Electric vs CNG: Electric vs CNG ಕಾರುಗಳಲ್ಲಿ ಯಾವುದು ಬೆಸ್ಟ್, ಹೊಸ ಕಾರ್ ಖರೀದಿಸುವ ಮುನ್ನ ಎಚ್ಚರ.
CNG ಮತ್ತು ಎಲೆಕ್ಟ್ರಿಕ್ ಕಾರುಗಳನ್ನ ಯಾವ ಕಾರ್ ಖರೀದಿ ಮಾಡುವುದು ಉತ್ತಮ.
Electric Car And CNG Car Advantage And Disadvantage: ಮಾರುಕಟ್ಟೆಯಲ್ಲಿ ಈ ಹಿಂದೆ ಹೆಚ್ಚಾಗಿ Petrol, Diesel ಚಾಲಿತ ವಾಹನಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದವು. ಆದರೆ ಇತ್ತೀಚಿಗೆ ದೇಶದಲ್ಲಿ ಕಚ್ಚಾ ತೈಲಗಳ ಬೆಲೆ ಗಣನೀಯ ಏರಿಕೆ ಕಾಣುತ್ತಿದೆ.
ಈ ಕಾರಣಕ್ಕೆ ದೇಶಿಯ ಮಾರುಕಟ್ಟೆಯಲ್ಲಿ Electric ಹಾಗೂ CNG ಚಾಲಿತ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. Petrol , Diesel ಏರಿಕೆಯ ಕಾರಣ ಜನರು ಹೆಚ್ಚಾಗಿ Electric ಹಾಗೂ CNG ಚಾಲಿತ ವಾಹನಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡಿತ್ತಿದ್ದಾರೆ. ಈ ನಡುವೆ Petrol, Diesel ಚಾಲಿತ ವಾಹನಗಳ ಮಾರಾಟ ಕಡಿಮೆ ಆಗಿದೆ ಎಂದರೆ ತಪ್ಪಾಗಲಾರದು.
ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ Electric ಹಾಗೂ CNG ಚಾಲಿತ ವಾಹನಗಳು
ಇನ್ನು ವಿವಿಧ ಪ್ರತಿಷ್ಠಿತ ಕಂಪನಿಗಳು ಕೂಡ Electric ಹಾಗೂ CNG ಚಾಲಿತ ವಾಹನಗಳನ್ನೇ ಪರಿಚಯಿಸುತ್ತಿವೆ. ಕೆಲ ಕಂಪನಿಗಳು ತನ್ನ ಪೆಟ್ರೋಲ್ ಮಾದರಿಯನ್ನೇ Electric ಹಾಗೂ CNG ರೂಪಾಂತರದಲ್ಲಿ ಪರಿಚಯಿಸಲು ಮುಂದಾಗಿದೆ. ಇನ್ನು Electric ಹಾಗೂ CNG ಚಾಲಿತ ವಾಹನಗಳು ಗ್ರಾಹಕರಿಗೆ ಖರ್ಚನ್ನು ಕಡಿಮೆ ಮಾಡುತ್ತದೆ. ಇದೀಗ Electric ಹಾಗೂ CNG ಚಾಲಿತ ವಾಹನಗಳ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ಒಂದಿಷ್ಟು ವಿವರವನ್ನು ತಿಳಿದುಕೊಳ್ಳೋಣ.
CNG ಕಾರ್ ಗಳ ಅನುಕೂಲ ಮತ್ತು ಅನಾನುಕೂಲ
*CNG ಕಾರುಗಳು ಪೆಟ್ರೋಲ್ ಅಥವಾ ಡೀಸೆಲ್ ನಲ್ಲಿ ಚಲಿಸುವ ಆಯ್ಕೆಯನ್ನು ಸಹ ನೀಡುತ್ತವೆ. CNG ಕಾರುಗಳಲ್ಲಿ ಯಾವುದೇ ಮಾಲಿನ್ಯದ ಅಪಾಯ ಉಂಟಾಗುವುದಿಲ್ಲ.
*ಇನ್ನು CNG ಕಾರುಗಳಲ್ಲಿ ಕೆಲ ಅನಾನುಕೂಲ ಇರುತ್ತದೆ. ಕಾರಿನ ಬೂಟ್ ಜಾಗದಲ್ಲಿ ಸಿಎನ್ ಜಿ ಕಿಟ್ ಅಳವಡಿಸಲಾಗಿದ್ದು, ಪ್ರಯಾಣಿಕರು ತಮ್ಮ ಲಗೇಜ್ ಗಳನ್ನು ಕಾರಿಗೆ ಲೋಡ್ ಮಾಡಲು ಕಷ್ಟವಾಗುತ್ತದೆ.
*ಕೆಲವು ರಾಜ್ಯಗಳು ಅಥವಾ ನಗರಗಳ ಹೊರಗೆ ಸಿಎನ್ ಜಿ ಸ್ಟೇಷನ್ ಗಳನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ.
*CNG ಬಳಕೆಯು ಸಾಮಾನ್ಯವಾಗಿ ಕಾಲಾನಂತರದಲ್ಲಿ ವಾಹನದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
Electric ಕಾರ್ ಗಳ ಅನುಕೂಲ ಮತ್ತು ಅನಾನುಕೂಲ
*ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಅಗ್ಗವಾಗಿದೆ. ಕೆಲವು ಸಂದರ್ಭಗಳಲ್ಲಿ ರೂ 1 ಕ್ಕಿಂತ ಕಡಿಮೆ ಇರುವ EV ಯ ಚಾಲನೆಯ ವೆಚ್ಚವು CNG ವಾಹನಕ್ಕಿಂತ ಅಗ್ಗವಾಗಿದೆ. Electric ವಾಹನಕ್ಕೆ ಹೆಚ್ಚಿನ ಖರ್ಚಿನ ಅವಶ್ಯಕೆತೆ ಇರುವುದಿಲ್ಲ.
*ಇನ್ನು Electric ಕಾರುಗಳಲ್ಲಿ ಕೂಡ ಕೆಲ ಅನಾನುಕೂಲ ಇರುತ್ತದೆ. Electric ವಾಹನಗಳ ಬೆಲೆ ಮಾರುಕಟ್ಟೆಯಲ್ಲಿ ಅಧಿಕವಾಗಿರುತ್ತದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಕರುಗಳು ಸುಮಾರು 5 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಪಡೆಯಬಹುದು. ಆದರೆ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿವೆ.
*ಪೆಟ್ರೋಲ್, ಡೀಸೆಲ್, CNG ತುಂಬುವ ಪಂಪ್ ಗಳು ಹಲವು ಸ್ಥಳಗಳಲ್ಲಿ ಲಭ್ಯವಿರುತ್ತದೆ. ಆದರೆ EV Charge ಮಾಡಲು ಹಲವು ಸ್ಥಳಗಳಲ್ಲಿ ಚಾರ್ಜರ್ ಗಳು ಸಿಗುವುದಿಲ್ಲ.