Education System: ರಾಜ್ಯದ ಎಲ್ಲಾ ಶಾಲೆ ಮಕ್ಕಳಿಗೆ ಇಂದಿನಿಂದ ಹೊಸ ನಿಯಮ, ಶಿಕ್ಷಣ ಇಲಾಖೆಯ ಮಹತ್ವದ ಆದೇಶ.
ರಾಜ್ಯದ ಎಜುಕೇಶನ್ ಸಿಸ್ಟಮ್ ನಲ್ಲಿ ಬದಲಾವಣೆ ಮಾಡಿದ ಶಿಕ್ಷಣ ಇಲಾಖೆ.
Kannada In CBSE School: ಈ ಬಾರಿಯ ಶಿಕ್ಷಣ ನೀತಿ ಸಂಪೂರ್ಣ ಬದಲಾವಣೆ ಆಗಿದೆ. ಶಿಕ್ಷಣ ಇಲಾಖೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳು ಹೊಸ ಪಠ್ಯಕ್ರಮದ ಪ್ರಕಾರ ಶಿಕ್ಷಣ ಪಡೆಯಬೇಕಿದೆ. ಇನ್ನು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ.
ಇತ್ತೀಚಿಗೆ ಸರ್ಕಾರೀ ಶಾಲೆಗಳಿಗಿಂತ ಮಕ್ಕಳು ಹೆಚ್ಚಾಗಿ ಖಾಸಗಿ ಶಾಲೆಗಳಿಗೆ ಸೇರುತ್ತಾರೆ. ಖಾಸಗಿ ಶಾಲೆಗಳಲ್ಲಿ ಪಾಠದ ಬೋಧನೆಗಳು ಇಂಗ್ಲಿಷ್ ನಲ್ಲಿ ಮಾತ್ರ ಇರುತ್ತದೆ. ಖಾಸಗಿ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಭಾಷೆಯ ಭೋಧನೆ ಇರುವುದಿಲ್ಲ.
ಕನ್ನಡ ವಿಷಯದ ಪಾಠದ ಸಮಯದಲ್ಲಿ ಕನ್ನಡ ಬಳಸುವುದು ಬಿಟ್ಟರೆ ಹೆಚ್ಚಾಗಿ ಇಂಗ್ಲಿಷ್ ನಲ್ಲಿ ಪಾಠದ ಭೋದನೆಗಳು ನಡೆಯುತ್ತವೆ. ಈ ಸಿಬಿಎಸ್ ಇ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಭಾಷೆಯ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ. ಇದೀಗ ಕೇಂದ್ರ ಸರ್ಕಾರ ಕನ್ನಡಿಗರಿಗೆ ಖುಷಿ ನೀಡುವ ವಿಚಾರವನ್ನು ಘೋಷಿಸಿದೆ.
CBSE ಶಾಲೆಗಳಲ್ಲಿ ಇನ್ನುಮುಂದೆ ಕನ್ನಡ ಮಾಧ್ಯಮ ಬೋಧನೆ
ಇಂಗ್ಲಿಷ್ ಪಠ್ಯಕ್ರಮವನ್ನು ಹೊಂದಿರುವ ಸಿಬಿಎಸ್ ಇ ಶಾಲೆಗಳಲ್ಲಿ ಕನ್ನಡ ಹಾಗೂ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಪ್ರೌಢಶಿಕ್ಷಣ ಮಂಡಳಿ ಶಾಲೆಗಳಿಗೆ ಮಹತ್ವದ ಸೂಚನೆಯನ್ನು ನೀಡಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ (NEP ) 2024 ರ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳ ಮಾಧ್ಯಮಗಳಲ್ಲೂ ಸಿಬಿಎಸ್ ಇ ಶಿಕ್ಷಣ ನೀಡಬಹುದಾಗಿದೆ ಎಂದು ಕೇಂದ್ರೀಯ ಪಠ್ಯಕ್ರಮದ ಅಧೀನದ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಕಡಿಮೆ ಆಗುತ್ತಿದೆ. ಕನ್ನಡಿಗರೇ ಕನ್ನಡವನ್ನು ಬಳಸುತ್ತಿಲ್ಲ. ಬದಲಾಗಿ ಇಂಗ್ಲಿಷ್, ಹಿಂದಿ ಭಾಷೆಗಳ ಬಳಕೆ ಹೆಚ್ಚಾಗಿದೆ. ಅದರಲ್ಲೂ ಹೆಚ್ಚಾಗಿ ಸಣ್ಣ ಮಕ್ಕಳಿಗೆ ಕನ್ನಡ ಅರಿವು ಕಡಿಮೆ ಇರುತ್ತದೆ.
ಶಾಲೆಗಳಲ್ಲಿ ಕನ್ನಡ ಹೇಳಿಕೊಟ್ಟರೆ ಮಾತ್ರ ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಯುತ್ತದೆ. ಇನ್ನು ಹೆಚ್ಚಾಗಿ CBSE ಶಾಲೆಗಳಲ್ಲಿ ಕನ್ನಡ ಬಳಕೆಯೇ ಇರುವುದಿಲ್ಲ. ಸಿಬಿಎಸ್ ಇ ಶಾಲಾ ಮಕ್ಕಳಿಗೂ ಕನ್ನಡ ಅರಿವು ಮಾಡಿಸಬೇಕೆಂದು ಕೇಂದ್ರ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.