೆ ಆಗಿದೆ. ಈ ಬೈಕ್ ಉತ್ತಮ ಜಮೈಲೇಜ್ ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಬೈಕ್ ಖರೀದಿಸುವವರಿಗೆ ಈ ಬೈಕ್ ಉತ್ತಮವಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಹೊಸ ವಿನ್ಯಾಸದಲ್ಲಿ ಬಿಡುಗಡೆ ಆಗುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ತಿಳಿಯೋಣ.
ಇ 18 ಆರ್ ಎಲೆಕ್ಟ್ರಿಕ್ ಬೈಕ್
ಟೌ ಲೋಟಸ್ ಮೋಟಾರ್ಸ್ ಇಂಡಿಯಾ ಸಂಸ್ಥೆಯ ವೂಲ್ಫ್ ಹೌಂಡ್ ಮೋಟಾರ್ಸ್ ಸಂಸ್ಥೆಯು ಹೊಸ ತಲೆಮಾರಿನ ಆಧುನಿಕ ತಂತ್ರಜ್ಞಾನದ ಇ 18 ಆರ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಪ್ರವೇಶಿಸಿದ್ದು, ಗುರುವಾರದಿಂದಲೇ ಈ ಬೈಕ್ ಬುಕ್ಕಿಂಗ್ ಆರಂಭಿಸಿದೆ. ಇನ್ನು ಈ ಎಲೆಕ್ಟ್ರಿಕ್ ಬೈಕ್ ಕಡುಗಪ್ಪು, ಕೆಂಪು, ನೀಲಿ ಸೇರಿ ಆರು ಬಣ್ಣಗಳಲ್ಲಿ ಬೈಕ್ ಗಳು ದೊರೆಯಲಿವೆ.
ಇ 18 ಆರ್ ಎಲೆಕ್ಟ್ರಿಕ್ ಬೈಕ್ ನ ವಿಶೇಷತೆ
135 ಕಿ. ಮೀ ವೇಗದಲ್ಲಿ ಚಲಿಸುವ ಇ 18 ಆರ್ ಎಲೆಕ್ಟ್ರಿಕ್ ಬೈಕ್ ಒಮ್ಮೆ ಚಾರ್ಜ್ ಮಾಡಿದರೆ 200 ಕಿ. ಮೀ ಕ್ರಮಿಸುತ್ತದೆ. 55 ಕಿಲೋವ್ಯಾಟ್ ನ, 9.5 ಕೆ.ಜಿ. ತೂಕದ ಬ್ಯಾಟರಿ ವಾಹನ ಚಲಿಸುತ್ತಿರುವಾಗಲೇ ಚಾರ್ಜಿಂಗ್ ಆಗುವ ವ್ಯವಸ್ಥೆ ಹೊಂದಿದೆ. ಕ್ಯಾಮೆರಾ, ಬ್ಲೂ ಟೂಥ್, ಡಿಜಿಟಲ್ ಕೀ ಒಳಗೊಂಡಿದೆ. ಬೈಕ್ ಜೊತೆ ಚಾರ್ಜ್ ಮಾಡುವ ಬ್ಯಾಟರಿ, ಹೆಲ್ಮೆಟ್ ನೀಡಲಾಗುವುದು ಎಂದು ತಿಳಿಸಿದರು.
ಇ 18 ಆರ್ ಎಲೆಕ್ಟ್ರಿಕ್ ಬೈಕ್ ನ ಬೆಲೆ
20 ಸಾವಿರ ರು.ಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬೈಕ್ ಶೋರೂಂ ಬೆಲೆ 3,91,800 ರು.ಆಗಿದ್ದು, ವಿವಿಧ ಸಬ್ಸಿಡಿ ಸಿಗಲಿದೆ. ಬೈಕ್ ಬುಕ್ಕಿಂಗ್‌ಗೆ ವೆಬ್‌ಸೈಟ್ https://wolfhoundmotors.com/ ಆಗಿದೆ. ಮೊಬೈಲ್ ಸಂಖ್ಯೆ 90193 68900 ಅನ್ನು ಸಂಪರ್ಕಿಸಬಹುದು.