Egg And Chicken: ಮಾಸ ಪ್ರಿಯರಿಗೆ ಬೇಸರದ ಸುದ್ದಿ, ದಾಖಲೆಯ ಏರಿಕೆ ಕಂಡ ಕೋಳಿ ಮೊಟ್ಟೆ ಮತ್ತು ಮಾಂಸದ ಬೆಲೆ.
ಮಾರುಕಟ್ಟೆಯಲ್ಲಿ ಕೋಳಿ ಹಾಗೂ ಮೊಟ್ಟೆ ದರ ಪರಿಷ್ಕರಣೆ.
Egg And Chicken Price: ಭಾರತೀಯ ಮಾರುಕಟ್ಟೆಯಲ್ಲಿ ಕೋಳಿ ಸಾಕಾಣಿಕೆ ವ್ಯವಹಾರ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎನ್ನಬಹುದು. ಜನರು ಹೆಚ್ಚಾಗಿ ಕೋಳಿ ಮಾಂಸಗಳನ್ನು ಇಷ್ಟಪಡುತ್ತಾರೆ. ಕೋಳಿ ಮತ್ತು ಮೊಟ್ಟೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೋಳಿ ಸಾಕಾಣಿಕೆ ಮಾಡುವವರು ಎರಡು ವ್ಯವಹಾರ ಮಾಡುತ್ತಾರೆ.
ಕೋಳಿ ಜೊತೆಗೆ ಕೋಳಿಗಳು ನೀಡುವ ಮೊಟ್ಟೆಯನ್ನು ಕೂಡ ಮಾರಾಟ ಮಾಡಿ ಅದರಿಂದ ಕೂಡ ಲಾಭವನ್ನು ಪಡೆಯುತ್ತಾರೆ. ಇದೀಗ ಮೊಟ್ಟೆ ಹಾಗೂ ಕೋಳಿ ಪ್ರಿಯರಿಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಈ ಹೊಸ ಸುದ್ದಿ ಮೊಟ್ಟೆ ಪ್ರಿಯರಿಗೆ ಶಾಕ್ ನೀಡಿದರೆ ಕೋಳಿ ಪ್ರಿಯರಿಗೆ ಸಂತಸ ನೀಡಲಿದೆ.
ಮೊಟ್ಟೆ ಪ್ರಿಯರಿಗೆ ಬಿಗ್ ನ್ಯೂಸ್
ಇದೀಗ ಮಾರುಕಟ್ಟೆಯಲ್ಲಿ ಕೋಳಿ ಹಾಗೂ ಮೊಟ್ಟೆ ದರ ಪರಿಷ್ಕರಣೆಯಾಗಿದೆ. ಮೊಟ್ಟೆ ದರ ಏರಿಕೆ ಕಾಣುವ ಮೂಲಕ ಮೊಟ್ಟೆ ಪ್ರಿಯರಿಗೆ ಶಾಕ್ ನೀಡಿದೆ. ಆದರೆ ಮಾರುಕಟ್ಟೆಯಲ್ಲಿ ಕೋಳಿ ದರ ಇಳಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 6.50 ರೂ. ಬೆಲೆ ಆಗಿತ್ತು. ಇದೀಗ ಮೊಟ್ಟೆ ದರದಲ್ಲಿ 1 ರೂ. ಏರಿಕೆ ಕಾಣುವ ಮೂಲಕ 7.50 ರೂ. ಆಗಿದೆ. ಕಳೆದ ವಾರದಲ್ಲಿ ಮೊಟ್ಟೆ ದರ ಸ್ವಲ್ಪ ಅಗ್ಗವಾಗಿತ್ತು. ಒಂದು ಮೊಟ್ಟೆ 5.50 ರಿಂದ 6 ರೂ. ಗಳಲ್ಲಿ ಲಭ್ಯವಾಗಿತ್ತು. ಕಳೆದ ಒಂದೆರಡು ವಾರದಿಂದ ಮೊಟ್ಟೆ ದರ ಏರಿಕೆಯಾಗತ್ತಲೆ ಇದೆ.
ಮಾರುಕಟ್ಟೆಯಲ್ಲಿ ಕೋಳಿ ದರ ಇಳಿಕೆ
ಇನ್ನು ಮಾರುಕಟ್ಟೆಯಲ್ಲಿ ಸಾಕಷ್ಟು ಕೋಳಿ ಸಾಕಾಣಿಕೆ ಫಾರ್ಮ್ ಗಳು ನಡೆಯುತ್ತಿದೆ. ಇದೀಗ ಮೊಟ್ಟೆ ದರ ಏರಿಕೆ ಆಗಿದ್ದು ಚಿಕನ್ ದರದಲ್ಲಿ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆ ಆಗಿಲ್ಲ. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚಾಗಿ ಕೋಳಿ ಮಾಂಸ ಪೂರೈಕೆಯಾಗುತ್ತಿದೆ. ಈ ಕಾರಣಕ್ಕೆ ಕೋಳಿ ಮಾಂಸದ ದರ ಇಳಿಕೆ ಮಾಡಲಾಗಿದೆ. ಬಾಯ್ಲಾರ್ ಕೋಳಿ ದರ ಮಾರುಕಟ್ಟೆಯಲ್ಲಿ 140 ರಿಂದ 160 ರೂ. ಇದೆ. ಈ ಹಿಂದೆ ಕೋಳಿ ಮಾಂಸದ ದರ 180 ರಿಂದ 200 ರೂ. ಗೆ ಲಭ್ಯವಾಗಿತ್ತು.