Ads By Google

Ev Tax: ಎಲೆಕ್ಟ್ರಿಕ್ ಕಾರ್ ಖರೀದಿಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಸಿಗಲಿದೆ ಇಷ್ಟು ತೆರಿಗೆ ವಿನಾಯಿತಿ

income tax exemption on electric cars

Image Credit: Original Source

Ads By Google

Tax Exemption ON Electric Car: ಈಗಾಗಲೇ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲೆ ತೆರಿಗೆ ವಿನಾಯತಿಯನ್ನು ನೀಡಿದೆ. ಈ ತೆರಿಗೆ ವಿನಾಯಿತಿ ಎಲೆಕ್ಟ್ರಿಕ್ ವಾಹನ ಹೊಂದಿರುವವರಿಗೆ ಹಾಗು ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವವರಿಗೆ ಬಂಪರ್ ಆಫರ್ ನೀಡಿದಂತಾಗಿದೆ. ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಾಗಲೆಂದು ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ.

ಹಾಗೆಯೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಖರೀದಿದಾರರು 1,000 ರಿಂದ 40,000 ರೂಪಾಯಿಗಳ ವರೆಗೆ ತೆರಿಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

Image Credit: Outlookindia

ವಾಹನಗಳ ತೆರಿಗೆಯನ್ನು ಈ ರೀತಿಯಾಗಿ ನಿಗದಿಪಡಿಸಲಾಗಿದೆ

ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ರಿಯಾಯಿತಿ ದರವನ್ನು ನಿಗದಿಪಡಿಸಲಾಗಿದ್ದು, ದ್ವಿಚಕ್ರ ವಾಹನಗಳಿಗೆ 1,000 ರೂ.ನಿಂದ 5,000 ರೂ.ವರೆಗೆ ರಿಯಾಯಿತಿ ಇದೆ ಅಂತೆಯೇ 1 ಲಕ್ಷ ಮೌಲ್ಯದ ವಾಹನಗಳಿಗೆ ರೂ 1,000, 2 ಲಕ್ಷ ಮೌಲ್ಯದ ವಾಹನಗಳಿಗೆ ರೂ 2000 ರಿಯಾಯಿತಿ ಹಾಗೂ 4-5 ಲಕ್ಷ ಮೌಲ್ಯದ ವಾಹನಗಳಿಗೆ ರೂ 5,000 ರಿಯಾಯಿತಿಯನ್ನು ವಿಧಿಸಲಾಗಿದೆ.

5 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳಿಗೆ 10,000 ರೂ, 5-10 ಲಕ್ಷ ಬೆಲೆಯವರಿಗೆ 20,000 ರೂ, 10-15 ಲಕ್ಷ ರೂ. ಬೆಲೆಯವರಿಗೆ 30,000 ರೂ., 15-20 ಲಕ್ಷ ರೂ. ಬೆಲೆಯವರಿಗೆ 40,000 ರೂ. ಮತ್ತು 20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ರಿಯಾಯಿತಿ ರೂ. 50,000 ಎಂಬುದಾಗಿ ನಿರ್ಧರಿಸಲಾಗಿದೆ. ಹೊಸ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳ ಖರೀದಿಗೆ ತಮ್ಮ ಹಳೆಯ ನಾಲ್ಕು ಚಕ್ರಗಳ ವಾಹನಗಳನ್ನು ತ್ಯಜಿಸುವವರಿಗೂ ಇದೇ ತೆರಿಗೆ ರಿಯಾಯಿತಿ ಅನ್ವಯವಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Image Credit: Spinny

ವಿದ್ಯುತ್ ಸಾರಿಗೆ ವಾಹನಗಳಿಗೂ ರಿಯಾಯಿತಿ ಅನ್ವಯಿಸುತ್ತದೆ

ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಅಲೈಡ್ ವರ್ಕರ್ಸ್ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಸೆಸ್ ಸುಗ್ರೀವಾಜ್ಞೆ 2024 ಅಂತಹ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಈ ಸೆಸ್ ನಿಂದಾಗಿ ಕಲ್ಯಾಣ ನಿಧಿಗೆ ವಾರ್ಷಿಕ ಸುಮಾರು 300 ಕೋಟಿ ರೂ ಸಂಗ್ರಹವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಂತೆಯೇ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯ ಸೆಕ್ಷನ್ 3(ಎ) ಪ್ರಕಾರ ಇದನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ. ಈ ರಿಯಾಯಿತಿಯು ವಿದ್ಯುತ್ ಸಾರಿಗೆ ವಾಹನಗಳಿಗೂ ಅನ್ವಯಿಸುತ್ತದೆ. ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿ 2022 ರ ನಿಬಂಧನೆಗಳ ಪ್ರಕಾರ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in