Royal Enfield EV: ಬಂತು ಭರ್ಜರಿ ಮೈಲೇಜ್ ಕೊಡುವ Enfield ಎಲೆಕ್ಟ್ರಿಕ್, ಇನ್ನುಮುಂದೆ ಎಲ್ಲೆಲ್ಲೂ ಬುಲೆಟ್ ಬೈಕ್ ಹವಾ.
ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಎಲೆಕ್ಟ್ರಿಕ್ ರಾಯಲ್ ಏನ್ ಫೀಲ್ಡ್ ಬೈಕ್ ಬಿಡುಗಡೆಗೆ ತಯಾರಿ ನೆಡೆಸುತ್ತಿದೆ.
Electric Royal Enfield Bike: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಬೈಕ್ ಗಳು, ಸ್ಕೂಟರ್ ಗಳು ಕಾರುಗಳು ಬಿಡುಗಡೆಯಾಗುತ್ತಿವೆ. ಇದೀಗ ಇನ್ನು ಮುಂದಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ರಾಯಲ್ ಏನ್ ಫೀಲ್ಡ್ (Royal Enfield) ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಈಗಾಗಲೇ ಘೋಷಣೆ ಮಾಡಿದೆ.
ಆದರೆ ಈ ಎಲೆಕ್ಟ್ರಿಕ್ ರಾಯಲ್ ಏನ್ ಫೀಲ್ಡ್ ಬೈಕ್ ಅನ್ನು ಬಿಡುಗಡೆ ಮಾಡಲು ತುಂಬಾ ಸಮಯವಿದೆ. ಅಲ್ಲಿಯವರೆಗೂ ಕಾಯಲು ಸಿದ್ಧವಿಲ್ಲದ ರಾಯಲ್ ಏನ್ ಫೀಲ್ಡ್ ಅಭಿಮಾನಿಯೊಬ್ಬರು ತಮ್ಮ ಹಳೆಯ ಕ್ಲಾಸಿಕ್ ಮಾದರಿಯನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ್ದಾರೆ.
ಹೊಸ ಎಲೆಕ್ಟ್ರಿಕ್ ರಾಯಲ್ ಏನ್ ಫೀಲ್ಡ್ ಬೈಕ್
ಬೆಂಗಳೂರು ಮೂಲದ ಬುಲೆಟಿರ್ ಕಸ್ಟಮ್ಸ್ ಈ ಹಳೆಯ ರಾಯಲ್ ಏನ್ ಫೀಲ್ಡ್ ಬುಲೆಟ್ ಅನ್ನು ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನವನ್ನಾಗಿ ಮಾರ್ಪಡಿಸಿದೆ. ಈ ಮನಸೆಳೆಯುವ ಬೈಕ್ ನ ಮಾಲೀಕ ರಿಕಿ ಅವರು ಎಲೆಕ್ಟ್ರಿಕ್ ವಾಹನದ ಅದ್ಬುತ ರಚನೆಯ ಪ್ರಮುಖ ವ್ಯಕ್ತಿಯಾಗಿದ್ದಾರೆ.
1984 ರ ಮಾದರಿಯ ರಾಯಲ್ ಏನ್ ಫೀಲ್ಡ್ ಸ್ಟ್ಯಾಂಡರ್ಡ್ ಬೈಕ್ ರಿಕಿ ಅವರ ಹತ್ತಿರ ಇದ್ದಿತ್ತಂತೆ. ರಿಕಿ ಅವರು ಈ ಬೈಕ್ ಅನ್ನು ಹೊಸ ರೂಪಾಂತರವಾಗಿ ಪರಿವರ್ತಿಸಿದ್ದಾರೆ. ಇನ್ನು ಈ ಎಲೆಕ್ಟ್ರಿಕ್ ರಾಯಲ್ ಏನ್ ಫೀಲ್ಡ್ ಬೈಕ್ ಅನ್ನು ತಯಾರಿಸಲು ಬೇಕಾಗಿರುವ ವೆಚ್ಚದ ಬಗ್ಗೆ ಕೇಳಿದಾಗ ಅವರು ಬೆಲೆ ಬ್ಯಾಟರಿ ಗಾತ್ರ ಮತ್ತು ಆಯ್ಕೆಮಾಡಿದ ಮೋಟಾರ್ ಪವರ್ ಮೇಲೆ ಅವಲಂಬಿಸರುತ್ತದೆ ಎಂದು ತಿಳಿಸಿದ್ದಾರೆ. ಅಂದರೆ ಇದರ ಅಂದಾಜು ವೆಚ್ಚ ರೂಪಾಯಿ 3 ಲಕ್ಷದಿಂದ 3 .5 ಲಕ್ಷಕ್ಕೂ ಹೆಚ್ಚಾಗಿ ಖರ್ಚಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಎಲೆಕ್ಟ್ರಿಕ್ ರಾಯಲ್ ಏನ್ ಫೀಲ್ಡ್ ಬೈಕ್ ನ ವಿಶೇಷತೆ
ಇನ್ನು ಈ ಬೈಕ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಟೈಲಿಶ್ ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಗಳು, ಕಸ್ಟಮ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಘಟಕ, ಮೆಷಿನ್ ಫಿನಿಶ್ಡ್ ವೀಲ್ಸ್, ಎರಡು ತುದಿಗಳಲ್ಲಿ ಸಿಂಗಲ್ ಡಿಸ್ಕ್ ಸೆಟಪ್ ಗಳು, ಫ್ಯಾಟ್ ಟೈರ್ ಗಳು ಮತ್ತು ರೌಂಡ್ ಹೆಡ್ ಲೈಟ್ ಗಳನ್ನೂ ಈ ಎಲೆಕ್ಟ್ರಿಕ್ ಬೈಕ್ ಒಳಗೊಂಡಿದೆ.
ಈ ಎಲೆಕ್ಟ್ರಿಕ್ ಬೈಕ್ ಎಂಜಿನ್ ಜಗದಲ್ಲಿ ಸಾಕಷ್ಟು ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಇಂಧನ ಟ್ಯಾಂಕ್ ಈಗ ಬ್ಯಾಟರಿ ಮತ್ತು ಮೋಟಾರ್ ನಿಯಂತ್ರಕವನ್ನು ಹೊಂದಿದೆ. ಈ ಮೋಟಾರ್ ಸೈಕಲ್ 5 kW ಹಿಂಭಾಗದ ಹಬ್ ಮೋಟಾರ್ ಕೂಡ ಹೊಂದಿದೆ. ಈ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿ ಚಾರ್ಜ್ ಗೆ ಈ ಬೈಕ್ 90 ಕಿ ಮೀ ರೇಂಜ್ ನೀಡುತ್ತದೆ ಎಂದು ಮಾಲೀಕ ತಿಳಿಸಿದ್ದಾರೆ.